Advertisement

ಗುಂಡಿಬಿದ್ದ ರಸ್ತೆ ದುರಸ್ತಿಗೆ ಸಾರ್ವಜನಿಕರ ಆಗ್ರಹ

04:52 PM Sep 27, 2021 | Team Udayavani |

ಕನಕಪುರ: ಮಳೆ ನೀರು ತುಂಬಿಕೊಂಡು ಹೊಂಡದಂತಾಗಿರುವ ರಾಮನಗರ ರಸ್ತೆ ವಾಹನ ಸವಾರರಿಗೆ ಕಂಟಕಪ್ರಾಯವಾಗಿ ಪರಿಣಮಿಸಿದೆ.

Advertisement

ಜಿಲ್ಲಾ ಕೇಂದ್ರ ರಾಮನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅಲ್ಲಲ್ಲಿ ಗುಂಡಿಗಳು ಬಿದ್ದು ಹಾಳಾಗಿದ್ದರೂಲೋಕೋಪಯೋಗಿ ಇಲಾಖೆ ಅಧಿಕಾರಿಗಳುಮಾತ್ರ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ನಗರದ ಕೆಎಸ್‌ಆರ್‌ಟಿಸಿ ಘಟಕದ ಮುಂಭಾಗದಲ್ಲಿ ರಾಮನಗರಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಆಳುದ್ದ ಗುಂಡಿಗಳು ಬಿದ್ದು ವಾಹನ ಸವಾರರಿಗೆ ತಲೆನೋವಾಗಿ ಪರಿಣಮಿಸಿದೆ. ದ್ವಿಚಕ್ರ ವಾಹನ ಸವಾರರ ಪಾಡಂತೂ ಹೇಳತೀರದು. ಈ ರಸ್ತೆಯಲ್ಲಿ ನಿತ್ಯ ಸಂಚರಿಸುವ ಬೈಕ್‌ ಸವಾರರು ಯಾವ ಕ್ಷಣದಲ್ಲಿ ಏನಾದರೂ ಆಗಬಹುದು ಅನ್ನೋ ಭೀತಿಯಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಹಳ್ಳ ತಪ್ಪಿಸಲು ಎದುರು-ಬದುರು ಬರುವ ವಾಹನಗಳಿಂದ ಅಪಘಾತ ಸಂಭವ ಹೆಚ್ಚಿದೆ.

ಒಮ್ಮೊಮ್ಮೆ ಆಯತಪ್ಪಿ ವಾಹನ ಸವಾರರು ಬಿದ್ದು ಗಾಯಗೊಂಡಿರುವ ಘಟನೆ ಕೂಡ ನಡೆದಿದೆ. ಇಷ್ಟಾದರೂ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ರಸ್ತೆ ದುರಸ್ತಿಗೆ ಕ್ರಮವಹಿಸದೇ ಇರುವುದು ನಾಗರಿಕರ ಅಸಮಧಾನಕ್ಕೆ ಕಾರಣವಾಗಿದೆ.

ಕೆರೆಯಂತಾದ ರಸ್ತೆ: ಮಳೆ ಬಂದರಂತೂ ರಾಮನಗರ ರಸ್ತೆ ಕೆರೆಯಂತಾಗಿ ಮಾರ್ಪಡುತ್ತದೆ. ಸಣ್ಣ ಮಳೆ ಬಂದರು ಗುಂಡಿಗಳ ತುಂಬಾ ನೀರು ತುಂಬಿಕೊಂಡು ಗುಂಡಿ ಯಾವುದು ರಸ್ತೆಯಾವುದು ಎಂದು ವಾಹನ ಸವಾರರಿಗೆ ತಿಳಿಯದಾಗಿದೆ. ರಸ್ತೆಯಲ್ಲಿ ಗುಂಡಿಗಳು ಬಿದ್ದುತಿಂಗಳುಗಳೇ ಕಳೆದರು ರಸ್ತೆ ದುರಸ್ತಿಗೆ ಮುಂದಾಗದ ಅಧಿಕಾರಿಗಳಿಗೆ ವಾಹನ ಸವಾರರು ಹಿಡಿಶಾಪ ಹಾಕುತ್ತಿದ್ದಾರೆ. ವಾಹನ ಸವಾರರ ಪಾಡು ಹೇಳತೀರದಾಗಿದೆ. ನಗರ ಸಭೆ ಸಿಬ್ಬಂದಿ ಕೆಲವೋಮ್ಮೆಗುಂಡಿಯಲ್ಲಿ ತುಂಬಿರುವ ನೀರನ್ನು ಮೋಟಾರುಮೂಲಕ ಚರಂಡಿಗೆ ಹರಿಸಿದ್ದಾರೆ.

