Advertisement

ಮೂಲ ಸೌಕರ್ಯಕ್ಕೆ ಆಗ್ರಹಿಸಿ ಸಾರ್ವಜನಿಕರ ಪ್ರತಿಭಟನೆ

03:36 PM Dec 03, 2019 | Team Udayavani |

ಬೇಲೂರು: ಪುರಸಭೆ ಪಟ್ಟಣದ ಶಂಕರ ದೇವರ ಪೇಟೆ ಬಡಾವಣೆಗೆ ಮೂಲ ಸೌಕರ್ಯ ಒದಗಿಸುವಂತೆ ಒತ್ತಾಯಿಸಿ ನಿವಾಸಿಗಳು ಪ್ರತಿಭಟನೆ ನಡೆಸಿದರು.

Advertisement

ಪುರಸಭೆ ವ್ಯಾಪ್ತಿಯ ಶಂಕರದೇವರಪೇಟೆ ರಸ್ತೆಯಲ್ಲಿ ಸುಮಾರು 3 ವರ್ಷಗಳಿಂದ ಕೇಬಲ್‌ ಅಳ ವಡಿಸಲು ಗುಂಡಿ ತೋಡಿರುವುದರಿಂದ ಎರಡೂಬದಿಯ ರಸ್ತೆ ಸಂಪೂರ್ಣ ಹಾಳಾಗಿದ್ದು, ಸಾರ್ವಜನಿಕರ ಸಂಚಾರಕ್ಕೆ ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರತಿಭಟನಾಕಾರರು ಆಪಾದಿಸಿದರು.

ಪುರಸಭೆ ನಿರ್ಲಕ್ಷ್ಯ: ಈ ಸಂದರ್ಭದಲ್ಲಿ ಮಾತನಾಡಿದ ಸ್ಥಳೀಯ ನಿವಾಸಿ ಚಂದ್ರೇಗೌಡ, ಇಲ್ಲಿಯ ಪೆಟ್ರೋಲ್‌ ಬಂಕ್‌ ಮುಂಭಾಗದಿಂದ ಶಂಕರದೇವರ ಪೇಟೆಯವರೆಗೂ ಕೇಬಲ್‌

ಅಳವಡಿಸಲು 3 ವರ್ಷದ ಹಿಂದೆ ರಸ್ತೆಯನ್ನುಅಗೆದು ಹಾಳುಮಾಡಿ ಕೇವಲ ಮಣ್ಣು ಮುಚ್ಚಿದ್ದರಿಂದ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಸಂಪೂರ್ಣ ಹದಗೆಟ್ಟು ಸಾರ್ವಜನಿಕರಿಗೆತೊಂದರೆಯಾಗುತ್ತಿದೆ. ರಸ್ತೆ ದುರಸ್ತಿ ಮಾಡುವಂತೆ ಪುರಸಭೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಈ ಬಗ್ಗೆ ಗಮನ ಹರಿಸಿಲ್ಲ ಎಂದು ಆಪಾದಿಸಿದರು. ರಸ್ತೆ ದುರವಸ್ಥೆಯಿಂದ ಬೇಸತ್ತು ಸ್ಥಳೀಯ ನಿವಾಸಿಗಳೇ ಗುಂಡಿ ಮುಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದರು.

ಬೀದಿ ದೀಪವಿಲ್ಲದೇ ತೊಂದರೆ : ಶಂಕರ ದೇವರ ಪೇಟೆ ಬಡಾವಣೆ ಮೂಲ ಸೌಕರ್ಯಗಳಿಂದ ವಂಚಿತವಾಗಿದೆ. ಬೀದಿ ದೀಪಗಳಿಲ್ಲದೆ ರಾತ್ರಿ ವೇಳೆಮಹಿಳೆಯರು ಹಾಗೂ ಹಿರಿಯ ನಾಗರಿಕರು ತಿರುಗಾಡದಂತಹಾ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ಪಟ್ಟಣದ ಎಲ್ಲಾ ವಾರ್ಡ್‌ ಗಳಲೂ ಕಾಂಕ್ರೀಟ್‌ ರಸ್ತೆ ನಿರ್ಮಾಣವಾಗಿದೆ ಆದರೆ 16 ನೇ ವಾರ್ಡಿನ ಶಂಕರದೇವರ ಪೇಟೆಯಲ್ಲಿ ಸೌಕರ್ಯವಿಲ್ಲದೇ ಬಡಾವಣೆಯ ಜನರು ತೊಂದರೆಗೊಳಗಾಗಿದ್ದಾರೆ. ಸಂಬಂಧಪಟ್ಟವರು ಕೂಡಲೇ ಸೌಕರ್ಯ ಕಲ್ಪಿಸದಿದ್ದರೆ ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯುವುದಾಗಿ ಎಚ್ಚರಿಸಿದರು.

ಕುಡುಕರ ಹಾವಳಿ :ಬಡಾವಣೆ ನಿವಾಸಿ ಪುಷ್ಪರಾಜ್‌ ಸಿಂಗ್‌ ಮಾತನಾಡಿ, ಬಡಾವಣೆಯಲ್ಲಿ ಕುಡುಕರ ಹಾವಳಿ ವಿಪರೀತವಾಗಿದ್ದು, ರಾತ್ರಿ ವೇಳೆ ಕುಡಿದು ಗಲಾಟೆ ಮಾಡುವುದರಿಂದ ಇಲ್ಲಿನ ಜನರಿಗೆ ತೊಂದರೆ ಯಾಗಿದೆ. ಪೊಲೀಸರು ಕುಡುಕರ ಹಾವಳಿ ನಿಯಂತ್ರಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ರಾಮೇಗೌಡ, ಹಾಲಪ್ಪ, ಸಂತೋಷ್‌,ಲಕ್ಷ್ಮಣ್‌, ಗಿರೀಶ್‌ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next