Advertisement

ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ

07:55 PM Oct 11, 2020 | Suhan S |

ಚಿತ್ರದುರ್ಗ: ಮುರುಘಾ ಮಠದ ಮುಂಭಾಗದಲ್ಲಿರುವ ಕೆರೆ ಭರ್ತಿಯಾಗಿ ಮಠದ ಕುರುಬರಹಟ್ಟಿ ಗ್ರಾಮದೊಳಗೆ ನೀರು ನುಗ್ಗುವ ಅಪಾಯವಿದೆ. ಆದರೂ ಅಧಿಕಾರಿಗಳು ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಸ್ಥಳೀಯರು ಪ್ರತಿಭಟಿಸಿದರು.

Advertisement

ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಳಿತು ಧರಣಿ ನಡೆಸಿದ ಪ್ರತಿಭಟನಾಕಾರರು, ಈ ಹಿಂದೆ 2010ರಲ್ಲಿ ಮಳೆಯಾದಾಗ ಈ ಭಾಗದಲ್ಲಿ ಸಾಕಷ್ಟು ಹಾನಿಯಾಗಿತ್ತು. ಈ ವರ್ಷವೂಸಾಕಷ್ಟು ಮಳೆಯಾಗುತ್ತಿದ್ದು, ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜಿಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಆರ್‌.ನರಸಿಂಹರಾಜು ಮಾತನಾಡಿ, 2010 ರಲ್ಲಿ ಭಾರಿ ಮಳೆಯಾದ ಸಂದರ್ಭದಲ್ಲಿ ಮುರುಘಾಮಠದ ಮುಂಭಾಗದಈ ಕೆರೆ ತುಂಬಿ ಎಂ.ಕೆ. ಹಟ್ಟಿ ಗ್ರಾಮದೊಳಗೆ ನೀರುನುಗ್ಗಿ 40-50 ಮನೆಗಳು ಜಲಾವೃತಗೊಂಡು ಜನರು ಸಾಕಷ್ಟು ಸಂಕಷ್ಟಗಳನ್ನು ಅನುಭವಿಸಿದರು.

ಅಂದು ಮುಖ್ಯಮಂತ್ರಿಯಾಗಿದ್ದ ಬಿ.ಎಸ್‌. ಯಡಿಯೂರಪ್ಪ ಎಂ.ಕೆ. ಹಟ್ಟಿಗೆ ಆಗಮಿಸಿ ಪರಿಸ್ಥಿತಿಯನ್ನು ಕಣ್ಣಾರೆ ಕಂಡು ಅಧಿ ಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿ ಹೋಗಿದ್ದರು. ಆದರೆ ಈವರೆಗೆ ಜಿಲ್ಲಾಡಳಿತವಾಗಲಿ, ನಗರಸಭೆಯಾಗಲಿ, ಹೆದ್ದಾರಿ ಪ್ರಾಧಿಕಾರವಾಗಲಿ ನೀರು ಗ್ರಾಮದೊಳಗೆ ನುಗ್ಗುವುದನ್ನು ತಡೆಯಲು ಯಾವುದೇ ಕ್ರಮಕೈಗೊಂಡಿಲ್ಲ ಎಂದು ದೂರಿದರು. ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ

ಬಿ.ಟಿ. ಜಗದೀಶ್‌, ಮಂಜುನಾಥ್‌, ಅಜ್ಜಣ್ಣ, ಗ್ರಾಪಂ ಮಾಜಿ ಅಧ್ಯಕ್ಷ ದಾದಾಪೀರ್‌ ಸೇರಿದಂತೆ ಮಠದಕುರುಬಹಟ್ಟಿಯ ಗ್ರಾಮಸ್ಥರು ಹಾಗೂ ನೂರಾರು ಮಹಿಳೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next