Advertisement

ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪ್ರಕಟ

01:44 AM Jan 05, 2020 | mahesh |

ಕರ್ನಾಟಕ ನಾಟಕ ಅಕಾಡೆಮಿಯ 2019-20ನೇ ಸಾಲಿನ ಪ್ರಶಸ್ತಿ ಘೋಷಣೆಯಾಗಿದ್ದು, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಇಬ್ಬರು ಸಾಧಕರು ಆಯ್ಕೆಯಾಗಿದ್ದಾರೆ. ಅವರ ಕಿರು ಪರಿಚಯ ಇಲ್ಲಿದೆ.

Advertisement

ವಿಜಯ್‌ ಕುಮಾರ್‌ ಕೊಡಿಯಾಲ್‌ಬೈಲ್‌
ಮಂಗಳೂರು: “ಒರಿಯ ರ್ದೊರಿ ಅಸಲ್‌’ ಚಿತ್ರದ ಮೂಲಕ ತುಳು ಚಿತ್ರರಂಗ ಹಾಗೂ ರಂಗ ಭೂಮಿಗೆ ಹೊಸ ಛಾಪು ನೀಡಿದ ವಿಜಯ್‌ ಕುಮಾರ್‌ ಕೊಡಿಯಾಲ್‌ಬೈಲ್‌ ಅವರದ್ದು ರಂಗಭೂಮಿ ಮತ್ತು ತುಳು ಚಿತ್ರರಂಗದಲ್ಲಿ 30 ವರ್ಷಗಳ ಅಗಾಧ ಅನುಭವ.

ಒರಿಯೆ ಮಗೆ, ಸೀತಾ ಟೀಚರ್‌, ಸಂಸಾರದ ಸರ್ಕಸ್‌, ಮದಿಮೆ, ಕಡಲಮಗೆ, ಒಯಿಕ್ಲಾ ಆವಂದಿನಕುಲು ಸೇರಿದಂತೆ 19ಕ್ಕೂ ಹೆಚ್ಚು ನಾಟಕಗಳನ್ನು ರಚಿಸಿ ನಿರ್ದೇಶಿಸಿದ್ದಾರೆ. ದೇವು ಪೂಂಜಾ, ಅಪ್ಪೆ ಮೂಕಾಂಬಿಕೆ, ಬಜರಂಗ ಬಲಿ, ಶಿವದೂತೆ ಗುಳಿಗೆ ಮುಂತಾದ ಪೌರಾಣಿಕ ನಾಟಕಗಳನ್ನು ನಿರ್ದೇಶಿಸಿದ್ದಾರೆ.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯಿಂದ ತುಳುನಾಡ ಬಿರ್ಸೆ-2012, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ-2011, ಮುಂಬಯಿ ಶ್ರೀಕೃಷ್ಣ ವಿಠಲ ಪ್ರತಿಷ್ಠಾನದಿಂದ ಕಲಾಚಕ್ರವರ್ತಿ ಪ್ರಶಸ್ತಿ-2006, ಜೇಸೀ ಬೆಸ್ಟ್‌ ಔಟ್‌ಸ್ಟಾಂಡಿಂಗ್‌ ಯಂಗ್‌ ಪರ್ಸನ್‌ ಸೇರಿದಂತೆ ವಿವಿಧ ಪ್ರಶಸ್ತಿ, ಸಮ್ಮಾನಗಳಿಗೆ ಭಾಜನರಾಗಿದ್ದಾರೆ. 28ಕ್ಕೂ ಮೀರಿದ ತುಳು ಧ್ವನಿ ಸುರುಳಿಗಳಿಗೆ ಸಾಹಿತ್ಯ, “ಬರವುದ ಬಂಡಸಾಲೆ’ ಮಕ್ಕಳ ಕಿರುಚಲನಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದಿರುವುದು, 2015ರಲ್ಲಿ ಅದ್ದೂರಿ ವೆಚ್ಚದ “ಮದಿಮೆ’ ಚಲನಚಿತ್ರ ನಿರ್ದೇಶನ ಮಾಡಿದ್ದಾರೆ.

