Advertisement

ಪಿಯುಸಿ: ಶೇ.85.66 ಅಂಕ ಪಡೆದ ಕಾರ್ಮಿಕ

03:32 PM May 12, 2017 | Team Udayavani |

ಹುಬ್ಬಳ್ಳಿ: ಸುಮಾರು 35 ವರ್ಷ ವಯೋಮಾನದ ಕಾರ್ಮಿಕರೊಬ್ಬರು ಕುಟುಂಬ ನಿರ್ವಹಣೆ ಜತೆಗೆ ದ್ವಿತೀಯ ಪಿಯುಸಿಯಲ್ಲಿ ಬಾಹ್ಯ ಅಭ್ಯರ್ಥಿಯಾಗಿ ಪರೀಕ್ಷೆ ಬರೆದು ಶೇ.85.66ರಷ್ಟು ಅಂಕ ಪಡೆದು ಉತ್ತೀರ್ಣರಾಗಿದ್ದಾರೆ. ಇಲ್ಲಿನ ಉಣಕಲ್ಲ ಸಿದ್ದರಾಮೇಶ್ವರ ನಗರದ ನಿವಾಸಿ ಕುಮಾರ ಮುಟಗಾರ 514 ಅಂಕ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ. ಚಿಕ್ಕವನಿದ್ದಾಗಲೇ ತಂದೆ ತೀರಿಕೊಂಡಿದ್ದು ಓದು ಅರ್ಧಕ್ಕೆ ನಿಲ್ಲಿಸಬೇಕಾಯಿತು.

Advertisement

ಎಸ್‌ಎಸ್‌ಎಲ್‌ ಸಿವರೆಗೆ ಅಧ್ಯಯನ ಮಾಡಿದ್ದ ಕುಮಾರ ಅವರಿಗೆ ಓದುವ ತವಕ ಇದ್ದರೂ ಕುಟುಂಬ ನಿರ್ವಹಣೆ ಕಾರಣಕ್ಕೆ ಅನಿರ್ವಾಯವಾಗಿ ವ್ಯಾಸಂಗ ಮೊಟಕುಗೊಳಿಸಿದ್ದರು. ನಂತರದ ದಿನಗಳಲ್ಲಿ ತಾಯಿ ಹಾಗೂ ಪತ್ನಿ ರಮ್ಯಾ ಅವರ ಪ್ರೇರಣೆಯಿಂದ ಉಣಕಲ್ಲ ಸರಕಾರಿ ಕಾಲೇಜಿನಲ್ಲಿ ಬಾಹ್ಯ ಅಭ್ಯರ್ಥಿಯಾಗಿ ಪ್ರವೇಶ ಪಡೆದು ಓದು ಆರಂಭಿಸಿದ್ದರು. 

ಕೂಲಿ ಮಾಡುತ್ತ ಅಧ್ಯಯನ ಮಾಡಿದ ಅವರು 2016-17ನೇ ಸಾಲಿನ ಪಿಯುಸಿ ಪರೀಕ್ಷೆಯಲ್ಲಿ 514 ಅಂಕ ಪಡೆದಿದ್ದಾರೆ. ಓದುವ ತುಡಿತ ಹೊಂದಿರುವ ಕುಮಾರ ಮುಟಗಾರ ಅವರಿಗೆ ಇಬ್ಬರು ಮಕ್ಕಳಿದ್ದು, ಮುಂದೆ ಪದವಿ ಓದಿ ಏನಾದರೂ ಸಾಧನೆ ಮಾಡಬೇಕೆಂಬ ಮಹದಾಸೆ ಹೊಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next