Advertisement

ಮುಚ್ಚುವ ಹಂತದಲ್ಲಿ ಸಾರ್ವಜನಿಕ ಶೌಚಾಲಯ

11:04 PM Jul 05, 2019 | Sriram |

ಶಿರ್ವ: ಕೆಲ ತಿಂಗಳ ಹಿಂದೆ ಮುಚ್ಚಿ ಬೀಗ ಹಾಕಿದ್ದ ಶಿರ್ವ ಮಂಚಕಲ್‌ ಪೇಟೆಯ ಬಸ್‌ಸ್ಟಾಂಡ್‌ ಬಳಿಯಿರುವ ಸಾರ್ವಜನಿಕ ಶೌಚಾಲಯ ತೆರೆದು ತಿಂಗಳು ಕಳೆದಿದೆ.ಆದರೆ ಇದೀಗ ಸಾರ್ವಜನಿಕರಿಂದ ಸೂಕ್ತ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ನಿರ್ವಹಣೆಯ ವೆಚ್ಚ ಭರಿಸಲಾಗದೆ ಮತ್ತೆ ಮುಚ್ಚುವ ಪರಿಸ್ಥಿತಿ ಎದುರಾಗಿದೆ.

Advertisement

ಹೊರಗುತ್ತಿಗೆ ನಿರ್ವಹಣೆ
ಇಲ್ಲಿನ ಶೌಚಾಲಯವನ್ನು ಖಾಸಗಿಯವರಿಗೆ ನಿರ್ವಹಣೆ ನಡೆಸಲು ಹೊರಗುತ್ತಿಗೆ ನೀಡಲಾಗಿತ್ತು.ಅವರು ಸಾರ್ವಜನಿಕರಿಂದ ಶುಲ್ಕ ಪಡೆದು ನಿರ್ವಹಣೆ ನಡೆಸುತ್ತಿದ್ದರು. ಶೌಚಾಲಯಕ್ಕೆ ಬಂದವರಿಂದ ವಸೂಲು ಮಾಡುವ ಶುಲ್ಕದಲ್ಲಿ ಜೀವನ ಸಾಗಿಸಲು ಅಸಾಧ್ಯವಾದ ಹಿನ್ನೆಲೆಯಲ್ಲಿ ಶೌಚಾಲಯದ ನಿರ್ವಹಣೆ ನಡೆಸುತ್ತಿದ್ದ ವ್ಯಕ್ತಿ ಪಂಚಾಯತ್‌ಗೆ ತಿಳಿಸದೆ ಬೀಗ ಜಡಿದು ಹೋಗಿದ್ದರಿಂದಾಗಿ ಕೆಲವು ತಿಂಗಳುಗಳಿಂದ ಶೌಚಾಲಯ ಮುಚ್ಚಿ ತ್ತು. ಜನನಿಬಿಡ ಪ್ರದೇಶವಾಗಿದ್ದರಿಂದ ಸಾರ್ವಜನಿಕರು, ಪ್ರಯಾಣಿಕರು ದೇಹಬಾಧೆ ತೀರಿಸಲು ಶೌಚಾಲಯ ಹುಡುಕಿಕೊಂಡು ಹೋಗುವ ಪರಿಸ್ಥಿತಿ ಇತ್ತು.

ಇದೀಗ ಪಂಚಾಯತ್‌ ಆಡಳಿತ ಶೌಚಾಲಯ ನಿರ್ವಹಣೆಗೆ ಬದಲಿ ವ್ಯವಸ್ಥೆಮಾಡಿದ್ದು ಸಾರ್ವಜನಿಕರಿಂದ ಸೂಕ್ತ ಸ್ಪಂದನೆ ದೊರೆಯದೆ ನಿರ್ವಹಿಸಲು ಬೇಕಾದ ಶುಲ್ಕ ಪಾವತಿಯಾಗದ ಹಿನ್ನೆಲೆಯಲ್ಲಿ ಸಮಸ್ಯೆ ಪುನರಾವರ್ತನೆಯಾಗಲಿದೆ.

