Advertisement

ಪುಣೆ: ಅಗತ್ಯ ರಕ್ಷಣಾ ಕಿಟ್‌ಗಳಿಲ್ಲದೆ ಕಾರ್ಯ ನಿರ್ವಹಿಸುತ್ತಿರುವ ಸ್ವಚ್ಛತಾ ಕಾರ್ಮಿಕರು

06:18 PM Apr 14, 2020 | mahesh |

ಪುಣೆ: ಕೋವಿಡ್-19 ವೈರಸ್‌ ಸಾಂಕ್ರಾಮಿಕ ರೋಗವು ನಗರಾದ್ಯಂತ ದೈನಂದಿನ ಜೀವನಕ್ಕೆ ಕುತ್ತು ತಂದಿದ್ದು ಇನ್ನೊಂದೆಡೆ ತ್ಯಾಜ್ಯ ಮತ್ತು ಮರುಬಳಕೆ ಅಗತ್ಯ ಸೇವೆಗಳಲ್ಲಿ ಮುಂಚೂಣಿಯಲ್ಲಿರುವ ಪಿಎಂಸಿ ಕಾರ್ಮಿಕರ ಜೀವಕ್ಕೆ ಗಂಡಾಂತರ ಎದುರಾಗಿದೆ.

Advertisement

3,500 ನೈರ್ಮಲ್ಯ ಕಾರ್ಮಿಕರ ತಂಡವನ್ನು ಹೊಂದಿರುವ ಪುಣೆ ಮೂಲದ ಘನತ್ಯಾಜ್ಯ ಸಂಗ್ರಹ ಮತ್ತು ನಿರ್ವಹಣೆ- ಸ್ವ-ಉದ್ಯೋಗ ತ್ಯಾಜ್ಯ ಸಂಗ್ರಾಹಕರ ಸಹಕಾರ ಸಂಘವು ಕಾರ್ಮಿಕರಿಗೆ ಮುಖವಾಡಗಳು, ಕೈಗವಸುಗಳು ಮತ್ತು ಇತರ ಅಗತ್ಯ ವಸ್ತುಗಳನ್ನು ಒಳಗೊಂಡಿರುವ ಕಡಿಮೆ ಸಂಖ್ಯೆಯ ಸುರಕ್ಷಾ ಕಿಟ್‌ಗಳನ್ನು ಹೊಂದಿರುವುದು ಆತಂಕಕ್ಕೆ ಕಾರಣವಾಗಿದೆ.

ಸ್ವಚ್ಛತಾ ನಿರ್ದೇಶಕ ಹರ್ಷದ್‌ ಬಾರ್ಡೆ ಅವರ ಪ್ರಕಾರ, ಸಂಸ್ಥೆಯು ಶೇಕಡಾ 95ರಷ್ಟು ಸಿಬಂದಿಯನ್ನು ಹೊಂದಿದೆ. ಮೊಹರು ಮಾಡಿದ ಪ್ರದೇಶಗಳಿಗೆ ಪ್ರವೇಶ ಸೀಮಿತ ವಾಗಿದ್ದರೂ, ಇತರ ಪ್ರದೇಶಗಳಿಂದ ಕಸ ಸಂಗ್ರಹವು ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿದೆ.

ಪುಣೆ ಮುನ್ಸಿಪಲ್‌ ಕಾರ್ಪೊರೇಷನ್‌ ನಮಗೆ 6,500 ಕೈಗವಸುಗಳು, ಮುಖವಾಡಗಳು ಮತ್ತು ಸಾಬೂನುಗಳನ್ನು ಒದಗಿಸಿದೆ ಮತ್ತು ಪ್ರತಿ ಸದಸ್ಯರಿಗೆ ಹೆಚ್ಚುವರಿ ಸಾಬೂನು ಗಳಿಗೆ ವ್ಯವಸ್ಥೆ ಮಾಡುತ್ತಿದೆ. ನಾವು 7,000 ಕೈಗವಸುಗಳು ಮತ್ತು ಶಿರೋವಸ್ತ್ರಗಳನ್ನು ಪ್ರತಿ ಸದಸ್ಯರಿಗೆ 2ರಂತೆ ಹೊಂದಿದ್ದೇವೆ. ಅದನ್ನು ನಾವು ಇನ್ನೊಂದು ಸಂಸ್ಥೆಯಿಂದ ಸ್ವೀಕರಿಸಿದ್ದೇವೆ. ಆದಾಗ್ಯೂ, ಈ ಸಂಪನ್ಮೂಲಗಳು ಸಾಕಾಗುವುದಿಲ್ಲ, ಎಂದು ಬಾರ್ಡೆ ಹೇಳಿದರು.

ಮುಂಬರುವ ತಿಂಗಳುಗಳಿಂದ ಸ್ವಚ್ಛತಾ ವಿಭಾಗದ ಪ್ರತಿ ಸದಸ್ಯರಿಗೆ ಆರು ಕೈಗವಸುಗಳು ಬೇಕಾಗುತ್ತವೆ. ಅಂದರೆ 21,000 ಕೈಗವಸುಗಳು, ಸಾಬೂನುಗಳು ಮತ್ತು 7,000 ಶಿರೋವಸ್ತ್ರಗಳು (ಪ್ರತಿ ಸದಸ್ಯರಿಗೆ 2) ಅಗತ್ಯವಾಗಿದೆ ಎಂದು ತಿಳಿಸಿದ್ದಾರೆ.