Advertisement

ಅವೈಜ್ಞಾನಿಕ ರಸ್ತೆ: ರಸ್ತೆಯಲ್ಲಿ ಗುಂಡಿ ಬಿದ್ದಿರುವುದು ಇದೆ ಮೊದಲಲ್ಲ ಈ ಹಿಂದೆಯೂ ಇದೆ ರೀತಿ ಗುಂಡಿಗಳು ಬಿದ್ದು ಲೋಕೋಪಯೋಗಿ ಇಲಾಖೆಅಧಿಕಾರಿಗಳು ತೇಪೆ ಹಚ್ಚಿದ್ದರು. ಆದರೆ ಮಳೆನೀರು ರಸ್ತೆಯಲ್ಲಿ ಶೇಖರಣೆಯಾಗುವುದರಿಂದ ಆಗಾಗ ರಸ್ತೆಯಲ್ಲಿ ಗುಂಡಿಗಳು ಬೀಳುತ್ತಿವೆ. ಮಳೆನೀರು ನಿಲ್ಲದಂತೆ ವೈಜ್ಞಾನಿಕವಾಗಿ ರಸ್ತೆ ನಿರ್ಮಾಣಮಾಡಬೇಕಾದ ಗುತ್ತಿಗೆದಾರ ಅವೈಜ್ಞಾನಿಕ ವಾಗಿಮಳೆ ನೀರು ನಿಲ್ಲುವಂತೆ ರಸ್ತೆ ನಿರ್ಮಾಣಮಾಡಿರುವುದೇ ರಸ್ತೆ ಹಾಳಾಗಲು ಕಾರಣವಾಗಿದೆ ಎಂಬುದು ಸ್ಥಳೀಯರ ಆರೋಪ

ವಾಹನ ಸವಾರರಿಗೆ ಕಿರಿಕಿರಿ: ತಾಲೂಕಿನಿಂದ ರಾಮನಗರ ಜಿಲ್ಲಾಕೇಂದ್ರಕ್ಕೆ ಕಾರ್ಯನಿಮಿತ್ತಗ್ರಾಮೀಣ ಭಾಗದ ರೈತರು ಉದ್ಯೋಗಿಗಳುಪ್ರತಿದಿನ ನೂರಾರು ಪ್ರಯಾಣಿಕರು ಸಂಚಾರ ಮಾಡುತ್ತಾರೆ. ಜಿಲ್ಲಾ ಕೇಂದ್ರಕ್ಕೆ ಹೋಗಬೇಕಾದರೆಇದೇ ರಸ್ತೆಯನ್ನು ಅವಲಂಬಿಸಿದ್ದು ರಸ್ತೆಯಲ್ಲಿ ಗುಂಡಿಬಿದ್ದಿರುವುದು ಪ್ರಯಾಣಿಕರಿಗೆ ಕಿರಿಕಿರಿಉಂಟುಮಾಡಿದೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತಗಮನ ಹರಿಸಿ ಜರೂರಾಗಿ ರಸ್ತೆ ದುರಸ್ತಿ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next