ಸಾರ್ವಜನಿಕರಿಗೆ ಉಂಟಾದ ಸಮಸ್ಯೆಗೆ ಪರಿಹಾರ ಕಲ್ಪಿಸಿಕೊಡಲು ಪಂಚಾಯತ್‌ ಆಡಳಿತ ಸ್ಥಳೀಯ ರೋರ್ವರನ್ನು ನೇಮಿಸಿದೆ. ಕಡ್ಡಾಯ ಶುಲ್ಕ ವಿಧಿಸಿದ ಫಲಕ ಹಾಕಿದ ಬಳಿಕ ಸಾರ್ವಜನಿಕರು ಮೂತ್ರ ವಿಸರ್ಜನೆಗೆ ಹಿಂದೇಟು ಹಾಕುತ್ತಿದ್ದು, ಸಾರ್ವಜನಿಕ ಸ್ಥಳವಾದ ಮಾರುಕಟ್ಟೆ ಪ್ರದೇಶ, ವಿಮಲ್‌ ಕಾಂಪ್ಲೆಕ್ಸ್‌ನ ಹಿಂದುಗಡೆ, ಕಾಂತಿ ಬಾರ್‌ನ ಹಿಂದುಗಡೆ ಹೋಗಿ ತಮ್ಮ ದೇಹಬಾಧೆ ತೀರಿಸಿಕೊಳ್ಳುತ್ತಿದ್ದು ಪರಿಸರದಲ್ಲಿ ದುರ್ನಾತ ಬೀರುತ್ತಿದೆ ಎಂದು ಪಿಡಿಒ ಅನಂತ ಪದ್ಮನಾಭ ನಾಯಕ್‌ ತಿಳಿಸಿದ್ದಾರೆ.

ಸಾರ್ವಜನಿಕರು, ಪ್ರಯಾಣಿಕರು ಹಾಗೂ ಬಸ್‌ ಸಿಬಂದಿ ಸರಿಯಾದ ಶುಲ್ಕ ಪಾವತಿ ಮಾಡಿ ಶೌಚಾಲಯ ಬಳಸಿ ಪಂಚಾಯತ್‌ ಆಡಳಿತದೊಂದಿಗೆ ಸಹಕರಿಸಬೇಕಿದೆ ಎಂದು ಅವರು ವಿನಂತಿಸಿದ್ದಾರೆ.

Advertisement

ದಂಡ ವಿಧಿಸಲಾಗುವುದು
ಸ್ವತ್ಛಮೇವ ಜಯತೇ,ಸ್ವತ್ಛ ಭಾರತ ಪರಿಕಲ್ಪನೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ದೇಹಬಾಧೆ ತೀರಿಸುವ ವ್ಯಕ್ತಿಯ ಫೋಟೋ ತೆಗೆದು ಪಂಚಾಯತ್‌ಗೆ ನೀಡಿದಲ್ಲಿ ಅವರನ್ನು ಗುರುತಿಸಿ ಯಾವುದೇ ಮುಲಾಜಿಲ್ಲದೆ 500/-ರೂ.ದಂಡ ವಿಧಿಸಲಾಗುವುದು.
-ಅನಂತ ಪದ್ಮನಾಭ ನಾಯಕ್‌, ಪಿಡಿಒ, ಶಿರ್ವ

ಜೀವನ ಸಾಗಿಸಲು ಕಷ್ಟ
ದಿನವಿಡೀ ಕುಳಿತರೂ 200 ರೂ. ಶುಲ್ಕ ಸಿಗುವುದಿಲ್ಲ. ಗುರುವಾರ ಸಂತೆಯ ದಿನ 350 ರಿಂದ 400 ಕಲೆಕ್ಷನ್‌ ಆಗುತ್ತದೆ. ಇದರಿಂದ ಶೌಚಾಲಯ ನಿರ್ವಹಣೆ ನಡೆಸಿ ಜೀವನ ಸಾಗಿಸಲು ಕಷ್ಟವಾಗಿದೆ.
– ಶಂಕರ, ಶೌಚಾಲಯ, ನಿರ್ವಾಹಕ

Advertisement

Udayavani is now on Telegram. Click here to join our channel and stay updated with the latest news.

Next