Advertisement

ದಿನಕ್ಕೆ 4 ತರಗತಿ; ಹಾಜರಿ ಕಡ್ಡಾಯವಲ್ಲ: ಪಿಯು ತರಗತಿ ಆರಂಭಕ್ಕೆ ಮಾರ್ಗಸೂಚಿ

12:37 AM Dec 25, 2020 | sudhir |

ಬೆಂಗಳೂರು: ದಿನಕ್ಕೆ ನಾಲ್ಕು ಅವಧಿಗಿಂತ ಹೆಚ್ಚು ತರಗತಿಗಳನ್ನು ತೆಗೆದು ಕೊಳ್ಳುವಂತಿಲ್ಲ ಹಾಗೂ ವಿದ್ಯಾರ್ಥಿಗಳಿಗೆ ಹಾಜರಾತಿ ಕಡ್ಡಾಯವಲ್ಲ.

Advertisement

-ಇದು ಪಿಯುಸಿ ತರಗತಿಗಳು ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಹೊರಡಿಸಿದ ಮಾರ್ಗಸೂಚಿಯ ಮುಖ್ಯಾಂಶ.

45 ನಿಮಿಷಗಳ ಅವಧಿಯ 4 ತರಗತಿಗಳನ್ನು ಪ್ರತಿದಿನವೂ ನಡೆಸುವುದು. ಒಂದು ತರಗತಿಯಲ್ಲಿ 15 ವಿದ್ಯಾರ್ಥಿಗಳಿಗೆ ವ್ಯವಸ್ಥೆ ಮಾಡುವುದು ಹಾಗೂ ಕೊಠಡಿ ವಿಸ್ತೀರ್ಣಕ್ಕೆ ಅನುಗುಣವಾಗಿ ಸ್ಥಳೀಯ ಅಗತ್ಯಕ್ಕನುಗುಣವಾಗಿ ವಿದ್ಯಾರ್ಥಿಗಳ ಸಂಖ್ಯೆಯನ್ನು ನಿಗದಿ ಪಡಿಸಿಕೊಳ್ಳಬಹುದಾಗಿದೆ.

ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಸ್ವಯಂ ಪ್ರೇರಣೆಯಿಂದ ಮತ್ತು ಪೋಷಕರ ಸಮ್ಮತಿ ಪತ್ರದೊಂದಿಗೆ ಮಾತ್ರ ಭೌತಿಕ ತರಗತಿಗಳಿಗೆ ಬರಬಹುದು. ಮಕ್ಕಳಿಗೆ ಸೋಂಕಿನ ಯಾವುದೇ ಗುಣ ಲಕ್ಷಣಗಳು ಇರುವುದಿಲ್ಲ ಎಂಬ ಪೋಷಕರ ದೃಢೀಕರಣ ಪತ್ರವೂ ಕಡ್ಡಾಯ.

Advertisement

Udayavani is now on Telegram. Click here to join our channel and stay updated with the latest news.

Next