ಪ್ರಶಸ್ತಿ ಬಂದಿರು ವುದು ತುಂಬ ಸಂತೋಷ ವಾಗಿದೆ. ನನ್ನೊಂದಿಗೆ 30 ವರ್ಷಗಳ ಕಾಲ ದುಡಿದ ಎಲ್ಲ ಕಲಾವಿದರು, ತಂತ್ರಜ್ಞರು, ಪ್ರತ್ಯಕ್ಷ, ಪರೋಕ್ಷವಾಗಿ ಪ್ರೋತ್ಸಾಹಿಸಿದ ಕಲಾಭಿಮಾನಿಗಳಿಗೆ ಸಂದ ಗೌರವ ಇದು.
–   ವಿಜಯಕುಮಾರ್‌ ಕೊಡಿಯಾಲ್‌ಬೈಲ್‌

Advertisement

ಭಾಸ್ಕರ ಪೂಜಾರಿ ಮಣಿಪಾಲ
ಉಡುಪಿ: ಸುಮಾರು ನಲ್ವತ್ತು ವರ್ಷಗಳಿಂದ ರಂಗಭೂಮಿ ಕಲಾವಿದರಾಗಿ ಸೇವೆ ಸಲ್ಲಿಸುತ್ತಿರುವ ಮಣಿಪಾಲದ ಈಶ್ವರನಗರದ ನಿವಾಸಿ ಭಾಸ್ಕರ ಪೂಜಾರಿ ಅವರು ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

80ರ ದಶಕದಲ್ಲಿ ಮಣಿಪಾಲದ ಜೂನಿಯರ್‌ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಛದ್ಮವೇಷದಲ್ಲಿ ತೊಡಗಿದ್ದು ಬಳಿಕ ನಾಟಕ ಕ್ಷೇತ್ರಕ್ಕೆ ಒಲವು ಹರಿಸಿದರು. ಸಂಗಮ ಕಲಾವಿದರು ನಾಟಕ ಸಂಸ್ಥೆಯ ಮೂಲಕ ರಂಗಕಲಾವಿದರಾಗಿ ನಾಟಕದಲ್ಲಿ ಅಭಿನಯಿಸಿರುವ ಅವರು 60ಕ್ಕೂ ಹೆಚ್ಚು ನಾಟಕಗಳಲ್ಲಿ ಮುಖ್ಯ ನಾಯಕನ ಪಾತ್ರ, ಹಾಸ್ಯ ಕಲಾವಿದರಾಗಿ, ಅಜ್ಜನ ಪಾತ್ರ, ಕುಡುಕನ ಪಾತ್ರ ಇತ್ಯಾದಿಯಾಗಿ ನಟಿಸಿದರು.

ಪುರಂದರನ ಪುನರ್‌ಜನ್ಮ ನಾಟಕವು ಮದ್ಯಪಾನದಿಂದಾಗುವ ಹಾನಿಯ ಬಗ್ಗೆ ಸಂದೇಶ ನೀಡಿತು.¤ ಅದರಲ್ಲಿ ಅವರ ಕುಡುಕನ ಮನೋಜ್ಞ ಪಾತ್ರ ನಿರ್ವಹಣೆ ನೋಡಿದ ಹಲವರು ಮದ್ಯ ತ್ಯಜಿಸಿದ್ದರು.
ಚಂದ್ರಪ್ಪನ ಚಟ್ಟದ ಯಾತ್ರೆ, ಪುರಂದರನ ಪುನರ್‌ಜನ್ಮ, ಮಿನಿಸ್ಟರ್‌ ಮಾಮಣ್ಣೆ, ಅಂಗಾರ, ಹಸಿರು ನಾಡಿನ ಕೆಂಪು ಹಾದಿ, ಅಟಿಲ್ದಾಯೆ ಇತ್ಯಾದಿ ಅವರ ಪ್ರಮುಖ ನಾಟಕಗಳು. ಕೆಮೂ¤ರು ದೊಡ್ಡಣ್ಣ ಶೆಟ್ಟಿ ನಾಟಕ ಸ್ಪರ್ಧೆಯಲ್ಲಿ ಶೇಷ್ಠ ನಟ ಪ್ರಶಸ್ತಿ ಸಹಿತ ಹಲವು ಪುರಸ್ಕಾರಗಳು ಸಂದಿವೆ.

ಅಕಾಡೆಮಿ ಪ್ರಶಸ್ತಿ ತುಂಬ ಖುಷಿ ತಂದಿದೆ. ಮಕ್ಕಳಿಗೆ ನಾಟಕ ತರಬೇತಿ ನೀಡುವ ಸಂಸ್ಥೆ ಹುಟ್ಟುಹಾಕುವ ಯೋಜನೆ ಇದೆ.
-ಭಾಸ್ಕರ ಪೂಜಾರಿ

Advertisement

Udayavani is now on Telegram. Click here to join our channel and stay updated with the latest news.

Next