Advertisement

ಪುಲ್ವಾಮಾ: ಕಾರು ಕೊಟ್ಟವ ಫಿನಿಷ್‌

01:45 AM Jun 19, 2019 | Team Udayavani |
ಶ್ರೀನಗರ: ಮಹತ್ವದ ಕಾರ್ಯಾಚರಣೆಯಲ್ಲಿ, ಪುಲ್ವಾಮಾ ದಾಳಿಗೆ ಬಳಸಲಾಗಿದ್ದ ಕಾರಿನ ಮಾಲೀಕ, ಜೈಶ್‌ ಉಗ್ರ ಸಜ್ಜದ್‌ ಅಹ್ಮದ್‌ ಭಟ್(17)ನನ್ನು ಮಂಗಳವಾರ ಹೊಡೆದುರುಳಿಸಲಾಗಿದೆ.

ಅನಂತ್‌ನಾಗ್‌ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಸಜ್ಜದ್‌ ಹಾಗೂ ಆತನ ಸಹಚರ ನನ್ನು ಹತ್ಯೆಗೈಯ್ಯಲಾಗಿದೆ. 40 ಯೋಧರ ಸಾವಿಗೆ ಕಾರಣವಾಗಿದ್ದ ಪುಲ್ವಾಮಾ ದಾಳಿಯಲ್ಲಿ ಸಜ್ಜದ್‌ ಭಟ್‌ನ ಮಾರುತಿ ಈಕೋ ಕಾರನ್ನು ಬಳಸಲಾಗಿತ್ತು. ಇದರಲ್ಲೇ ಸ್ಫೋಟಕ ತುಂಬಿಕೊಂಡು ಬಂದು, ಸಿಆರ್‌ಪಿಎಫ್ ವಾಹನಕ್ಕೆ ಡಿಕ್ಕಿ ಹೊಡೆಸಲಾಗಿತ್ತು.

Advertisement

ಈ ಘಟನೆ ನಂತರ ಸಜ್ಜದ್‌ ಭಟ್ ನಾಪತ್ತೆಯಾಗಿದ್ದ. ಅದಾದ ಕೆಲವು ದಿನಗಳ ಬಳಿಕ ಎಕೆ-47 ರೈಫ‌ಲ್ ಹಿಡಿದು ನಿಂತಿದ್ದ ಆತನ ಫೋಟೋ ವೈರಲ್ ಆಗಿತ್ತು. ಪುಲ್ವಾಮಾ ದಾಳಿಯ ಹೊಣೆ ಹೊತ್ತಿದ್ದ ಜೈಶ್‌ ಉಗ್ರ ಸಂಘಟನೆಗೆ ಸಜ್ಜದ್‌ ಸೇರ್ಪಡೆಗೊಂಡಿದ್ದ. ಈತನಿಗೆ ‘ಅಫ‌್ಜಲ್ ಗುರು’ ಎಂದು ಕೋಡ್‌ನೇಮ್‌ ಕೊಡಲಾಗಿತ್ತು. ಅಲ್ಲದೆ, ಸಜ್ಜದ್‌ ಭಟ್ ಜೈಶ್‌ನ ಫಿದಾಯೀನ್‌ ಪಡೆಗೆ ಸೇರಿದ್ದ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next