Advertisement
ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಉಮಾಕಾಂತ ನಾಗಮಾರಪಳ್ಳಿ ಮಾತನಾಡಿ, ಸಹಕಾರ ಮತ್ತು ರಾಜಕೀಯ ಕ್ಷೇತ್ರದಲ್ಲಿ ನಮ್ಮ ತಂದೆಯವರು ಮಾಡಿರುವ ಸೇವೆ ಮತ್ತು ಅವರು ಆಯೋಜಿಸಿರುವ ಸಮಾಜಮುಖೀ ಅಭಿವೃದ್ಧಿ ಕಾರ್ಯಕ್ರಮಗಳು ಸೂರ್ಯಚಂದ್ರರಿಬ್ಬರು ಇರುವ ತನಕವು ಇರುತ್ತವೆ. ಔರಾದ್ ಹಾಗೂ ಕಮಲನಗರ ತಾಲೂಕಿನ ಜನತೆ ನಮ್ಮ ಕುಟುಂಬದ ಮೇಲೆ ಇಟ್ಟಿರುವ ನಂಬಿಕೆ ವಿಶ್ವಾಸ ಸ್ಮರಿಸಿ, ತಂದೆಯವರು ಹಾಕಿಕೊಟ್ಟ ದಾರಿ ಮತ್ತು ನೀಡಿರುವ ಮಾರ್ಗದರ್ಶನದಂತೆ ನಾವಿಬ್ಬರು ಸಹೋದರರು ಕಾರ್ಯನಿರ್ವಹಿಸುತ್ತಿದ್ದೇವೆ ಎಂದರು.
ಎರಡು ಬಾರಿಯ ಸಾಲಮನ್ನಾ ಯೋಜನೆಯಡಿ ಬೀದರ್ ಜಿಲ್ಲೆಯ ರೈತರಿಗೆ ಸುಮಾರು 946 ಕೋಟಿಗಳಷ್ಟು ಸಾಲಮನ್ನಾದ ಲಾಭ ದೊರಕಿದೆ ಎಂದರು.
Related Articles
Advertisement
ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಸೂರ್ಯಕಾಂತ ನಾಗಮಾರಪಳ್ಳಿ ಮಾತನಾಡಿ, ತಂದೆಯವರು ಸ್ವಂತಕ್ಕಾಗಿ ಯಾವುದೇ ಸಂಸ್ಥೆಗಳು, ಶಾಲಾ ಕಾಲೇಜುಗಳು ಮಾಡದೇ ಸಹಕಾರ ಕ್ಷೇತ್ರದಿಂದ ಮಾತ್ರ ಸರ್ವಜನರ ಅಭಿವೃದ್ಧಿ ಸಾಧ್ಯವೆಂದು ತೋರಿಸಿಕೊಟ್ಟಿದ್ದಾರೆ. ತಂದೆಯವರು ಇಡೀ ರಾಜ್ಯದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಸಹಕಾರದ ತತ್ವದ ಅಡಿಯಲ್ಲೆಯೇ ಡಾ| ಗುರುಪಾದಪ್ಪ ನಾಗಮಾರಪಳ್ಳಿ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ನಿರ್ಮಿಸಿ ಜಿಲ್ಲೆ ಮತ್ತು ಅಕ್ಕಪಕ್ಕದ ಗಡಿರಾಜ್ಯಗಳ ಕುಟುಂಬಗಳಿಗೆ ಆರೋಗ್ಯ ಕ್ಷೇತ್ರದಲ್ಲಿ ಸೇವೆಯನ್ನು ನೀಡುತ್ತಿರುವುದು ಸಹಕಾರಿ ಕ್ಷೇತ್ರದಲ್ಲಿ ಏಕೈಕ ಆಸ್ಪತ್ರೆಯಾಗಿದೆ ಎಂದರು.
ಡಾ| ಬಸವಲಿಂಗ ಪಟ್ಟದೇವರು ಮಾತನಾಡಿದರು. ಬಸವರಾಜ ಹೆಬ್ಟಾಳೆ,ಗುಂಡಯ್ಯ ಸ್ವಾಮಿ, ಪ್ರಭುರಾವ ಕಸ್ತೂರೆ, ರಘುನಾಥರಾವ ಕುಲಕರ್ಣಿ, ಅಮೃತಪ್ಪ ಪಾರಾ, ರಮೇಶ ದೇವಕತ್ತೆ, ಭೀಮರಾವ್ ಪಾಟೀಲ ಡಿಗ್ಗಿ, ಸುರೇಶ ಪಾಟೀಲ ದಾಬಕಾ, ವಿಠಲರೆಡ್ಡಿ ಬುರಡೆ ಸಾವರಗಾಂವ, 12 ರಾಮದಾಸ್ ಚೋಂಡಿಮುಖೇಡ, ಅಶೋಕರಾವ ಮುಳೆ, ಮಾಧವರಾವ್ ಪಾಟೀಲ, ಪ್ರಕಾಶ ಘೂಳೆ, ಬಂಡೆಪ್ಪ ಕಂಟೆ, ರವಿ ಮೀಸೆ, ಅಶೋಕ ಶೆಟಕಾರ ಯನಗುಂದಾ, ಶರಣಪ್ಪ ಪಂಚಾಕ್ಷರಿ, ವಿಠಲರೆಡ್ಡಿ ಬುರಡೆ, ಕಾಂಗ್ರೆಸ್ ಮುಖಂಡ ಭೀಮಸೇನರಾವ್ ಶಿಂಧೆ, ಏಕತಾ ಫೌಂಡೇಶನ್ ರವಿ ಸ್ವಾಮಿ, ಲಕ್ಷ ¾ಣರಾವ್ ಬುಳ್ಳಾ, ಅರುಣ ಹೋತಪೇಟ, ಅಮಿತ ಕೋಟೆ, ಸಂಗಮೇಶ ಪಾಟೀಲ ಇತರರಿದ್ದರು.