Advertisement

ಪುಣೆ ಕನ್ನಡ ಸಂಘ: ಪುರಂದರದಾಸರ 454ನೇ ಆರಾಧನಾ ಮಹೋತ್ಸವ

10:17 AM Feb 16, 2018 | |

ಪುಣೆ: ಕನ್ನಡ ಸಂಘ ಪುಣೆ ವತಿಯಿಂದ ಪುರಂದರದಾಸರ 454ನೇ ಆರಾಧನಾ ಮಹೋತ್ಸವ ವನ್ನು ಫೆ. 3 ರಂದು ಸಂಘದ ಡಾ| ಕಲ್ಮಾಡಿ ಶ್ಯಾಮರಾವ್‌ ಕನ್ನಡ ಮಾಧ್ಯಮ ಹೈಸ್ಕೂಲ್‌ ಸಭಾಂಗಣದಲ್ಲಿ ಆಚರಿಸಲಾಯಿತು.

Advertisement

ಆರಾಧನಾ ಮಹೋತ್ಸವದ ಅಂಗವಾಗಿ ಕಿರಿಯರ ವಿಭಾಗ ಹಾಗೂ ಹಿರಿಯರ ವಿಭಾಗಗಳಲ್ಲಿ ಪುರಂದರದಾಸರ ಕೀರ್ತನೆಗಳನ್ನು ಹಾಡುವ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಒಟ್ಟು 35 ಮಂದಿ ಸ್ಪರ್ಧಿಗಳು ಭಾಗವಹಿಸಿದರು. ಕಿರಿಯರ ವಿಭಾಗದಲ್ಲಿ 22 ಜನರು ಭಾಗವಹಿಸಿದ್ದು, ಕು| ದರ್ಶನಾ ಸುರೇಶ್‌ ಪ್ರಥಮ ಬಹುಮಾನ ಗಳಿಸಿದರು.

ಕು|  ದಿಶಾ ಕೆ. ಹೆಗಡೆ ದ್ವಿತೀಯ ಸ್ಥಾನ, ಕು| ಆರುಷಿ ರಾಮಚಂದ್ರ ತೃತೀಯ ಸ್ಥಾನ ಹಾಗೂ ಕು| ರಾಜಶ್ರೀ ಗಡಮನಿ ಪ್ರೋತ್ಸಾಹಕ  ಬಹುಮಾನವನ್ನು ಪಡೆದುಕೊಂಡರು. ಹಿರಿಯರ ವಿಭಾಗದಲ್ಲಿ ಒಟ್ಟು 13 ಜನರು ಭಾಗವಹಿಸಿದ್ದು, ರûಾ ರಾವ್‌ ಕರಿಯಾ ಮೊದಲ ಸ್ಥಾನ ಪಡೆದರೆ, ಪ್ರಣವ್‌  ಮೂರ್ತಿ ದ್ವಿತೀಯ, ವೈಷ್ಣವಿ ಅವಧಾನಿ ತೃತೀಯ ಹಾಗೂ ಪ್ರೀತಿ ರಾಮಚಂದ್ರ ಪ್ರೋತ್ಸಾಹಕರ ಬಹುಮಾನವನ್ನು ಪಡೆದುಕೊಂಡರು. ಸ್ಪರ್ಧೆಯ ತೀರ್ಪುಗಾರರಾಗಿ ಸಂಗೀತ ತಜ್ಞೆಯರಾದ ಗೀತಾ ಭಟ್‌, ಮಾಧುರಿ ಪುರಾಣಿಕ ಸಹಕರಿಸಿದರು.

ಸಂಗೀತ ಕಾರ್ಯಕ್ರಮ 

ಬಹುಮಾನವನ್ನು  ಅತಿಥಿ ಸುರೇಶ ಪತಕಿ, ಕನ್ನಡ ಸಂಘದ ಉಪಾಧ್ಯಕ್ಷೆ ಇಂದಿರಾ ಸಾಲ್ಯಾನ್‌, ಕಾರ್ಯದರ್ಶಿ ಮಾಲತಿ ಕಲ್ಮಾಡಿ, ಗೀತಾ ಭಟ್‌, ಮಾಧುರಿ ಪುರಾಣಿಕ್‌ ವಿತರಿಸಿದರು. ಸ್ಪರ್ಧೆಯ ನಂತರ ಹಿಂದೂಸ್ಥಾನಿ ಸಂಗೀತ ದಿಗ್ಗಜ ಪಂಡಿತ್‌ ಜಸ್‌ ರಾಜ್‌ ಅವರ ಶಿಷ್ಯರಾದ ಸುರೇಶ ಪತಕಿಯವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.

Advertisement

ಇವರು ಸುಮಾರು ಎರಡು ಗಂಟೆಗಳ ಕಾಲ ಕಲಾವತಿ, ಹಂಸಧ್ವನಿ, ಭೀಮ್‌ ಪಲಾಸ್‌ ಮುಂತಾದ ರಾಗಗಳಲ್ಲಿ ಪುರಂದರದಾಸರ ಹಾಡು ಗಳನ್ನು ಹಾಡಿ  ರಂಜಿಸಿದರು. ಕನ್ನಡ ಮಾಧ್ಯಮ ಶಾಲಾ ಶಿಕ್ಷಕಿ ಶ್ರೇಯಾ ಹಬ್ಬು ಹಾಗೂ ಶಿಕ್ಷಕರಾದ ಸದಾನಂದ ತಾವರೆಗೆರಿ ಕಾರ್ಯಕ್ರಮವನ್ನು ನಿರೂಪಿಸಿದರು.

ಕಾರ್ಯಕ್ರಮದಲ್ಲಿ  ಕನ್ನಡ ಸಂಘದ ಉಪಾಧ್ಯಕ್ಷೆ ಇಂದಿರಾ ಸಾಲ್ಯಾನ್‌, ಕಾರ್ಯದರ್ಶಿ ಮಾಲತಿ ಕಲ್ಮಾಡಿ, ವಿಶ್ವಸ್ಥೆ ರಾಧಿಕಾ ಶರ್ಮ, ಪ್ರಾಂಶುಪಾಲರಾದ ಚಂದ್ರಕಾಂತ ಹಾರಕೂಡೆ, ಜ್ಯೋತಿ ಕಡಕೋಳ, ಸುನೀತಾ ಶಿರಗುಪ್ಪಿ, ಡಾ| ಶೋಭಾ ಜೋಶಿ ಮತ್ತು ಸಂಘದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next