Advertisement

ನೂತನ ಕಾಯ್ದೆ;ವಾಯುಮಾಲಿನ್ಯ ನಿಯಂತ್ರಣ ಸರ್ಟಿಫಿಕೇಟ್ ಗೆ ಮುಗಿಬಿದ್ದ ಸವಾರರು, ಸರ್ವರ್ ಸ್ಥಗಿತ

09:07 AM Sep 11, 2019 | Nagendra Trasi |

ನವದೆಹಲಿ: ನೂತನ ವಾಹನ ಕಾಯ್ದೆಯ ಪ್ರಕಾರ ಮಾಲಿನ್ಯ ನಿಯಂತ್ರಿಸುವ ಉದ್ದೇಶದಿಂದ ನೀಡಲಾಗುವ ಪೊಲ್ಯೂಷನ್ ಅಂಡರ್ ಕಂಟ್ರೋಲ್(ವಾಯುಮಾಲಿನ್ಯ ನಿಯಂತ್ರಣ)ನ ಸಮರ್ಪಕ ಸರ್ಟಿಫಿಕೇಟ್ ವಾಹನ ಸವಾರರ ಬಳಿ ಇಲ್ಲದಿದ್ದರೆ ಭಾರೀ ದಂಡ ಕಟ್ಟಬೇಕಾಗುತ್ತದೆ. ಇದೀಗ ಭಾರೀ ದಂಡಕ್ಕೆ ಬೆಚ್ಚಿಬಿದ್ದಿರುವ ವಾಹನ ಸವಾರರು ಪಿಯುಸಿ(ಪೊಲ್ಯೂಷನ್ ಅಂಡರ್ ಕಂಟ್ರೋಲ್) ಸರ್ಟಿಫಿಕೇಟ್ ಪಡೆಯಲು ದಿಲ್ಲಿಯಲ್ಲಿ ಐದಾರು ಗಂಟೆಗಳ ಕಾಲ ಕ್ಯೂನಲ್ಲಿ ನಿಂತಿರುವ ಘಟನೆ ವರದಿಯಾಗಿದೆ.

Advertisement

ಪೊಲ್ಯೂಷನ್ ಅಂಡರ್ ಸರ್ಟಿಫಿಕೇಟ್ ನೀಡಲು ರಾಜಧಾನಿಯಲ್ಲಿ 950 ಕೇಂದ್ರಗಳಿದ್ದು, ವಾಹನ ಸವಾರರು ಸರ್ಟಿಫಿಕೇಟ್ ಪಡೆಯಲು ಮುಗಿಬಿದ್ದ ಪರಿಣಾಮ ಸರ್ವರ್ ಕ್ರ್ಯಾಶ್ ಆಗಿರುವುದಾಗಿ ವರದಿ ತಿಳಿಸಿದೆ.

ಪ್ರತಿದಿನ ದೆಹಲಿಯಲ್ಲಿ 10 ಸಾವಿರ ಪೊಲ್ಯೂಷನ್ ಅಂಡರ್ ಸರ್ಟಿಫಿಕೇಟ್ ನೀಡಲಾಗುತ್ತಿದ್ದು, ಆ ಸಂಖ್ಯೆ ಇದೀಗ 45 ಸಾವಿರಕ್ಕೇರಿದೆ. ಅದಕ್ಕೆ ಕಾರಣ ಸೆಪ್ಟೆಂಬರ್ 1ರಿಂದ ಜಾರಿಗೊಂಡ ನೂತನ ವಾಹನ ಕಾಯ್ದೆ ಎಂಬುದಾಗಿ ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ  ಸಾರಿಗೆ ಇಲಾಖೆ ಪೊಲ್ಯೂಷನ್ ಅಂಡರ್ ಸರ್ಟಿಫಿಕೇಟ್ ನೀಡುವ ಕೇಂದ್ರಗಳ ಸಂಖ್ಯೆ ಹೆಚ್ಚಳ ಮಾಡಲು ಮತ್ತು ಸಾಫ್ಟ್ ವೇರ್ ಅಪ್ ಗ್ರೇಡ್ ಮಾಡುವುದಾಗಿ ವಿವರಿಸಿದ್ದಾರೆ.

ದೆಹಲಿಯಲ್ಲಿ ಒಟ್ಟು 1.09 ಕೋಟಿ ವಾಹನಗಳಿವೆ. ಅದರಲ್ಲಿ 75 ಲಕ್ಷ ವಾಹನಗಳು ಓಡಾಟ ನಡೆಸುತ್ತಿದ್ದು, ಪ್ರತಿವರ್ಷ ಅಂದಾಜು 50 ಲಕ್ಷ ವಾಹನಗಳು ವಾಯುಮಾಲಿನ್ಯ ತಪಾಸಣೆ ನಡೆಸಿ, ಸರ್ಟಿಫಿಕೇಟ್ ಪಡೆಯುತ್ತಿರುವುದಾಗಿ ವರದಿ ಹೇಳಿದೆ.

