Advertisement

ಪುಣೆಯ ಕಾಸ್ಮಸ್‌ ಬ್ಯಾಂಕ್‌ ಸರ್ವರ್‌ ಅಟ್ಯಾಕ್‌: 94 ಕೋಟಿ ರೂ. ಲೂಟಿ

05:18 PM Aug 14, 2018 | udayavani editorial |

ಪುಣೆ : ಇಲ್ಲಿನ ಕಾಸ್ಮಸ್‌ ಬ್ಯಾಂಕಿನ ಕಂಪ್ಯೂಟರ್‌ ವ್ಯವಸ್ಥೆಯ ಸರ್ವರ್‌ ಮೇಲೆ ಮಾಲ್ವಾರ್‌ ಅಟ್ಯಾಕ್‌ ನಡೆದು ಕೇವಲ ಎರಡೇ ದಿನಗಳ ಒಳಗೆ 94 ಕೋಟಿ ರೂ.ಗಳನ್ನು  ಲೂಟಿ ಮಾಡಲಾಗಿದೆ.

Advertisement

ಬ್ಯಾಂಕಿನ ವೀಸಾ ಮತ್ತು ರೂಪೇ ಡೆಬಿಟ್‌ ಕಾರ್ಡುಗಳನ್ನು ಕ್ಲೋನ್‌ ಮಾಡುವ ಮೂಲಕ ಆ.11ರಂದು 76 ಕೋಟಿ ರೂ. ಮತ್ತು ಆ.12ರಂದು 15 ಕೋಟಿ ರೂ.ಗಳನ್ನು ಲೂಟಿ ಮಾಡಲಾಗಿದೆ. ಈ ರೀತಿ ಲೂಟಿ ಮಾಡಲಾಗಿರುವ ಒಟ್ಟು 94 ಕೋಟಿ ರೂ. ಗಳು ವಿದೇಶದಲ್ಲಿನ ಬ್ಯಾಂಕ್‌ ಖಾತೆಗಳಗೆ ಜಮೆಯಾಗಿದೆ.

ಈ ಭಾರೀ ಪ್ರಮಾಣದ ಲೂಟಿ ನಡೆದಿರುವುದು ಗಮನಕ್ಕೆ ಬಂದೊಡನೆಯೇ ಬ್ಯಾಂಕು ತನ್ನ ಸರ್ವರ್‌, ಆನ್‌ಲೈನ್‌, ಮೊಬೈಲ್‌ ಮತ್ತು ಎಟಿಎಂ  ವ್ಯವಹಾರಗಳನ್ನು ಮುಚ್ಚಿದೆ.

ಈ ಬಗ್ಗೆ  ಹೇಳಿಕೆ ನೀಡಿರುವ ಬ್ಯಾಂಕ್‌, ಇದು ಸಂಪೂರ್ಣವಾಗಿ ಬ್ಯಾಂಕಿಗೆ ಆಗಿರುವ ನಷ್ಟವೇ ಹೊರತು ನಮ್ಮ ಗ್ರಾಹಕರಿಗೆ ಅಲ್ಲ ಎಂದು ಸ್ಪಷ್ಟಪಡಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next