Advertisement
ಜ. 6 ರಂದು ನಗರದ ಸ್ವಾರ್‌ಗೆàಟ್ ಹತ್ತಿರದಲ್ಲಿರುವ ಸನಾಸ್ ಮೈದಾನದಲ್ಲಿ ನಡೆದ ಪುಣೆ ಬಂಟರ ಸಂಘದ ವಾರ್ಷಿಕ ಕ್ರೀಡೋತ್ಸವದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಆಧುನಿಕ ತಂತ್ರಜ್ಞಾನ ಯುಗದಲ್ಲಿ ನಮ್ಮ ಮಕ್ಕಳು ಮೈದಾನದಲ್ಲಿ ದೇಹದಂಡಿಸಿ ಆಡುತ್ತಿದ್ದ ಆಟಗಳನ್ನು ಮರೆತು ಮೊಬೈಲ್, ಕಂಪ್ಯೂಟರ್ ಆಟಗಳನ್ನು ನೆಚ್ಚಿಕೊಂಡಿದ್ದು ಮಾನಸಿಕ ವಾಗಿಯೂ ದುರ್ಬಲತೆಯನ್ನು ಹೊಂದುವ ಸ್ಥಿತಿಯಲ್ಲಿರುವುದು ದುರದೃಷ್ಟವಾಗಿದೆ. ಅಂತಹ ಮಕ್ಕಳಿಗೆ ಕ್ರೀಡಾಕೂಟಗಳಿಂದ ಪ್ರೇರಣೆ ದೊರೆಯಲಿ ಎಂಬ ಉದ್ದೇಶ ನಮ್ಮದಲ್ಲದೆ ರಾಜ್ಯ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾಪಟುಗಳಾಗಿ ಬೆಳೆಯಲು ನಮ್ಮ ಮಕ್ಕಳಿಗೆ ಪ್ರೋತ್ಸಾಹ ತುಂಬುವ ಕಾರ್ಯವನ್ನೂ ನಾವು ಮಾಡುತ್ತಿದ್ದೇವೆ. ಸಂಘದ ಮಹತ್ವಾಕಾಂಕ್ಷೆಯ ಕಲ್ಪವೃಕ್ಷ ಯೋಜನೆಯ ಮೂಲಕ ಕ್ರೀಡೆಗೆ ಇನ್ನಷ್ಟು ಉತ್ತೇಜನ ನೀಡಿ ಮಕ್ಕಳನ್ನು ಪ್ರೋತ್ಸಾಹಿಸುವ ಗುರಿ ಸಂಘದ ಭವಿಷ್ಯದ ಉದ್ದೇಶವಾಗಿದೆ ಎಂದರು.
Related Articles
Advertisement
ನಗರಸೇವಕಿಯರಾದ ಸರಸ್ವತಿ ಕೆ. ಶೆಂಡೆY, ಸ್ಮಿತಾ ಪಿ. ವಸ್ತೆ, ದತ್ತವಾಡಿ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ದೇವದಾಸ್ ಗೆವಾರೆ, ಸ್ವಾರ್‌ಗೆàಟ್ ಪೊಲೀಸ್ ಇನ್ಸ್‌ಪೆಕ್ಟರ್ ಅಶೋಕ್ ಕದಮ್ ಉಪಸ್ಥಿತರಿದ್ದು ಶುಭ ಹಾರೈಸಿದರು. ಅತಿಥಿ-ಗಣ್ಯರನ್ನು ಸತ್ಕರಿಸಲಾಯಿತು. ಕ್ರೀಡೋತ್ಸವದಲ್ಲಿ ಉಪಸ್ಥಿತರಿದ್ದ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರುಗಳನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ಸಂಘದ ಗೌರವಾಧ್ಯಕ್ಷ ಜಗನ್ನಾಥ ಬಿ. ಶೆಟ್ಟಿ, ಅಧ್ಯಕ್ಷರಾದ ಜಯಂತ್ ಶೆಟ್ಟಿ, ಮೊಳಹಳ್ಳಿ ಬಾಲಕೃಷ್ಣ ಹೆಗ್ಡೆ, ಸಂಘದ ಉಪಾಧ್ಯಕ್ಷರಾದ ಸತೀಶ್ ಶೆಟ್ಟಿ, ಮೋಹನ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಅಜಿತ್ ಕೆ. ಹೆಗ್ಡೆ, ಗೌರವ ಕೋಶಾಧಿಕಾರಿ ವೈ. ಚಂದ್ರಹಾಸ ಶೆಟ್ಟಿ, ಕ್ರೀಡಾ ಸಮಿತಿ ಕಾರ್ಯಾಧ್ಯಕ್ಷ ದಿನೇಶ್ ಶೆಟ್ಟಿ ಕಳತ್ತೂರು, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಲತಾ ಎಸ್. ಶೆಟ್ಟಿ, ಉತ್ತರ ಪ್ರಾದೇಶಿಕ ಕಾರ್ಯಾಧ್ಯಕ್ಷ ಗಣೇಶ್ ಪೂಂಜಾ, ಯುವ ವಿಭಾಗದ ಕಾರ್ಯಾಧ್ಯಕ್ಷ ಯಶ್‌ರಾಜ್ ಶೆಟ್ಟಿ ಉಪಸ್ಥಿತರಿದ್ದರು.
