Advertisement

ಜವಾಬ್ದಾರಿಯಿಂದ ಆಡಿ: ತರಂಗ

10:42 AM Aug 24, 2017 | |

ಪಲ್ಲೆಕಿಲೆ: ಪ್ರಬಲ ಭಾರತ ತಂಡ ದೆದುರು ಗುರುವಾರ ನಡೆಯುವ ದ್ವಿತೀಯ ಏಕದಿನ ಪಂದ್ಯದಲ್ಲಿ ಜವಾಬ್ದಾರಿಯಿಂದ ಬ್ಯಾಟಿಂಗ್‌ ನಡೆಸುವಂತೆ ಶ್ರೀಲಂಕಾ ನಾಯಕ ಉಪುಲ್‌ ತರಂಗ ಅವರು ತನ್ನ ಅಗ್ರ ಕ್ರಮಾಂಕದ ಆಟಗಾರರಿಗೆ ಮನವಿ ಮಾಡಿದ್ದಾರೆ. 

Advertisement

ದೊಡ್ಡ ಮೊತ್ತವೊಂದನ್ನು ಪೇರಿಸಬೇಕಾದರೆ ಅಗ್ರ ಕ್ರಮಾಂಕದ ನಾಲ್ವರು ಆಟಗಾರರು ಸಿಡಿ ಯುವ ಅಗತ್ಯವಿದೆ. ಒಬ್ಬರು ಅಥವಾ ಇಬ್ಬರು ದೊಡ್ಡ ಮೊತ್ತ ಗಳಿಸಲೇಬೇಕಾಗಿದೆ. ಇದನ್ನು ನಾವು ಕಳೆದ 10-15 ವರ್ಷ ಗಳಿಂದ ನೋಡುತ್ತ ಬಂದಿದ್ದೇವೆ. ಒಂದು ವೇಳೆ ಆಟಗಾರನೋರ್ವ ಶತಕ ಸಿಡಿಸಿದರೆ ನಾವು 280-300ರ ಒಳ್ಳೆಯ ಮೊತ್ತ ಪೇರಿಸ ಬಹುದು ಎಂದು ತರಂಗ ಹೇಳಿದರು.

ಮೊದಲ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ಒಂದು ಹಂತದಲ್ಲಿ ಒಂದು ವಿಕೆಟಿಗೆ 139 ರನ್‌ ಪೇರಿಸಿ ಉತ್ತಮ ಸ್ಥಿತಿಯಲ್ಲಿತ್ತು. ಆದರೆ ಮುಂದಿನ 77 ರನ್‌ ಪೇರಿಸುವಷ್ಟರಲ್ಲಿ 9 ವಿಕೆಟ್‌ ಕಳೆದುಕೊಂಡು 216 ರನ್ನಿಗೆ ಸರ್ವಪತನ ಕಂಡಿತ್ತು. ಆಟಗಾರ ಒಮ್ಮೆ ಕ್ರೀಸ್‌ನಲ್ಲಿ ನೆಲೆ ನಿಂತ ಬಳಿಕ ಇನ್ನಿಂಗ್ಸ್‌ ಪೂರ್ತಿ ಆಡುವುದನ್ನು ನಾನು  ನಿರೀಕ್ಷಿಸುತ್ತೇನೆ. ಒಂದು ವೇಳೆ ಆ ಆಟಗಾರ ಇನ್ನಿಂಗ್ಸ್‌ ಪೂರ್ತಿ ಆಡಿದರೆ ತಂಡ ಒಳ್ಳೆಯ ಮೊತ್ತ ದಾಖಲಿಸಬಹುದು. ಹಿಂದಿನ ಫ‌ಲಿ ತಾಂಶ ಗಮನಿಸಿದರೆ ನಾವು ಮೊದಲ 20- 25 ಓವರ್‌ಗಳಲ್ಲಿ ಉತ್ತಮ ಸ್ಥಿತಿಯಲ್ಲಿ ಇರುತ್ತಿದ್ದೆವು. ಅಲ್ಲಿಂದ ನಾವು ಬೇಜವಾ ಬ್ದಾರಿ ಹೊಡೆತಗಳಿಗೆ ಮುಂದಾಗಿ ವಿಕೆಟ್‌ ಕಳೆದು ಕೊಳ್ಳುತ್ತಿದ್ದೆವು ಎಂದು ತರಂಗ ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next