ಚಿಕ್ಕನಾಯಕನಹಳ್ಳಿ: ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ವಿನಾ ಕಾರಣ ಅಲೆದಾಡುವುದನ್ನು ತಪ್ಪಿಸಲು ಪ್ರತಿ ತಾಲೂಕಿನಲ್ಲಿಸಾರ್ವಜನಿಕರ ಕುಂದು-ಕೊರತೆ ಸಭೆ ನಡೆಸಲಾಗುತ್ತದೆ. ಸಾರ್ವಜನಿಕರಿಗೆ ಇನ್ನೂ ಸಭೆಯ ಬಗ್ಗೆ ಪ್ರಚಾರದ ಅವಶ್ಯಕತೆಯಿದ್ದು, ಮುಂದಿನ ಸಭೆಗಳಿಗೆ ಹೆಚ್ಚು ಪ್ರಚಾರ ಮಾಡುವಂತೆ ಸೂಚನೆನೀಡಲಾಗಿದೆ ಎಂದು ಲೋಕಾಯುಕ್ತ ಪೊಲೀಸ್ ಅಧಿಕಾರಿ ಶ್ರೀನಿವಾಸ್ ಹೇಳಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸಾರ್ವಜನಿಕರ ಕುಂದು-ಕೊರತೆ ಸಭೆ ನಡೆಸಿ ಮಾತನಾಡಿದ ಅವರು, ಸಭೆಗೆ ಮೂರು ಅರ್ಜಿಗಳು ಬಂದಿದ್ದು, ಹುಳಿಯಾರ್‌ನಮಲ್ಲಿಕಾರ್ಜುನ್ ಎಂಬುವವರ ಜಮೀನಿನ ಖಾತೆ ಮಾಡಿಲ್ಲ ಎಂದು ದೂರು ನೀಡಿದ್ದಾರೆ.ಶಿವಣ್ಣ ಎಂಬುವವರು ತಾಲೂಕಿನಲ್ಲಿನ ಗ್ರಾಮ ಪಂಚಾಯಿತಿಗಳಿಗೆ ಮೆಟಿರಿಯಲ್ ಸರಬರಾಜು ಮಾಡಿದ್ದು ಬಿಲ್ ಸಹ ಪಡೆದುಕೊಂಡಿದ್ದು, ಆದರೇ ಟಿಡಿಎಸ್ ಸಹ ಕಡಿತಗೊಂಡಿದೆ ಸಂಬಂಧಪಟ್ಟ ಗ್ರಾಮಪಂಚಾಯಿತಿ ಅಧಿಕಾರಿಗಳು ಸಂಬಂಧಿಸಿದ ಇಲಾಖೆಗೆ ಟಿಡಿಎಸ್ ಹಣವನ್ನು ವರ್ಗಾವಣೆ ಮಾಡಿಲ್ಲ. ಸರಕಾರಿ ಅಧಿಕಾರಿ ಮೈಲಾರಯ್ಯ ಖಾತೆಮಾಡಿಲ್ಲ ಎಂದು ದೂರು ನೀಡಿದ್ದು, ಫಾರಂ1ಮತ್ತು 2ರಲ್ಲಿ ದೂರು ದಾಖಲಿಸಿ ಎಂದು ತಿಳಿಸಲಾಗಿದೆ ಎಂದರು.
ಬಂದಿರುವ ದೂರುಗಳನ್ನು ಸಂಬಂಧಪಟ್ಟ ಇಲಾಖೆಯ ತಹಶೀಲ್ದಾರ್ ಹಾಗೂ ತಾಪಂ ಇಒ ಅವರಿಗೆ ಸಲ್ಲಿಸಲಾಗುತ್ತದೆ ಹಾಗೂ ಶೀಘ್ರವಾಗಿಸಮಸ್ಯೆ ಪರಿಹರಿಸುವಂತೆ ಸೂಚನೆ ನೀಡಲಾಗುತ್ತದೆ ಎಂದು ತಿಳಿಸಿದರು.
ಅಧಿಕಾರಿಗಳಿಂದ ಮಾಹಿತಿ: ಕುಂದು ಕೊರತೆ ಸಭೆಗೆ ಬಂದಿದ್ದ ವಿವಿಧ ಇಲಾಖೆಗಳ ಅಧಿಕಾರಿಗಳಿಂದಇಲಾಖೆಯಿಂದರೈತರಿಗೆಹಾಗೂಸಾರ್ವಜನಿಕರಿಗೆಸಿಗಬಹುದಾದ ಸೌಲಭ್ಯಗಳ ಮಾಹಿತಿಯನ್ನು ಪಡೆದುಕೊಂಡರು. ಕೃಷಿ, ತೋಟಗಾರಿಕೆ, ಕಾರ್ಮಿಕ ಇಲಾಖೆ, ಸಮಾಜಕಲ್ಯಾಣ ಇಲಾಖೆ , ರೇಷ್ಮೆಇಲಾಖೆ, ಅಬಕಾರಿ ಇಲಾಖೆ, ಅರಣ್ಯ ಇಲಾಖೆ, ಬೆಸ್ಕಾಂ, ಪಿಡಬ್ಲೂéಡಿ ಇಲಾಖೆ, ಮೀನುಗಾರಿಕೆ ಅಧಿಕಾರಿಗಳು ಸಾರ್ವಜನಿಕರಿಗೆ ಉಪಯುಕ್ತವಾಗುವ ಮಾಹಿತಿಗಳನ್ನು ಸಭೆಯಲ್ಲಿ ತಿಳಿಸಿದರು.
ಮಾಹಿತಿ ಕೊರತೆ: ಲೋಕಾಯುಕ್ತ ಅಧಿಕಾರಿಗಳಿಂದ ಸಾರ್ವಜನಿಕರ ಕುಂದುಕೊರತೆ ಸಭೆಬಗ್ಗೆ ತಾಲೂಕಿನಅಧಿಕಾರಿಗಳು ಸಾರ್ವಜನಿಕರಿಗೆ ಹೆಚ್ಚು ಪ್ರಚಾರಮಾಡುತ್ತಿಲ್ಲ, ತಾಲೂಕಿನಲ್ಲಿ ಅನೇಕ ಸಮಸ್ಯೆಗಳಿದ್ದರೂ ಮಾಹಿತಿಯ ಕೊರತೆಯಿಂದ ಸಾರ್ವಜನಿಕರು ದೂರು ನೀಡಲು ಬರುತ್ತಿಲ್ಲ, ಇದರ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ಲೋಕಾಯುಕ್ತ ಪೊಲೀಸ್ ಶ್ರೀನಿವಾಸ್‌ರಿಗೆ ಸಭೆಗೆ ಬಂದು ಸಾಮಾಜಿಕ ಕಾರ್ಯಕರ್ತ ಮಹಮ್ಮದ್ ಹುಸೇನ್ ಗುಂಡ ಮನವಿ ಮಾಡಿದರು. ಈ ಸಂದರ್ಭದಲ್ಲಿ ಬೆಸ್ಕಾಂ ಎಇಇ ಗವಿರಂಗಯ್ಯ, ಪಿಡಬ್ಲ್ಯೂಡಿ ಎಇಇ ಚಂದ್ರಶೇಖರ್, ಬಿಇಒ ಕಾತ್ಯಾಯಿನಿ ಸೇರಿದಂತೆ ತಾಲೂಕು ಪಟ್ಟದ ಅಧಿಕಾರಿಗಳು ಇತರರು ಉಪಸ್ಥಿತರಿದ್ದರು.