ಪುಣೆ, ಸೆ. 12: ಮಾಸ್ಕ್ ಗಳನ್ನು ಧರಿಸದವರು ಮತ್ತು ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿ ಸುವವರ ವಿರುದ್ಧ ಪುಣೆ ಮಹಾನಗರ ಪಾಲಿಕೆ (ಪಿಎಂಸಿ) ಜತೆಗೆ ಸೇರಿಕೊಂಡು ಕಾರ್ಯಾಚರಣೆ ಪ್ರಾರಂಭಿಸಿರುವ ಪುಣೆ ಪೊಲೀಸರು, ಒಂದು ವಾರದಲ್ಲಿ ಸುಮಾರು 28,000 ಜನರಿಗೆ ದಂಡ ವಿಧಿಸಿದ್ದಾರೆ.
ಸೆ. 2 ಮತ್ತು ಸೆ. 10ರ ನಡುವೆ ಸಾರ್ವಜನಿಕ ಸ್ಥಳಗಳಲ್ಲಿ ಕೋವಿಡ್‌ನಿಯಮಗಳನ್ನು ಉಲ್ಲಂಘಿಸಿದ ಒಟ್ಟು 27,989 ಜನರನ್ನು ಪತ್ತೆ ಮಾಡಲಾಗಿದೆ ಎಂದು ಪುಣೆ ಪೊಲೀಸ್ ಡಿಸಿಪಿ ಬಚ್ಚನ್ ಸಿಂಗ್ ಹೇಳಿದ್ದಾರೆ. ಮಾಸ್ಕ್ ಧರಿಸದವರಿಗೆ ತಲಾ 500 ರೂ.ದಂಡ ವಿಧಿಸಿದ್ದು, ಒಟ್ಟು 13,994,500 ರೂ. ದಂಡ ವಸೂಲಿ ಮಾಡಲಾಗಿದೆ ಎಂದಿದ್ದಾರೆ. ಪುಣೆ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಮಾಸ್ಕ್ ನಿಯಮವನ್ನು ಉಲ್ಲಂಘಿಸಿದವರಿಂದ ಸುಮಾರು 1.5 ಕೋಟಿ ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ರಾಜೇಶ್ ದೇಶ್ಮುಖ್ ಹೇಳಿದ್ದಾರೆ.
ಥಾಣೆ ನಗರ: ಮುಖಗವಸು ಧರಿಸದಿದ್ದರೆ 500 ರೂ. ದಂಡ :
ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಥಾಣೆ ನಗರದಲ್ಲಿ ಮುಖಗವಸು ಧರಿಸದವರಿಗೆ 500 ರೂ. ದಂಡ ವಿಧಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಥಾಣೆ ಮಹಾನಗರ ಪಾಲಿಕೆ ಆಯುಕ್ತ ವಿಪಿನ್ ಶರ್ಮಾ ಅವರು ಶುಕ್ರವಾರ ಈ ಕುರಿತು ಆದೇಶ ಹೊರಡಿಸಿದ್ದಾರೆ. ನಗರದಲ್ಲಿ ಕೋವಿಡ್ ಪ್ರಕರಣ ವೇಗವಾಗಿ ಹೆಚ್ಚುತ್ತಿರುವ ಹಿನ್ನೆಲೆ ಈ ಕ್ರಮವು ಅಗತ್ಯವಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಶುಕ್ರವಾರ ರಾತ್ರಿಯವರೆಗೆ ಥಾಣೆ ನಗರದಲ್ಲಿ 29,463 ಕೋವಿಡ್ ಪ್ರಕರ ಣಗಳು ಮತ್ತು 885 ಸಾವು ದಾಖಲಾಗಿವೆ. ಥಾಣೆ ಜಿಲ್ಲೆಯ ಇತರ ಮನಪಾ ಕೂಡ ಇತ್ತೀಚೆಗೆ ಇದೇ ರೀತಿಯ ಆದೇಶ ಹೊರಡಿಸಿವೆ. ಥಾಣೆ ನಗರ: ಮುಖಗವಸು ಧರಿಸದಿದ್ದರೆ 500 ರೂ. ದಂಡ :