Advertisement

ಪುಲ್ವಾಮಾದಲ್ಲಿ ಎನ್‌ಕೌಂಟರ್‌ : ಇಬ್ಬರು ಜೆಇಎಂ ಉಗ್ರರ ಹತ್ಯೆ

05:56 AM Feb 01, 2019 | Team Udayavani |

ಶ್ರೀನಗರ : ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ರಾಜ್‌ಪೋರಾ ಪ್ರದೇಶದಲ್ಲಿ ಇಂದು ಶುಕ್ರವಾರ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಇಬ್ಬರು ಉಗ್ರರನ್ನು ಹತ್ಯೆಗೈಯಲಾಗಿದೆ.

Advertisement

ಹತ ಉಗ್ರರನ್ನು ಶಹೀದ್‌ ಅಹ್ಮದ್‌ ಬಾಬಾ ಮತ್ತು ಅನೀಯತ್‌ ಅಹ್ಮದ್‌ ಝಿಗರ್‌ ಎಂದು ಗುರುತಿಸಲಾಗಿದೆ. ಇವರಿಬ್ಬರೂ ಜೈಶ್‌ ಎ ಮೊಹಮ್ಮದ್‌ ಉಗ್ರ ಸಂಘಟನೆಗೆ ಸೇರಿದವರಾಗಿದ್ದಾರೆ.

ಉಗ್ರರಿಂದ ಒಂದು ಎಸ್‌ಎಲ್‌ಆರ್‌ ಮತ್ತು ಒಂದು ಪಿಸ್ತೂಲು ವಶಪಡಿಸಿಕೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next