Advertisement
ಈ ಹಿಂದೆ ಯಾವತ್ತೂ ಇಂತಹ ಘಟನೆ ನಡೆದಿರಲಿಲ್ಲ. ಮಂಗಳವಾರ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಡೆಲ್ಲಿ ತಂಡ 205 ರನ್ ಬಾರಿಸಿತ್ತು. ದೊಡ್ಡ ಮೊತ್ತ ಬೆನ್ನುಹತ್ತಿದ ಪುಣೆ ತಂಡ 16.1 ಓವರ್‌ಗೆ 108 ರನ್ ಸೇರಿಸಿ ಆಲೌಟಾಗಿ 97 ರನ್ ಅಂತರದಿಂದ ಸೋಲುಂಡಿತ್ತು. ಆದರೆ ಎಲ್ಲಾ ವಿಕೆಟ್‌ಗಳು ಕ್ಯಾಚ್ ಆಗಿರುವುದು ವಿಶೇಷವಾಗಿದೆ. ಪಂದ್ಯದಲ್ಲಿ ರಿಷಭ್ ಪಂತ್ 3, ಸಂಜು ಸ್ಯಾಮ್ಸನ್ 2, ಕ್ರಿಸ್ ಮಾರಿಸ್ 2, ಶಹಬಾಜ್ ನದೀಂ 1, ಕರುಣ್ ನಾಯರ್ 1, ಅಮಿತ್ ಮಿಶ್ರಾ 1 ಕ್ಯಾಚ್ ತೆಗೆದುಕೊಂಡಿದ್ದಾರೆ. ಜಹೀರ್ ಖಾನ್ ಮತ್ತು ಅಮಿತ್ ಮಿಶ್ರಾ ತಲಾ 3 ವಿಕೆಟ್ ಪಡೆದರೆ, ಕಮಿನ್ಸ್ 2, ನದೀಮ್, ಮಾರಿಸ್ ತಲಾ 1 ವಿಕೆಟ್ ಪಡೆದರು. Advertisement
ಕ್ಯಾಚ್‌ನಲ್ಲಿಯೇ ಬಿತ್ತು ಪುಣೆಯ 10 ವಿಕೆಟ್:ಐಪಿಎಲ್ ದಾಖಲೆ!
09:56 AM Apr 13, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.