ಬೆಂಗಳೂರು: 2020-21ಶೈಕ್ಷಣಿಕ ಸಾಲಿನ ದ್ವಿತೀಯ ಪಿಯು ವಿದ್ಯಾರ್ಥಿಗಳ ಫಲಿತಾಂಶ ವಿಚಾರದಲ್ಲಿ ರಿಪೀಟರ್ಸ್ ಗೆ ಪ್ರಥಮ ಪಿಯು ಅಂಕಗಳನ್ನು ಪರಿಗಣಿಸಲು ಸಾಧ್ಯವೇ ಎಂಬ ಬಗ್ಗೆ ನಿಲುವು ತಿಳಿಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.
ರಿಪೀಟರ್ಸ್ ಗಳಿಗೂ ಅನುಕೂಲ ವಿಸ್ತರಣೆ ಕೋರಿ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಸರ್ಕಾರಕ್ಕೆ ಈ ಸೂಚನೆ ನೀಡಿ ವಿಚಾರಣೆಯನ್ನು ಜೂ.17ಕ್ಕೆ ಮುಂದೂಡಿತು.
ಇದನ್ನೂ ಓದಿ:ಒಂದಿಬ್ಬರಿಗೆ ಬೇಸರವಿರಬಹುದು, ಅವರೊಂದಿಗೆ ಅರುಣ್ ಸಿಂಗ್ ಮಾತನಾಡುತ್ತಾರೆ: ಬಿಎಸ್ ವೈ
ಸರ್ಕಾರದ ತೀರ್ಮಾನದಿಂದ ಸಾಮಾನ್ಯ ವಿದ್ಯಾರ್ಥಿಗಳಿಗೂ ರಿಪೀಟರ್ಸ್ ಗೂ ತಾರತಮ್ಯ ಆಗಿದೆ. ಅವರಿಗೂ ಪ್ರಥಮ ಪಿಯು ಅಂಕವನ್ನೇ ಪರಿಗಣಿಸಿ ಪಾಸ್ ಮಾಡಬೇಕೆಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.
ದ್ವಿತೀಯ ಪಿಯು ವಿದ್ಯಾರ್ಥಿಗಳ ಪರೀಕ್ಷೆಯನ್ನು ಸರ್ಕಾರ ರದ್ದು ಮಾಡಿ, ಎಲ್ಲಾ ವಿದ್ಯಾರ್ಥಿಗಳನ್ನು ಉತ್ತೀರ್ಣ ಮಾಡುವುದಾಗಿ ಘೋಷಿಸಿತ್ತು. ಆದರೆ ರಿಪೀಟರ್ಸ್ ( ಮರು ಪರೀಕ್ಷೆ) ಕಡ್ಡಾಯವಾಗಿ ಪರೀಕ್ಷೆ ಬರೆಯಬೇಕು ಎಂದು ಶಿಕ್ಷಣ ಇಲಾಖೆ ಸೂಚಿಸಿತ್ತು.