Advertisement

ನೂತನ ಮೋಟಾರು ವಾಹನ ಕಾಯ್ದೆ ಜಾರಿಯಾಗುವವರೆಗೂ ದಿಲ್ಲಿಯಲ್ಲಿ ವಾಹನ ಸವಾರರು ನಿರಂತರವಾಗಿ ಪೊಲ್ಯೂಷನ್ ತಪಾಸಣೆಗೆ ಆಗಮಿಸುತ್ತಿರಲಿಲ್ಲವಾಗಿತ್ತು. ಏತನ್ಮಧ್ಯೆ ವಾಹನ ಸವಾರರಿಗೆ ಸೂಕ್ತ ಸಮಯಕ್ಕೆ ಪೊಲ್ಯೂಷನ್ ತಪಾಸಣೆ ನಡೆಸಲು ಸಂದೇಶವನ್ನು ಕಳುಹಿಸಲು ಪ್ರಯತ್ನಿಸಿದ್ದೇವು. ಆದರೆ ನಮ್ಮ ಹೆಚ್ಚಿನ ವಾಹನ ಸವಾರರ ಮೊಬೈಲ್ ನಂಬರ್ ಡಾಟಾಬೇಸ್ ಇರಲಿಲ್ಲವಾಗಿತ್ತು. ಅಲ್ಲದೇ ಹಲವು ವಾಹನ ಸವಾರರ ಮೊಬೈಲ್ ಸಂಖ್ಯೆ ನಕಲಿಯಾಗಿದ್ದವು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

*ದೆಹಲಿಯಲ್ಲಿ ಪ್ರತಿದಿನ 10 ಸಾವಿರ ಪೊಲ್ಯೂಷನ್ ಅಂಡರ್ ಕಂಟ್ರೋಲ್ ಸರ್ಟಿಫಿಕೇಟ್ ವಿತರಿಸಲಾಗುತ್ತಿದೆ.

*ಸೆಪ್ಟೆಂಬರ್ 1ರಿಂದ ಪ್ರತಿದಿನ 45 ಸಾವಿರ ಸರ್ಟಿಫಿಕೇಟ್ ವಿತರಿಸಲಾಗುತ್ತಿದೆ.

*ಸಮರ್ಪಕ ಪೊಲ್ಯೂಷನ್ ಅಂಡರ್ ಕಂಟ್ರೋಲ್ ಸರ್ಟಿಫಿಕೇಟ್ ಇಲ್ಲದಿದ್ದರೆ ಈ ಮೊದಲು ದಂಡದ ಮೊತ್ತ 1000 ರೂಪಾಯಿ ಆಗಿತ್ತು.

*ಹೊಸ ವಾಹನ ಕಾಯ್ದೆ ಪ್ರಕಾರ ಪೊಲ್ಯೂಷನ್ ಅಂಡರ್ ಕಂಟ್ರೋಲ್ ಸರ್ಟಿಫಿಕೇಟ್ ಇಲ್ಲದಿದ್ದರೆ ದಂಡದ ಮೊತ್ತ 10 ಸಾವಿರ ರೂಪಾಯಿ.

*ಬಿಎಸ್(ಭಾರತ್ ಸ್ಟೇಜ್) 4 ಅಲ್ಲದ ವಾಹನಗಳ ಪೊಲ್ಯೂಷನ್ ಅಂಡರ್ ಕಂಟ್ರೋಲ್ ಸರ್ಟಿಫಿಕೇಟ್ ವ್ಯಾಲಿಡಿಟಿ 3 ತಿಂಗಳು ಮಾತ್ರ.

*ಬಿಎಸ್ 4 ವಾಹನಗಳ ಪೊಲ್ಯೂಷನ್ ಅಂಡರ್ ಕಂಟ್ರೋಲ್ ಸರ್ಟಿಫಿಕೇಟ್ ವ್ಯಾಲಿಡಿಟಿ ಒಂದು ವರ್ಷ.

*ದೆಹಲಿಯಲ್ಲಿರುವ ಒಟ್ಟು ರಿಜಿಸ್ಟರ್ಡ್ ವಾಹನಗಳ ಸಂಖ್ಯೆ 1.1ಕೋಟಿ

*ದೆಹಲಿಯಲ್ಲಿ ಓಡಾಡುವ ವಾಹನಗಳ ಸಂಖ್ಯೆ 75 ಲಕ್ಷ

*ಪ್ರತಿವರ್ಷ ವಾಯುಮಾಲಿನ್ಯ ತಪಾಸಣೆ ಮಾಡಿಸಿಕೊಳ್ಳುವ ವಾಹನಗಳ ಸಂಖ್ಯೆ 50 ಲಕ್ಷ.

*ದೆಹಲಿಯಲ್ಲಿರುವ ವಾಯುಮಾಲಿನ್ಯ ತಪಾಸಣಾ ಕೇಂದ್ರಗಳ ಸಂಖ್ಯೆ 950

Advertisement

Udayavani is now on Telegram. Click here to join our channel and stay updated with the latest news.

Next