Advertisement

ಜೀವನದ ಕೊನೆ ಉಸಿರಿರುವರೆಗೂ ಜನಸೇವೆ

06:12 PM Sep 19, 2022 | Team Udayavani |

ಔರಾದ: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕರಾಗಿ ಆಯ್ಕೆ ಆಗಿರುವ ಡಿಸಿಸಿ ಬ್ಯಾಂಕ್‌ ಅಧ್ಯಕ್ಷರೂ ಆಗಿರುವ ಉಮಾಕಾಂತ ನಾಗಮಾರಪಳ್ಳಿ ಅವರಿಗೆ ಪಟ್ಟಣದ ಡಾ| ಗುರುಪಾದಪ್ಪ ನಾಗಮಾರಪಳ್ಳಿ ಕಲ್ಯಾಣ ಮಂಟಪದಲ್ಲಿ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘಗಳ ಆಡಳಿತ ಮಂಡಳಿ, ಕಮಲನಗರ, ಔರಾದ್‌ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಆಡಳಿತ ಮಂಡಳಿ ಹಾಗೂ ನಾಗಮಾರಪಳ್ಳಿ ಅಭಿಮಾನಿ ಬಳಗದಿಂದ ಅದ್ಧೂರಿ ಸನ್ಮಾನ ನಡೆಯಿತು.

Advertisement

ಡಿಸಿಸಿ ಬ್ಯಾಂಕ್‌ ಅಧ್ಯಕ್ಷರಾದ ಉಮಾಕಾಂತ ನಾಗಮಾರಪಳ್ಳಿ ಮಾತನಾಡಿ, ಸಹಕಾರ ಮತ್ತು ರಾಜಕೀಯ ಕ್ಷೇತ್ರದಲ್ಲಿ ನಮ್ಮ ತಂದೆಯವರು ಮಾಡಿರುವ ಸೇವೆ ಮತ್ತು ಅವರು ಆಯೋಜಿಸಿರುವ ಸಮಾಜಮುಖೀ ಅಭಿವೃದ್ಧಿ ಕಾರ್ಯಕ್ರಮಗಳು ಸೂರ್ಯಚಂದ್ರರಿಬ್ಬರು ಇರುವ ತನಕವು ಇರುತ್ತವೆ. ಔರಾದ್‌ ಹಾಗೂ ಕಮಲನಗರ ತಾಲೂಕಿನ ಜನತೆ ನಮ್ಮ ಕುಟುಂಬದ ಮೇಲೆ ಇಟ್ಟಿರುವ ನಂಬಿಕೆ ವಿಶ್ವಾಸ ಸ್ಮರಿಸಿ, ತಂದೆಯವರು ಹಾಕಿಕೊಟ್ಟ ದಾರಿ ಮತ್ತು ನೀಡಿರುವ ಮಾರ್ಗದರ್ಶನದಂತೆ ನಾವಿಬ್ಬರು ಸಹೋದರರು ಕಾರ್ಯನಿರ್ವಹಿಸುತ್ತಿದ್ದೇವೆ ಎಂದರು.

ಜಿಲ್ಲಾ ಸಹಕಾರ ಬ್ಯಾಂಕ್‌ ರೈತರ ಕೃಷಿ ಕ್ಷೇತ್ರಕ್ಕೆ ಉತ್ತೇಜನೆ ನೀಡುವುದರ ಜೊತೆಗೆ ಮಹಿಳೆಯರಿಗೆ ಸ್ವಸಹಾಯ ಗುಂಪುಗಳು ಮಾಡಿ ಸಂಘದ ಹೆಣ್ಣು ಮಕ್ಕಳಿಗೆ ಸಾಲ ನೀಡು ಹಣಕಾಸಿನ ವ್ಯವಹಾರ ಕಲಿಸಿಕೊಟ್ಟಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಹೆಣ್ಣು ಮಕ್ಕಳು ವಿದ್ಯಾಭ್ಯಾಸ ಮಾಡದೇ ಇದ್ದರೂ ಕೂಡಾ ಸರಿಯಾಗಿ ವ್ಯವಹಾರ ಜ್ಞಾನ ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು.

ಜಿಲ್ಲಾ ಸಹಕಾರ ಬ್ಯಾಂಕಿನ ನೇತೃತ್ವವನ್ನು ವಹಿಸಿಕೊಂಡು ಸಮಯಕ್ಕೆ ಸರಿಯಾಗಿ ರೈತರಿಗೆ ಬೇಕಾದ ಕೃಷಿ ಸಾಲಗಳನ್ನು ಮತ್ತು ರಸಗೊಬ್ಬರ ಪೂರೈಸಲಾಗಿದೆ. ಬ್ಯಾಂಕ್‌ ಕೃಷಿ ಕ್ಷೇತ್ರಕ್ಕೆ ನೀಡಿರುವ ಸುಮಾರು 954 ಕೋಟಿ ರೂ. ಸಾಲವನ್ನು ರೈತರು ಸದುಪಯೋಗ ಪಡಿಸಿಕೊಂಡು ಕೃಷಿ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಬ್ಯಾಂಕ್‌ ಆರ್ಥಿಕವಾಗಿ ಸದೃಢ ಹೊಂದಿದ್ದು, ರೈತರಿಗೆ ಸಮರ್ಪಕವಾಗಿ ಸಾಲದ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಇದರಿಂದಾಗಿಯೇ ಸರ್ಕಾರದ
ಎರಡು ಬಾರಿಯ ಸಾಲಮನ್ನಾ ಯೋಜನೆಯಡಿ ಬೀದರ್‌ ಜಿಲ್ಲೆಯ ರೈತರಿಗೆ ಸುಮಾರು 946 ಕೋಟಿಗಳಷ್ಟು ಸಾಲಮನ್ನಾದ ಲಾಭ ದೊರಕಿದೆ ಎಂದರು.

