Advertisement

ಪಂಪ್‌ವೆಲ್‌ ಬಸ್‌ ನಿಲ್ದಾಣ; ಸಮಗ್ರ ವರದಿ ಸಲ್ಲಿಸಲು ಸೂಚನೆ

11:29 AM Oct 11, 2017 | Team Udayavani |

ಮಹಾನಗರ: ಪಂಪ್‌ ವೆಲ್‌ ಬಸ್‌ ನಿಲ್ದಾಣದ ಬಗ್ಗೆ ಪ್ರಸ್ತಾವನೆ ಕುರಿತು ಸಮಗ್ರ ವರದಿಯನ್ನು ಒಂದು ವಾರದೊಳಗೆ ಸಲ್ಲಿಸಬೇಕು ಎಂದು ಶಾಸಕ ಜೆ.ಆರ್‌. ಲೋಬೋ ಹೇಳಿದರು.ಜಿಲ್ಲಾಧಿಕಾರಿ ಕಚೇರಿಯಲ್ಲಿ ಪಂಪ್‌ ವೆಲ್‌ ಬಸ್‌ ನಿಲ್ದಾಣದ ಬಗ್ಗೆ ಅವರು ಮಾತನಾಡಿದರು.

Advertisement

ಬಸ್‌ ನಿಲ್ದಾಣದ ಕುರಿತು ನೀಡಿರುವ ಮಾಹಿತಿ ಸಮರ್ಪಕವಾಗಿಲ್ಲ. ಇದರ ಬಗ್ಗೆ ಕೂಲಂಕಷ ಮಾಹಿತಿ ಅಗತ್ಯವಿದೆ. ಖಾಸಗಿ ಸಂಸ್ಥೆಗೆ ಮಾಹಿತಿ ಒದಗಿಸುವ ಬಗ್ಗೆ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದರು.

ಈ ಕುರಿತ ಪ್ರಸ್ತಾವನೆಯನ್ನು ಪರಿಶೀಲಿಸಲು ಒಂದು ತಾಂತ್ರಿಕ ಸಮಿತಿಯನ್ನು ರಚಿಸುವಂತೆ ಸಭೆಯಲ್ಲಿ ನಿರ್ಣಯಿಸಲಾಯಿತು. ಪ್ರಸ್ತಾವನೆ ಬಂದ ಬಳಿಕ ನಿರ್ಧಾರವನ್ನು ತೆಗೆದುಕೊಂಡು ವರದಿಯನ್ನು ಅನುಮೋದನೆಗೆ ಸಲ್ಲಿಸುವಂತೆಯೂ ಸಭೆಗೆ ಶಾಸಕರು ತಿಳಿಸಿದರು. ಖಾಸಗಿ ಸಂಸ್ಥೆಗಳು ನೀಡಿದ ಪಂಪ್‌ವೆಲ್‌ ಬಸ್‌ ನಿಲ್ದಾಣದ ವಿನ್ಯಾಸದ ಬಗೆಗಿನ ಪ್ರಾತ್ಯಕ್ಷಿಕೆಯನ್ನು ಸಭೆಯಲ್ಲಿ ವೀಕ್ಷಿಸಲಾಯಿತು.

ಮೇಯರ್‌ ಕವಿತಾ ಸನಿಲ್‌, ಜಿಲ್ಲಾಧಿಕಾರಿ ಡಾ| ಕೆ.ಜಿ. ಜಗದೀಶ್‌, ಆಯುಕ್ತ ನಜೀರ್‌ ಅಹ್ಮದ್‌, ಮುಖ್ಯ ಸಚೇತಕ ಎಂ. ಶಶಿಧರ್‌ ಹೆಗ್ಡೆ, ಸ್ಥಾಯೀ ಸಮಿತಿ ಅಧ್ಯಕ್ಷ ಅಬ್ದುಲ್‌ ರವೂಫ್‌ ಸಭೆಯಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next