Advertisement

ಕಲ್ಲುಗಣಿ ಸ್ಫೋಟಕ್ಕೆ ಪಂಪ್‌ಹೌಸ್‌ ಗೋಡೆ ಕುಸಿತ

04:12 PM Mar 31, 2021 | Team Udayavani |

ದೇವನಹಳ್ಳಿ: ಕಲ್ಲು ಗಣಿಗಾರಿಕೆಯಲ್ಲಿ ಬಳಸಿದಸ್ಫೋಟದ ಸದ್ದಿಗೆ ತೆರೆದ ಬಾವಿಯ ಪಾರ್ಶ್ವಭಾಗಕುಸಿತಗೊಂಡಿದ್ದು, ಪಂಪ್‌ಹೌಸ್‌ ಜಖಂಗೊಂಡಿದೆಎಂದು ತೈಲಗೆರೆ ಗ್ರಾಮದ ರಾಮಚಂದ್ರಪ್ಪಆರೋಪಿಸಿದ್ದಾರೆ.ತಾಲೂಕಿನ ತೈಲಗೆರೆ ಗ್ರಾಮದಲ್ಲಿ ಕಲ್ಲುಒಡೆಯಲು ಬಳಸುವ ಸ್ಫೋಟಕಗಳ ಸಿಡಿತಕ್ಕೆ ತೆರೆದಬಾವಿ, ಶೆಡ್‌ ಶಿಥಿಲಗೊಂಡಿದೆ. ಚಿಕ್ಕಗೊಲ್ಲಹಳ್ಳಿ,ಮಾಯಸಂದ್ರ, ಮೀಸಗಾನಗಳ್ಳಿ, ತೈಲಗೆರೆ,ಮುದ್ದನಾಯಕನಹಳ್ಳಿ ವ್ಯಾಪ್ತಿಯಲ್ಲಿ ಮಿತಿಮೀರಿಕಲ್ಲು ಸ್ಫೋಟಿಸಲಾಗುತ್ತಿದೆ. ಅದರಿಂದ ಶಬ್ದಮಾಲಿನ್ಯದ ಜೊತೆ ಹಲವು ಮನೆಗಳುಬಿರುಕುಬಿಟ್ಟಿವೆ.

Advertisement

ಗ್ರಾಮಗಳಲ್ಲಿ ಅಂತರ್ಜಲಕುಸಿತದಿಂದ ಕುಡಿಯುವ ನೀರಿನ ಸಮಸ್ಯೆಉಲ್ಬಣಗೊಂಡಿದೆ. ಅದರ ಜೊತೆಗೆಕೊಳವೆಬಾವಿಗಳಲ್ಲಿ ಅಂತರ್ಜಲ ಬತ್ತಿಹೋಗುತ್ತಿದೆ.ರೈತರು ಬೆಳೆದ ಬೆಳೆ ಗಣಿ ದೂಳಿನಿಂದನಷ್ಟವಾಗುತ್ತಿದೆ. ಅನೇಕ ಬಾರಿ ಅಧಿಕಾರಿಗಳಿಗೆಮನವಿ ಮಾಡಿದರೂ ಯಾವುದೇಪ್ರಯೋಜನವಾಗಿಲ್ಲ.

ನಾಲ್ಕಾರು ಕಿ.ಮೀ.ವ್ಯಾಪ್ತಿವರೆಗೂ ಭೂಮಿ ಕಂಪಿಸಿದಅನುಭವವಾಗುತ್ತದೆ. ಮನೆಗಳಲ್ಲಿ ಈ ಶಬ್ದಕ್ಕೆ ಜೀವನನಡೆಸಲು ಆಗುತ್ತಿಲ್ಲ. ಸ್ಫೋಟದಿಂದ ಈ ರೀತಿಅನಾಹುತವಾಗಿದೆ. ಇದಕ್ಕೆ ಪರಿಹಾರ ನೀಡುವವರುಯಾರು? ಗಣಿಗಾರಿಕೆ ಸ್ಥಗಿತಗೊಳಿಸಿ ಸ್ಥಳೀಯರಜೀವನಕ್ಕೆ ಅವಕಾಶ ಮಾಡಿಕೊಡಬೇಕು.

ಬೆಳೆಗಳಮೇಲೆ ದೂಳು ಕೂರುತ್ತಿರುವುದರಿಂದ ಬೆಳೆ ನಷ್ಟಅನುಭವಿಸುವಂತಾಗಿದೆ ಎಂದು ಪಂಪ್‌ಹೌಸ್‌ನಮಾಲಿಕ ರಾಮಚಂದ್ರಪ್ಪ ತಮ್ಮ ಅಳಲನ್ನುತೋಡಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next