ಭುವನೇಶ್ವರ: ಪುರಿ ಜಗನ್ನಾಥ ದೇಗುಲದ ಸಮೀಪವಿರುವ ಲಕ್ಷ್ಮೀ ಮಾರುಕಟ್ಟೆ ಸಂಕೀರ್ಣ 3 ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಕಾಂಪ್ಲೆಕ್ಸ್‌ನ ಹೋಟೆಲ್‌ನಲ್ಲಿದ್ದ 140ಕ್ಕೂ ಅಧಿಕ ಪ್ರವಾಸಿಗರನ್ನು ರಕ್ಷಿಸಿ, ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾಂಪ್ಲೆಕ್ಸ್‌ನಲ್ಲಿದ್ದ ಬಟ್ಟೆ ಅಂಗಡಿಯೊಂದಕ್ಕೆ ಬುಧವಾರ ರಾತ್ರಿ 8 ಗಂಟೆ ವೇಳೆಗೆ ಬೆಂಕಿ ಹೊತ್ತಿಕೊಂಡಿದೆ. ಸಂಕೀರ್ಣದ ಎಲ್ಲ ಕಟ್ಟಡಗಳಿಗೂ ಬೆಂಕಿ ವ್ಯಾಪಿಸಿದ ಹಿನ್ನೆಲೆ ಅಗ್ನಿಶಾಮಕದಳಕ್ಕೆ ನಂದಿಸಲು ಕಷ್ಟವಾಗಿದೆ. ನಿರಂತರ ಪ್ರಯತ್ನದಿಂದ ಗುರುವಾರ ಮಧ್ಯಾಹ್ನದ ವೇಳೆ ಪರಿಸ್ಥಿತಿ ಹತೋಟಿಗೆ ಬಂದಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಜೀವಹಾನಿಯಾಗಿಲ್ಲ. ಬೆಂಕಿ ನಂದಿಸುವ ಪ್ರಯತ್ನದಲ್ಲಿ ಕೆಲ ಅಗ್ನಿಶಾಮಕದಳ ಸಿಬ್ಬಂದಿ ಗಾಯಗೊಂಡಿದ್ದಾರೆಂದು ಹೇಳಿದ್ದಾರೆ.