Advertisement

ಎಎಫ್ಐ ವಿರುದ್ಧ ನ್ಯಾಯಾಂಗ ನಿಂದನೆ ಅಂಗೀಕಾರ

12:18 PM Aug 02, 2017 | Team Udayavani |

ಕೊಚ್ಚಿ: ಕೇರಳ ಅಥ್ಲೀಟ್‌ ಪಿ.ಯು.ಚಿತ್ರಾ ಅವರು ಭಾರತ ಅಥ್ಲೆಟಿಕ್ಸ್‌ ಒಕ್ಕೂಟದ (ಎಎಫ್ಐ) ವಿರುದ್ಧ ದಾಖಲಿಸಿದ್ದ ನ್ಯಾಯಾಂಗ ನಿಂದನೆ ಪ್ರಕರಣವನ್ನು ಕೇರಳ ಉಚ್ಚ ನ್ಯಾಯಾಲಯ ಅಂಗೀಕರಿಸಿದೆ.

Advertisement

ಮೇಲ್ನೋಟಕ್ಕೆ ನ್ಯಾಯಾಂಗ ನಿಂದನೆ ಸಾಬೀತಾಗಿದೆ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಪೀಠ ಪ್ರಕರಣವನ್ನು ವಿಭಾಗೀಯ ಪೀಠಕ್ಕೆ ಹಸ್ತಾಂತರಿಸಿದೆ ಆ.4ರಿಂದ ಲಂಡನ್‌ನಲ್ಲಿ ಆರಂಭವಾಗಲಿರುವ ವಿಶ್ವ ಚಾಂಪಿಯನ್‌ಶಿಪ್‌ಗೆ ತಮ್ಮನ್ನು ಕೈಬಿಟ್ಟಿರುವ ಭಾರತ ಅಥ್ಲೆಟಿಕ್ಸ್‌ ಒಕ್ಕೂಟದ ವಿರುದ್ಧ ಚಿತ್ರಾ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಚಿತ್ರಾ ಆಯ್ಕೆ ಪ್ರಕ್ರಿಯೆ ಸರಿಯಾಗಿ ನಡೆದಿಲ್ಲ. ಆದ್ದರಿಂದ ಅವರನ್ನು ಪರಿಗಣಿಸುವಂತೆ ನ್ಯಾಯಪೀಠ ಎಎಫ್ಐಗೆ ಸೂಚಿಸಿತ್ತು. ಇಷ್ಟಾದ ಮೇಲೂ ಎಎಫ್ಐ ತಮ್ಮನ್ನು ಕಳುಹಿಸುವುದಕ್ಕೆ ಸರಿಯಾದ ಯತ್ನ ನಡೆಸಲಿಲ್ಲ ಎಂದು ಆರೋಪಿಸಿ ಚಿತ್ರಾ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next