Advertisement

ಅಂತಾರಾಜ್ಯ, ಅಂತರ್ ಜಿಲ್ಲಾ ಸಂಚಾರ ಸಂಭವ

09:29 AM May 02, 2020 | mahesh |

ಉಡುಪಿ: ದೇಶಾದ್ಯಂತ ಮೇ 3ರಿಂದ ಲಾಕ್‌ಡೌನ್‌ ಮತ್ತೆರಡು ವಾರ ವಿಸ್ತರಣೆಯಾದರೂ ಮೇ 3ರ ಬಳಿಕ ಅಂತಾರಾಜ್ಯ ಸಂಚಾರ ಆರಂಭವಾಗುವ ಸಾಧ್ಯತೆಗಳಿವೆ. ಪ್ರತಿ ಊರಿನಲ್ಲಿ ಲಾಕ್‌ಡೌನ್‌ ಕಾರಣ ಸಿಲುಕಿರುವ ಪ್ರವಾಸಿಗರು, ವಿದ್ಯಾರ್ಥಿಗಳು, ಯಾತ್ರಾರ್ಥಿಗಳು, ವಲಸೆ ಕಾರ್ಮಿಕರನ್ನು ಅವರವರ ಊರುಗಳಿಗೆ ಕಳುಹಿಸಲು ಆಯಾ ರಾಜ್ಯಗಳು ಕೇಂದ್ರ ಸರಕಾರದ ನಿರ್ದೇ ಶನದ ಪ್ರಕಾರ ಹಸುರು ಜಿಲ್ಲೆಗಳ ಆಡಳಿತಗಳು ಸಿದ್ಧತೆ ನಡೆಸುತ್ತಿವೆ.

Advertisement

ಬಸ್‌ ಸಂಚಾರ
ಜಿಲ್ಲೆಯೊಳಗೆ ಬಸ್‌ಆರಂಭಿಸುವುದಾದರೆ ಸಾಮರ್ಥ್ಯದ ಶೇ.40-50ರಷ್ಟು ಪ್ರಯಾಣಿಕರನ್ನು ಕರೆದೊಯ್ಯ ಬಹುದು. ಇದರ ಬಗ್ಗೆ ಜಿಲ್ಲಾಡಳಿತ ಸಭೆ ಕರೆದು ನಿರ್ಣಯ ತಳೆಯಲಿದೆ.
ಸದ್ಯವೇ ಮುಂಬಯಿಯಿಂದ ಕರಾವಳಿಗೆ ಬರುವವರಿಗಾಗಿ ರೈಲು ಆರಂಭವಾಗುವ ಸಾಧ್ಯತೆಯೂ ಇದೆ. ಅವರು ಬಂದಲ್ಲಿ ಆಯಾ ನಿಲ್ದಾಣ ಸಮೀಪವೇ ಕ್ವಾರಂಟೈನ್‌ ನಡೆಸುವುದೋ? ಅವರ ಮನೆಯಲ್ಲಿ ಕ್ವಾರಂಟೈನ್‌ ನಡೆಸುವುದೋ ಎಂಬುದನ್ನು ಇನ್ನಷ್ಟೆ ನಿರ್ಧರಿಸಬೇಕಾಗಿದೆ.

ಗಡಿ ದಾಟಿ ಬಂದರೆ ತಿಳಿಸಿ
ಲಾಕ್‌ಡೌನ್‌ ಅವಧಿಯಲ್ಲಿಯೂ ಹೊರ ಜಿಲ್ಲೆಗಳಿಂದ ಉಡುಪಿಗೆ ಆಗಮಿಸಿದವರಿದ್ದಾರೆ. ಇಂತಹ ಸಂದರ್ಭ ಸ್ಥಳೀಯರು ಆತಂಕಿತರಾಗಿ ಜಿಲ್ಲಾಡಳಿತಕ್ಕೆ ದೂರು ನೀಡಿದ್ದಾರೆ. ಅವರಲ್ಲಿ ಕೆಲವು ಕಾನೂನು ಬದ್ಧವಾಗಿ ಬಂದವರಾದರೆ ಕೆಲವರು ಕಣ್ಣು ತಪ್ಪಿಸಿ ಬಂದವರೂ ಇದ್ದಾರೆ. ಅಂಥವರ ಮಾಹಿತಿ ಇರುವವರು ವಿವರವಾದ (ವಿಳಾಸ, ಮೊಬೈಲ್‌ ಸಂಖ್ಯೆ, ಬಂದ ದಿನಾಂಕ, ಎಲ್ಲಿಂದ ಬಂದಿದ್ದಾರೆ) ಮಾಹಿತಿಗಳನ್ನು ಈ ಅಧಿಕಾರಿಗಳಿಗೆ ನೀಡಬೇಕು. ವಾಟ್ಸ್‌ಆ್ಯಪ್‌ ಕೂಡ ಮಾಡಬಹುದು. ಚಂದ್ರಶೇಖರ ನಾಯ್ಕ, ಉಪನಿರ್ದೇಶಕರು, ಕೃಷಿ ಇಲಾಖೆ (8277932501), ಕೃಷ್ಣ ಹೆಬ್ಸೂರ್‌, ಕಾರ್ಯ ನಿರ್ವಾಹಕ ಎಂಜಿನಿಯರ್‌, ಕೆಆರ್‌ಐಡಿಎಲ್‌ (9449534792), ಡಾ| ರೋಶನ್‌ ಕುಮಾರ್‌ ಶೆಟ್ಟಿ, ಸಹಾಯಕ ನಿರ್ದೇಶಕರು, ಯುವಜನ ಮತ್ತು ಕ್ರೀಡಾ ಇಲಾಖೆ (9845432303).

Advertisement

Udayavani is now on Telegram. Click here to join our channel and stay updated with the latest news.

Next