Advertisement

ಸಾರ್ವಜನಿಕ ರಸ್ತೆ ತೆರವು

05:04 AM Jul 11, 2020 | Lakshmi GovindaRaj |

ಕೆ.ಆರ್‌.ಪೇಟೆ: ತಾಲೂಕಿನ ವರಹನಾಥ ಕಲ್ಲಹಳ್ಳಿ ಬಳಿ ಕೆಲವರು ಕೋವಿಡ್‌ 19 ಭೀತಿಯಿಂದ ಪುರಾಣ ಪ್ರಸಿದ ಭೂ ವರಾಹ ನಾಥ ದೇವಾಲಯಕ್ಕೆ ಭಕ್ತಾದಿಗಳು ಬರ ದಂತೆ ಸಾರ್ವಜನಿಕ ರಸ್ತೆ ಕಲ್ಲು ಮಣ್ಣು ಸುರಿದು ಅಡ್ಡಿಪಡಿಸಿದ್ದನ್ನು  ತಾಲೂಕು ಆಡಳಿತದಿಂದ ತೆರವುಗೊಳಿಸಲಾಯಿತು.

Advertisement

ಹೇಮಾವತಿ ನದಿ ದಡದಲ್ಲಿ ಕೆಆರ್‌ ಎಸ್‌ ಹಿನ್ನೀರಿಗೆ ಹೊಂದಿಕೊಂಡಂತೆ ಭೂ ವರಾಹನಾಥ ದೇಗುಲವಿದ್ದು, ಪರಕಾಲ  ಮಠ ದೇವಾಲಯದ ಅಭಿವೃದಿ ಮಾಡುತ್ತಿದೆ. ಇದರಿಂದ  ಬೆಂಗಳೂರು ನಗರ ಸೇರಿದಂತೆ ರಾಜ್ಯದ ಹಲವು ಭಾಗ ಗಳಿಂದ ನಿತ್ಯ ನೂರಾರು ಜನ ಭಕ್ತರು ದೇವಾಲಯಕ್ಕೆ ಆಗಮಿಸುತ್ತಿದ್ದಾರೆ.

ಈ ದೇವಾಲಯದಿಂದ ಇಟ್ಟಿಗೆ ಪೂಜೆ ಮಾಡಿಸಿಕೊಂಡು ಮನೆ ನಿರ್ಮಿಸಿದರೆ ಯಶಸ್ಸು ಎನ್ನುವ  ನಂಬಿಕೆಯಿಂದ ಭಕ್ತರು ನಿತ್ಯ ಪೂಜೆಗೆ ಬರುತ್ತಾರೆ. ದೇವಾಲಯ ಆಡಳಿತ ಸಮಿತಿ ಕೋವಿಡ್‌ 19 ಹಿನ್ನೆಲೆಯಲ್ಲಿ ದೇಗುದ ಬಳಿಯಲ್ಲಿದ್ದ ಅಂಗಡಿಗಳನ್ನು ತೆರವುಗೊಳಿಸಿತ್ತು. ಅಲ್ಲದೆ, ಸಾರ್ವಜನಿಕ  ರಸ್ತೆಯನ್ನು ದೇವಾಲಯದಿಂದ ಬಂದ್‌  ಮಾಡಿದ್ದರು.

ಇದರಿಂದ ದೇವಾಲಯಕ್ಕೆ ಸ್ವಂತ ವಾಹನಗಳಲ್ಲಿ ಆಗಮಿಸುವ ಭಕ್ತರು ನಡೆದು ದೇವಾಲಯಕ್ಕೆ ಬಂದು ದೇವರ ದರ್ಶನ ಮಾಡಬೇಕಾಗಿತ್ತು.ರಸ್ತೆ ಬಂದ್‌ ವಿಚಾರ ತಿಳಿದ ತಹಶೀ ಲ್ದಾರ್‌ ಎಂ. ಶಿವ ಮೂರ್ತಿ ಕೆ.ಆರ್‌.ಪೇಟೆ  ಗ್ರಾಮಾಂತರ ಪೊಲೀಸರ ನೆರನಿಂದ ಜೆಸಿಬಿ ಯಂತ್ರ ಬಳಸಿ ರಸ್ತೆಯನ್ನು ತೆರವುಗೊಳಿಸಿ, ಭಕ್ತರಿಗೆ ಅನುಕೂಲ ಕಲ್ಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next