Advertisement

ಪುಣೆ ಸ್ವಾತಂತ್ರ್ಯ ಹೋರಾಟಗಾರ ದಿ|ಮುಂಡಪ್ಪ ಶೆಟ್ಟಿ ಶ್ರದ್ಧಾಂಜಲಿ ಸಭೆ

02:47 PM Jul 12, 2017 | Team Udayavani |

ಪುಣೆ: ಪುಣೆಯ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದಿ| ಮುಂಡಪ್ಪ ಶೆಟ್ಟಿ ಅವರು ಜೂ. 27ರಂದು ನಿಧನ ಹೊಂದಿದ್ದು, ಅವರ ಶ್ರದ್ಧಾಂಜಲಿ ಸಭೆಯು ಜು.  9ರಂದು  ಮಹರ್ಷಿ ನಗರದ ಶಿವಶಂಕರ್‌ ಗಾರ್ಡನ್‌ ಸಭಾ ಗೃಹದಲ್ಲಿ ನಡೆಯಿತು.

Advertisement

ಪುಣೆ ಬಂಟರ ಸಂಘದ ಅಧ್ಯಕ್ಷ ಇನ್ನ ಕುರ್ಕಿಲ… ಬೆಟ್ಟು ಬಾಳಿಕೆ ಸಂತೋಷ್‌ ಶೆಟ್ಟಿ ಅವರು ಪುಷ್ಪವೃಷ್ಟಿಗೈದು ನುಡಿನಮನ ಸಲ್ಲಿಸಿ, ನಗರದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಮಾನವತಾವಾದಿ, ತನ್ನ ಪೂರ್ತಿ ಜೀವನವನ್ನು ಸಮಾಜಕ್ಕೆ ಅರ್ಪಿಸಿಕೊಂಡ ಬಂಟ ಸಮಾಜದ ಅನಘÂì ರತ್ನವೊಂದನ್ನು ನಾವು ಕಳೆದುಕೊಂಡಿದ್ದು, ಅವರ ಕುಟುಂಬಕ್ಕೆ ಮಾತ್ರವಲ್ಲದೆ ನಮಗೆಲ್ಲರಿಗೂ ಅತೀವ ದುಃಖದ ಕ್ಷಣವಾಗಿದೆ. ದಿವಂಗತ ಮುಂಡಪ್ಪ ಶೆಟ್ಟಿಯವರು ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಮಹಾರಾಷ್ಟ್ರದಿಂದ ಸಕ್ರಿಯರಾಗಿ ಭಾಗವಹಿಸಿದ್ದಲ್ಲದೆ ಜೀವನವಿಡೀ ದೇಶಭಕ್ತಿಯ ತುಡಿತವನ್ನು ಹೊಂದಿದ್ದರು. ಬಂಟ ಸಮಾಜಕ್ಕೆ ಗೌರವ ತಂದಿತ್ತ ಇವರು ಪುಣೆ ಬಂಟರ ಸಂಘದ ಭವನದ ಕಾರ್ಯಕ್ಕೂ ಸಮಾಜದ ಮೇಲಿನ ಅಭಿಮಾನದಿಂದ ನೆರವಾಗಿದ್ದರು. ಮರಣದ ನಂತರ ತನ್ನ ದೇಹವನ್ನು ದಾನ ಮಾಡಬೇಕೆಂಬ ಬಯಕೆಯನ್ನು ಹೊಂದಿದ್ದು, ಅವರಿಚ್ಛೆಯಂತೆ ಪುಣೆಯ ಬಿ. ಜೆ. ಮೆಡಿಕಲ… ಕಾಲೇಜಿಗೆ ದೇಹದಾನವನ್ನು ಅವರ ಕುಟುಂಬಿಕರು ಮಾಡಿರುವುದು ಹೆಮ್ಮೆಯ ವಿಚಾರ. ಜೀವನದ ಕೊನೆಯವರೆಗೂ ಅತೀವ ಉತ್ಸಾಹದ ಖನಿಯಾಗಿದ್ದ ಅವರು ಎಲ್ಲರಿಗೂ ಸ್ಫೂರ್ತಿಯ ಸೆಲೆಯಾಗಿದ್ದರು. ಅವರ ಜೀವನಾದರ್ಶಗಳು ನಮಗೆಲ್ಲರಿಗೂ ಮಾದರಿಯಾಗಿದೆ. ಅವರ ಆತ್ಮಕ್ಕೆ ದೇವರು ಚಿರಶಾಂತಿಯನ್ನು ಕರುಣಿಸಲಿ ಹಾಗೂ ಅವರ ಕುಟುಂಬಕ್ಕೆ ಅಗಲಿಕೆಯ ದುಃಖವನ್ನುಸಹಿಸುವ ಶಕ್ತಿಯನ್ನು ನೀಡಲಿ ಎಂದು ಹೇಳಿದರು.

ಸಭೆಯಲ್ಲಿ ಮುಂಡಪ್ಪ ಶೆಟ್ಟಿ ಅವರ ಧರ್ಮಪತ್ನಿ  ಸವಿತಾ ಎಂ. ಶೆಟ್ಟಿ ಮತ್ತು ಮಕ್ಕಳು, ಕುಟುಂಬಿಕರು, ಪುಣೆ ಬಂಟರ ಸಂಘದ ಮಾಜಿ ಅಧ್ಯಕ್ಷರಾದ ಸೀತಾರಾಮ ಶೆಟ್ಟಿ, ಜಯಂತ್‌ ಶೆಟ್ಟಿ, ಸದಾನಂದ ಕೆ.ಶೆಟ್ಟಿ, ಸಮಾಜದ ಇನ್ನಿತರ ಗಣ್ಯರೂ ಸೇರಿದಂತೆ ನೂರಾರು ಸಮಾಜ ಬಾಂಧವರು ಉಪಸ್ಥಿತರಿದ್ದು ಮುಂಡಪ್ಪ ಶೆಟ್ಟಿಯವರ  ಭಾವಚಿತ್ರಕ್ಕೆ ಪುಷ್ಪವೃಷ್ಟಿಗೈದು ನಮನ ಸಲ್ಲಿಸಿದರು.  ಈ ಸಂದರ್ಭ ಮೃತರ ಗೌರವಾರ್ಥ ಎರಡು ನಿಮಿಷಗಳ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.  

Advertisement

Udayavani is now on Telegram. Click here to join our channel and stay updated with the latest news.

Next