ಸಂಘದ ಕ್ರೀಡಾ ಸಮಿತಿ ಕಾರ್ಯಾಧ್ಯಕ್ಷರಾದ ದಿನೇಶ್ ಶೆಟ್ಟಿ ಕಳತ್ತೂರು ಕ್ರೀಡಾಜ್ಯೋತಿಯನ್ನು ಹಿಡಿದು ಮೈದಾನದ ಸುತ್ತ ಕ್ರೀಡಾಳುಗಳೊಂದಿಗೆ ಪಥಸಂಚಲನ ನಡೆಸಿದರು. ಬೆಳಗ್ಗೆಯಿಂದ ಸಂಜೆ ಯವರೆಗೆ ನಡೆದ ಕ್ರೀಡಾಕೂಟದಲ್ಲಿ ಸಮಾಜ ಬಾಂಧವರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿ ದ್ದರು. ವಯೋಮಿತಿಗೆ ಅನುಗುಣವಾಗಿ ವೈವಿಧ್ಯಮಯ ಕ್ರೀಡಾಸ್ಪರ್ಧೆಗಳು ನಡೆದವು. ಪುಣೆಯ ವಿವಿಧ ಸಂಘಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.
ಬೆಳಗ್ಗಿನ ಉಪಾಹಾರ, ಮಧ್ಯಾಹ್ನದ ಭೋಜನ, ಚಹಾ ಪಾನೀಯಗಳ ವ್ಯವಸ್ಥೆಯನ್ನು ಮಾಡಲಾ ಗಿತ್ತು. ಸಂಘದ ಪದಾಧಿಕಾರಿಗಳಾದ ರಾಮಕೃಷ್ಣ ಎಂ. ಶೆಟ್ಟಿ, ಶ್ರೀನಿವಾಸ್ ಶೆಟ್ಟಿ, ಚಂದ್ರಶೇಖರ ಶೆಟ್ಟಿ ನಿಟ್ಟೆ, ಗಣೇಶ್ ಶೆಟ್ಟಿ, ವಿವೇಕಾನಂದ ಶೆಟ್ಟಿ ಆವರ್ಸೆ, ತಾರಾನಾಥ ರೈ ಮೇಗಿನಗುತ್ತು, ಶಶೀಂದ್ರ ಶೆಟ್ಟಿ, ಗಣೇಶ್ ಹೆಗ್ಡೆ, ವಿಶ್ವನಾಥ ಎಸ್. ಶೆಟ್ಟಿ, ವಸಂತ್ ಶೆಟ್ಟಿ ಬೈಲೂರು, ಪ್ರಶಾಂತ್ ಎ. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಲತಾ ಎಸ್. ಶೆಟ್ಟಿ, ಪದಾಧಿಕಾರಿಗಳಾದ ಸುಚಿತ್ರಾ ಶ್ರೀನಿವಾಸ್ ಶೆಟ್ಟಿ, ಶಮ್ಮಿ ಅಜಿತ್ ಹೆಗ್ಡೆ, ದಿವ್ಯಾ ಸಂತೋಷ್ ಶೆಟ್ಟಿ, ಸಾರಿಕಾ ಚಂದ್ರಹಾಸ ಶೆಟ್ಟಿ, ಸಂಧ್ಯಾ ರಾಮಕೃಷ್ಣ ಶೆಟ್ಟಿ, ನೀನಾ ಬಾಲಕೃಷ್ಣ ಶೆಟ್ಟಿ, ನಯನಾ ಜಯ ಶೆಟ್ಟಿ, ನಿವೇದಿತಾ ಸುಧಾಕರ್ ಶೆಟ್ಟಿ, ವಿನಯಾ ಉಮಾನಾಥ ಶೆಟ್ಟಿ ಹಾಗೂ ಗೀತಾ ಜಯ ಶೆಟ್ಟಿ, ವೀಣಾ ಪ್ರಶಾಂತ್ ಶೆಟ್ಟಿ, ಗೀತಾ ರತ್ನಾಕರ್ ಶೆಟ್ಟಿ ಹಾಗೂ ಆಶಾ ಪ್ರವೀಣ್ ಶೆಟ್ಟಿ, ಸಂಘದ ಉತ್ತರ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಪ್ರಮೀಳಾ ಎಸ್. ಶೆಟ್ಟಿ ಮತ್ತು ಸದಸ್ಯರು, ದಕ್ಷಿಣ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಅಂಬಿಕಾ ವಿ. ಶೆಟ್ಟಿ , ಸದಸ್ಯರು, ಯುವ ವಿಭಾಗದ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಪುಣೆಯಲ್ಲಿರುವ ಬಂಟ ಸಮಾಜ ಬಾಂಧವರ ಬಗ್ಗೆ ತುಂಬು ಅಭಿಮಾನವಿದೆ.ನಗರ ಸೇವಕನಾಗಿ ಕಾರ್ಯನಿರ್ವಹಿಸುತ್ತಿರುವ ನಾನು ನಿಮ್ಮ ಯಾವುದೇ ರೀತಿಯ ಸಮಸ್ಯೆಗಳಿದ್ದಲ್ಲಿ ಪರಿಹಾರಕ್ಕಾಗಿ ಪ್ರಾಮಾಣಿಕವಾಗಿ ಶ್ರಮಿಸುವೆ.– ರಘುನಾಥ ಗೌಡ,ನಗರ ಸೇವಕರು 40 ವರ್ಷಗಳಿಂದ ಬಂಟರ ಸಂಘ ಪುಣೆಯಲ್ಲಿ ಹಲವಾರು ಸಾಮಾಜಿಕ ಕಾರ್ಯ ಗಳೊಂದಿಗೆ ಗುರುತಿಸಿಕೊಂಡಿದೆಯಲ್ಲದೆ ಸಮಾಜದ ಜನರು ಪುಣೆಯ ಅಭಿವೃದ್ಧಿಗೂ ಕೊಡುಗೆ ನೀಡುತ್ತಾ ಬಂದಿರುತ್ತಾರೆ. ಇಂತಹ ಸಮಾಜ ಬಾಂಧವರನ್ನು ನಾನು ಅಭಿನಂದಿಸುತ್ತೇನೆ.
-ಮಹೇಶ್ ನಾಮೆªàವ್ ರಾವ್ ಲಡ್ಕತ್ ನಗರ ಸೇವಕರು ಮಾನಸಿಕ ವಿಕಾಸಕ್ಕೆ ಕ್ರೀಡೆ ಅಗತ್ಯ. ಬದಲಾಗುತ್ತಿರುವ ಕಾಲಘಟ್ಟದಲ್ಲಿ ಮಕ್ಕಳು ವಿಡಿಯೋ ಗೇಮ್‌ಗಳ ದಾಸರಾಗುತ್ತಿದ್ದು, ದೈಹಿಕ ಆರೋಗ್ಯ ಕಾಪಾಡುವಲ್ಲಿ ಇಂತಹ ಕ್ರೀಡಾ ಕೂಟ ಆಯೋಜಿಸುತ್ತಿರುವುದು ಶ್ಲಾಘನೀಯ.
– ಧೀರಜ್ ಆರ್. ಘಾಟೆ, ನಗರ ಸೇವಕರು ಚಿತ್ರ-ವರದಿ : ಕಿರಣ್ ಬಿ. ರೈ ಕರ್ನೂರು