ಕಳೆದ 13 ವರ್ಷಗಳಿಂದ ಕಮಲನಗರ ಹಾಗೂ ಔರಾದ ತಾಲೂಕಿನ ಜನತೆ ನಮ್ಮ ಹಾಗೂ ನಮ್ಮ ಕುಟುಂಬದ ಮೇಲೆ ಇಟ್ಟಿರುವ ಪ್ರೀತಿಯನ್ನು ಇಂದು ಕಾರ್ಯಕ್ರಮದಲ್ಲಿ ಕಾಣುತ್ತಿದ್ದೇವೆ. 30 ಸಾವಿರಕ್ಕೂ ಹೆಚ್ಚು ಜನರು ಕಾರ್ಯಕ್ರಮಕ್ಕೆ ಬಂದಿರುವುದು ನಮ್ಮ ಪುಣ್ಯವಾಗಿದೆ. ಜೀವನದ ಕೊನೆಯ ಉಸಿರು ಇರುವ ತನಕ ಕಾರ್ಯಕರ್ತರ ಕಷ್ಟಸುಖದಲ್ಲಿ ಭಾಗಿಯಾಗಿ ಇರುತ್ತೇವೆ. ಕಾರ್ಯಕತರು ನಮ್ಮ ಪಾಲಿನ ದೇವರು ಇದ್ದಂತೆ ಎಂದು ಹೇಳಿದರು.

Advertisement

ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಸೂರ್ಯಕಾಂತ ನಾಗಮಾರಪಳ್ಳಿ ಮಾತನಾಡಿ, ತಂದೆಯವರು ಸ್ವಂತಕ್ಕಾಗಿ ಯಾವುದೇ ಸಂಸ್ಥೆಗಳು, ಶಾಲಾ ಕಾಲೇಜುಗಳು ಮಾಡದೇ ಸಹಕಾರ ಕ್ಷೇತ್ರದಿಂದ ಮಾತ್ರ ಸರ್ವಜನರ ಅಭಿವೃದ್ಧಿ ಸಾಧ್ಯವೆಂದು ತೋರಿಸಿಕೊಟ್ಟಿದ್ದಾರೆ. ತಂದೆಯವರು ಇಡೀ ರಾಜ್ಯದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಸಹಕಾರದ ತತ್ವದ ಅಡಿಯಲ್ಲೆಯೇ ಡಾ| ಗುರುಪಾದಪ್ಪ ನಾಗಮಾರಪಳ್ಳಿ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ನಿರ್ಮಿಸಿ ಜಿಲ್ಲೆ ಮತ್ತು ಅಕ್ಕಪಕ್ಕದ ಗಡಿರಾಜ್ಯಗಳ ಕುಟುಂಬಗಳಿಗೆ ಆರೋಗ್ಯ ಕ್ಷೇತ್ರದಲ್ಲಿ ಸೇವೆಯನ್ನು ನೀಡುತ್ತಿರುವುದು ಸಹಕಾರಿ ಕ್ಷೇತ್ರದಲ್ಲಿ ಏಕೈಕ ಆಸ್ಪತ್ರೆಯಾಗಿದೆ ಎಂದರು.

ಡಾ| ಬಸವಲಿಂಗ ಪಟ್ಟದೇವರು ಮಾತನಾಡಿದರು. ಬಸವರಾಜ ಹೆಬ್ಟಾಳೆ,ಗುಂಡಯ್ಯ ಸ್ವಾಮಿ, ಪ್ರಭುರಾವ ಕಸ್ತೂರೆ, ರಘುನಾಥರಾವ ಕುಲಕರ್ಣಿ, ಅಮೃತಪ್ಪ ಪಾರಾ, ರಮೇಶ ದೇವಕತ್ತೆ, ಭೀಮರಾವ್‌ ಪಾಟೀಲ ಡಿಗ್ಗಿ, ಸುರೇಶ ಪಾಟೀಲ ದಾಬಕಾ, ವಿಠಲರೆಡ್ಡಿ ಬುರಡೆ ಸಾವರಗಾಂವ, 12 ರಾಮದಾಸ್‌ ಚೋಂಡಿಮುಖೇಡ, ಅಶೋಕರಾವ ಮುಳೆ, ಮಾಧವರಾವ್‌ ಪಾಟೀಲ, ಪ್ರಕಾಶ ಘೂಳೆ, ಬಂಡೆಪ್ಪ ಕಂಟೆ, ರವಿ ಮೀಸೆ, ಅಶೋಕ ಶೆಟಕಾರ ಯನಗುಂದಾ, ಶರಣಪ್ಪ ಪಂಚಾಕ್ಷರಿ, ವಿಠಲರೆಡ್ಡಿ ಬುರಡೆ, ಕಾಂಗ್ರೆಸ್‌ ಮುಖಂಡ ಭೀಮಸೇನರಾವ್‌ ಶಿಂಧೆ, ಏಕತಾ ಫೌಂಡೇಶನ್‌ ರವಿ ಸ್ವಾಮಿ, ಲಕ್ಷ ¾ಣರಾವ್‌ ಬುಳ್ಳಾ, ಅರುಣ ಹೋತಪೇಟ, ಅಮಿತ ಕೋಟೆ, ಸಂಗಮೇಶ ಪಾಟೀಲ ಇತರರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next