Advertisement

Pune: ಪಿಜ್ಜಾ ಆರ್ಡರ್‌ ಮಾಡುವ ಮುನ್ನ ಎಚ್ಚರ.. ಪಿಜ್ಜಾದಲ್ಲಿತ್ತು ಚಾಕುವಿನ ತುಂಡು

11:07 AM Jan 05, 2025 | Team Udayavani |

ಮುಂಬಯಿ: ಬಹುತೇಕರಿಗೆ ಆನ್ಲೈನ್‌ನಲ್ಲಿ ಪಿಜ್ಜಾ ಆರ್ಡರ್‌ ಮಾಡಿ ರುಚಿ ಸವಿಯುವ ಅಭ್ಯಾಸ ಇರುತ್ತದೆ. ಆದರೆ ಆರ್ಡರ್‌ ಮಾಡಿದ ಪಿಜ್ಜಾ ಸೇವಿಸುವ ಮುನ್ನ ಎಚ್ಚರವಾಗಿರಿ.!

Advertisement

ಈ ಮಾತನ್ನು ಹೇಳುವುದಕ್ಕೆ ಒಂದು ಕಾರಣವಿದೆ. ವ್ಯಕ್ತಿಯೊಬ್ಬರಿಗೆ ಪಿಜ್ಜಾದಲ್ಲಿ ಚಾಕುವಿನ ತುಂಡು ಸಿಕ್ಕಿದೆ.

ಪುಣೆ ಮೂಲದ ನಿವಾಸಿ ಅರುಣ್ ಕಾಪ್ಸೆ ಎನ್ನುವವರು ಇತ್ತೀಚೆಗೆ ಸ್ಪೈನ್ ರೋಡ್‌ನ ಜೈ ಗಣೇಶ್ ಎಂಪೈರ್‌ನಲ್ಲಿರುವ  ಔಟ್‌ಲೆಟ್‌ನಿಂದ 596 ರೂಪಾಯಿ ಕೊಟ್ಟು ಪಿಜ್ಜಾವನ್ನು ಆರ್ಡರ್ ಮಾಡಿದ್ದಾರೆ.

ಇದನ್ನೂ ಓದಿ: UP: ವಿವಾಹದ ಮಧ್ಯೆ ಬಾತ್‌ರೂಮ್‌ ಹೋಗಿ ಬರುವುದಾಗಿ ಹೇಳಿ ಚಿನ್ನ – ನಗದು ಜತೆ ವಧು ಪರಾರಿ

ಆರ್ಡರ್‌ ಮನೆಗೆ ಬಂದ ಕೂಡಲೇ ಅರುಣ್‌ ಅದರ ರುಚಿ ನೋಡಲು ಶುರು ಮಾಡಿದ್ದಾರೆ. ಸ್ವಲ್ಪ ಸಮಯದ ನಂತರ ಅರುಣ್‌ ಅವರಿಗೆ ಪಿಜ್ಜಾದಲ್ಲಿ ಏನೋ ಒಂದು ರೀತಿಯ ತುಂಡು ಕಾಣಲು ಸಿಕ್ಕಿದೆ. ಸೂಕ್ಷ್ಮವಾಗಿ ಇದನ್ನು ನೋಡಿದಾಗ ಅದು ಚೂಪಾದ ಚಾಕುವಿನ ತುಂಡಾಗಿತ್ತು. ಇದನ್ನು ನೋಡಿ ಅರುಣ್‌ ಶಾಕ್‌ ಆಗಿದ್ದಾರೆ.

Advertisement

ಇದಾದ ಬಳಿಕ ಅರುಣ್‌ ಈ ವಿಚಾರವನ್ನು ಔಟ್ಲೆಟ್ ಮ್ಯಾನೇಜರ್ ತಿಳಿಸಿದ್ದಾರೆ. ಆರಂಭದಲ್ಲಿ ಮ್ಯಾನೇಜರ್‌ ಹೀಗೆ ಆಗಿರಲು ಸಾಧ್ಯವಿಲ್ಲವೆಂದಿದ್ದಾರೆ. ಆ ಬಳಿಕ ಪಿಜ್ಜಾದಲ್ಲಿರುವ ಚಾಕುವಿನ ಫೋಟೋವನ್ನು ಕಳುಹಿಸಿದ್ದಾರೆ. ಕೂಡಲೇ ಮ್ಯಾನೇಜರ್‌ ಅರುಣ್‌ ಅವರ ನಿವಾಸಕ್ಕೆ ಭೇಟಿ ನೀಡಿದ್ದಾರೆ.

ಮ್ಯಾನೇಜರ್‌ ತಮ್ಮ ಕಡೆಯಿಂದ ತಪ್ಪಾಗಿದೆ ಎಂದು ಒಪ್ಪಿಕೊಂಡು, ಈ ವಿಚಾರವನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳದಂತೆ ಮನವಿ ಮಾಡಿದ್ದಾರೆ. ಪಿಜ್ಜಾಕ್ಕೆ ಯಾವುದೇ ಹಣವನ್ನು ನೀಡುವುದು ಬೇಡವೆಂದು ಹೇಳಿದ್ದಾರೆ.

“ಇದು ಕೇವಲ ನಿರ್ಲಕ್ಷ್ಯವಲ್ಲ, ಇದು ಗಂಭೀರ ಸುರಕ್ಷತೆಯ ಅಪಾಯವಾಗಿದೆ. ಆ ಔಟ್‌ಲೆಟ್‌ನಿಂದ ಪಿಜ್ಜಾಗಳನ್ನು ಖರೀದಿಸುವುದನ್ನು ತಪ್ಪಿಸಬೇಕೆಂದು ನಾನು ಎಲ್ಲರಿಗೂ ಮನವಿ ಮಾಡುತ್ತೇನೆ. ಇಂತಹ ನಿರ್ಲಕ್ಷ್ಯವನ್ನು ಸಹಿಸಲು ಸಾಧ್ಯವಿಲ್ಲ’” ಎಂದು ಅರುಣ್‌ ಹೇಳಿದ್ದಾರೆ.

ಕಾಪ್ಸೆ ಅವರು ಈ ಸಂಬಂಧ ಆಹಾರ ಮತ್ತು ಔಷಧ ಆಡಳಿತಕ್ಕೆ (ಎಫ್‌ಡಿಎ) ದೂರು ನೀಡಲು ಮುಂದಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next