ಬೆಂಗಳೂರು: ಹೊಸದಿಲ್ಲಿಯ ವಿಶ್ವಕಪ್ ಶೂಟಿಂಗ್ ಕೂಟಕ್ಕೆ ಪಾಕಿಸ್ಥಾನ ಸ್ಪರ್ಧಿಗಳಿಗೆ ವೀಸಾ ನಿರಾಕರಿಸಿದ ಬೆನ್ನಲ್ಲೇ ಬೆಂಗಳೂರಿನಲ್ಲಿ ಮುಂದಿನ ವಾರ ನಡೆಯಬೇಕಿದ್ದ ಏಶ್ಯನ್ ಸ್ನೂಕರ್ ಕೂಟವನ್ನೂ ರದ್ದು ಮಾಡಲಾಗಿದೆ.
ಪಾಕಿಸ್ಥಾನದ 6 ಆಟ ಗಾರರಿಗೆ ಈ ಕೂಟದಲ್ಲಿ ಭಾಗವಹಿಸಲು ಭಾರತ ಸರಕಾರದಿಂದ ವೀಸಾ ಸಿಗು ವುದಿಲ್ಲ ಎನ್ನುವುದು ಖಚಿತಗೊಂಡಿದೆ. ವೀಸಾ ನಿರಾಕರಣೆಯ ಕಾರಣದಿಂದ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ (ಐಒಸಿ) ಭಾರತ ಆತಿಥ್ಯದ ಎಲ್ಲ ಜಾಗತಿಕ ಕೂಟಗಳನ್ನು ರದ್ದು ಮಾಡಿದೆ. ಇದರಂತೆ ಬೆಂಗಳೂರಿನಲ್ಲಿ ಆಯೋಜಿಸಬೇಕಿದ್ದ ಕೂಟವನ್ನೂ ರದ್ದು ಮಾಡಿರುವುದಾಗಿ ಬಿಲಿಯರ್ಡ್ಸ್ ಮತ್ತು ಸ್ನೂಕರ್ ಫೆಡರೇಷನ್ ಆಫ್ ಇಂಡಿಯಾ (ಬಿಎಸ್‌ಎಫ್ಐ) ಕಾರ್ಯದರ್ಶಿ ಎಸ್. ಬಾಲಸುಬ್ರಹ್ಮಣ್ಯನ್ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾರ್ಚ್ ಕೊನೆಯ ವಾರದಲ್ಲಿ ಈ ಕೂಟವನ್ನು ಆಯೋ ಜಿಸಲಾಗಿತ್ತು. ದಿನಾಂಕ ಹಾಗೂ ಕ್ರೀಡಾಂಗಣ ಪ್ರಕಟವಾಗಿರಲಿಲ್ಲ. ಇನ್ನೇನು ಕೂಟಕ್ಕೆ ಸಿದ್ಧತೆ ನಡೆಯುತ್ತಿದೆ ಎನ್ನುವಷ್ಟರಲ್ಲಿ ಪುಲ್ವಾಮಾ ದಾಳಿ ನಡೆಯಿತು.
ಈ ಕುರಿತಂತೆ ಬಿಎಸ್‌ಎಫ್ಐ ಕಾರ್ಯದರ್ಶಿ ಎಸ್. ಬಾಲಸುಬ್ರಹ್ಮಣ್ಯನ್ ಪ್ರತಿ ಕ್ರಿಯಿಸಿದ್ದು, “ಮಾರ್ಚ್ ಕೊನೆಯಲ್ಲಿ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಏಷ್ಯನ್ ಸ್ನೂಕರ್ ಕೂಟವನ್ನು ರದ್ದುಗೊಳಿಸಲಾಗಿದೆ.
ಏಶ್ಯನ್ ಕಾನೆ#ಡರೇಷನ್ ಆಫ್ ಬಿಲಿಯರ್ಡ್ಸ್ ನ್ಪೋರ್ಟ್ಸ್ ಬೋರ್ಡ್ ಆದೇಶ ಮೇರೆಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ. 24 ಆಟಗಾರರಲ್ಲಿ 6 ಆಟಗಾರರು ಪಾಕಿಸ್ಥಾನದವ ರಾಗಿದ್ದರು. ಅವರಿಗೆ ವೀಸಾ ಸಿಕ್ಕಿಲ್ಲ. ಇದರಿಂದ ಕೂಟ ರದ್ದು ಮಾಡುತ್ತಿದ್ದೇವೆ’ ಎಂದಿದ್ದಾರೆ.