Advertisement

ಪಿಎಂಸಿ ಹೆಚ್ಚಿನ ಸುರಕ್ಷತಾ ಕಿಟ್‌ಗಳನ್ನು ಸಂಗ್ರಹಿಸಲು ಪ್ರಯತ್ನಿಸುತ್ತಿದ್ದರೂ, ಕೈಗವಸುಗಳು ಮತ್ತು ಮುಖವಾಡಗಳಿಗಾಗಿ ದಾನಿಗಳು ಮತ್ತು ಸಂಘ ಸಂಸ್ಥೆಗಳ ಸಹಾಯಕ್ಕಾಗಿ ಸ್ವತ್ಛತಾ ಇಲಾಖೆ ಮನವಿ ಮಾಡಿದೆ. ಸ್ವತ್ಛತಾ ಕಾರ್ಮಿಕರು ಧರಿಸಿರುವ ಮುಖವಾಡಗಳನ್ನು ತೊಳೆಯಬಹುದು ಎಂದರು.

ಮುಖವಾಡವು ಒಂದು ಹೊಸ ವಿಷಯ
ಔಧ್‌ ಕೋಟ್‌ಬಾಗಿ ಲೇನ್‌ನಲ್ಲಿ ಕೆಲಸ ಮಾಡುವ ಮಂಗಲ್‌ ಗಾಯಕ್ವಾಡ್‌ಗೆ ಮುಖವಾಡವು ಒಂದು ಹೊಸ ವಿಷಯ, ಆದಾಗ್ಯೂ, ಅವಳು ಅದನ್ನು ಸರಿಯಾಗಿ ಧರಿಸುವುದಿಲ್ಲ. ಮೊದಲು ನಾವು ಕೈಗವಸುಗಳನ್ನು ಧರಿಸುತ್ತಿದ್ದೆವು. ಆದರೆ ಈಗ ಕೋವಿಡ್‌ -19 ರಿಂದಲೂ ಮುಖವಾಡವನ್ನು ಧರಿಸಲು ನಮಗೆ ತಿಳಿಸಲಾಗಿದೆ. ಇವುಗಳಲ್ಲಿ ಎರಡು ನಾವು ಸ್ವೀಕರಿಸಿದ್ದೇವೆ. ಆರಂಭದಲ್ಲಿ ಇದು ಅನಾನುಕೂಲವಾಗಿತ್ತು. ಆದರೆ ನಮಗೆ ಬೇರೆ ಆಯ್ಕೆ ಇಲ್ಲದಿರುವುದರಿಂದ ಮತ್ತು ನಾವು ಅನಾರೋಗ್ಯಕ್ಕೆ ಒಳಗಾಗಲು ಬಯಸುವುದಿಲ್ಲವಾದ್ದರಿಂದ ನಾವು ಅದನ್ನು ಧರಿಸಬೇಕಾಗಿದೆ ಎಂದು ಅವರು ಹೇಳಿದರು.

ತರಾತುರಿಯಲ್ಲಿ ತರಬೇತಿ ನೀಡುವುದು ಕಷ್ಟ
ಪಿಎಂಸಿಯಾದ್ಯಂತ ಕಾರ್ಯಾಚರಣೆಗಳ ಮೇಲ್ವಿಚಾರಣೆ ನಡೆಸುತ್ತಿರುವ ಕಲ್ಯಾಣಿ ಪಾಟೀಲ್, ಕೋವಿಡ್‌ -19 ಬಗ್ಗೆ ತ್ಯಾಜ್ಯ ತೆಗೆಯುವವರಿಗೆ ಇಷ್ಟು ಕಡಿಮೆ ಸಮಯದಲ್ಲಿ ತರಬೇತಿ ನೀಡುವುದು ನಮಗೆ ಕಷ್ಟ. ನಾವು ಕರಪತ್ರಗಳ ಸಹಾಯದಿಂದ ವಾರ್ಡ್‌ ಸಂಯೋಜಕರಿಗೆ ತರಬೇತಿ ನೀಡಿದ್ದೇವೆ. ಎಲ್ಲರಿಗೂ ಸ್ವತ್ಛಗೊಳಿಸುವ ಸರಿಯಾದ ಮಾರ್ಗಗಳು ಮತ್ತು ಮುಖವಾಡಗಳು ಮತ್ತು ಕೈಗವಸುಗಳನ್ನು ಧರಿಸುವ ಪ್ರಾಮುಖ್ಯತೆಯನ್ನು ವಿವರಿಸುತ್ತೇವೆ. ಆರಂಭದಲ್ಲಿ, ಅವರಲ್ಲಿ ಬಹಳಷ್ಟು ಜನರು ಮುಖವಾಡಗಳ ಧರಿಸಲು ಹಿಂಜರಿಯುತ್ತಿದ್ದರು ಎಂದು ಅವರು ತಿಳಿಸಿ¨ªಾರೆ.

Advertisement

Udayavani is now on Telegram. Click here to join our channel and stay updated with the latest news.

Next