Advertisement

7ನೇ ತರಗತಿಗೆ ಪಬ್ಲಿಕ್ ಪರೀಕ್ಷೆ ನಡೆಸುವುದು ವಿದ್ಯಾರ್ಥಿಗಳಿಗೆ ಪ್ರಯೋಜನವಾಗಬಹುದೇ?

04:02 PM Nov 08, 2019 | keerthan |

ಮಣಿಪಾಲ: 7ನೇ ತರಗತಿಗೆ ಪಬ್ಲಿಕ್ ಪರೀಕ್ಷೆ ನಡೆಸುವುದು ವಿದ್ಯಾರ್ಥಿಗಳ ಶೈಕ್ಷಣಿಕ ದೃಷ್ಟಿಯಿಂದ ಪ್ರಯೋಜನವಾಗಬಹುದೇ? ಎಂಬ ಪ್ರಶ್ನೆಯನ್ನು ಉದಯವಾಣಿ ಕೇಳಿದ್ದು, ಉತ್ತಮ ಪ್ರತಿಕ್ರಿಯೆ ದೊರೆತಿದೆ. ಆಯ್ದ ಕೆಲವು ಪ್ರತಿಕ್ರಿಯೆಗಳು ಇಲ್ಲಿವೆ.

Advertisement

ದಯಾನಂದ ಕೊಯಿಲ: ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರನ್ನು ಆಯ್ಕೆ ಮಾಡುವಾಗ ಪ್ರತಿಭಾವಂತರಿಗೇ ಪ್ರಥಮ ಪ್ರಾಶಸ್ತ್ಯ ನೀಡುವುದು. ಖಾಸಗಿ ಶಾಲೆಗಳಲ್ಲಿ ಕೇವಲ ಪದವಿ ಪೂರ್ವ -ಪದವಿ ಶಿಕ್ಷಣ ಹೊಂದಿರುವ ಕಡಿಮೆ ವೇತನಕ್ಕೆ ಸಿಗುವ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ಸಾಮಾನ್ಯ ಆದರೆ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಣ ಸಿಗುವುದಿಲ್ಲ ಎನ್ನುವ ಜನ. ಯಾಕೆ. ಈ ನಿರ್ಧಾರ ತಗೊಳ್ತಾರೆ ಅರ್ಥ ಆಗೋದಿಲ್ಲ ಏಳನೇ ತರಗತಿ ಗೆ ಈ ಹಿಂದೆ ಇದ್ದ ಪಬ್ಲಿಕ್ ಪರೀಕ್ಷೆ ಇತ್ತು ಅದನ್ನು ರದ್ದು ಪಡಿಸಿದ ಸರ್ಕಾರ ಈಗ ಪುನಃ ಪ್ರಾರಭಿಸುವ ಉದ್ದೇಶವೇನು? ಸ್ಪಷ್ಟ ಪಡಿಸಲಿ

ದಾಸ ಯಾದವ್: ಮೊದಲು ಅಡಿಪಾಯ ಗಟ್ಟಿ ಇರಬೇಕು ಅಮೇಲೆ ಎಲ್ಲಾವು ಸರಿಯಾಗಿ ಇರಬಹುದು ಅನಿಸುತ್ತದೆ

ಗಂಗಾಧರ್ ಉಡುಪ: ಈ ಪ್ರಯತ್ನ ಶ್ಲಾಘನೀಯ, ಮಕ್ಕಳು ಮಾನಸಿಕವಾಗಿ ತಯಾರಿ ನೆಡೆಸಲು ಅನುವು ಮಾಡಿಕೊಡುತ್ತದೆ

ಲೋಕೇಶ್ ಗುಡ್ಡೆಮನೆ: ಖಂಡಿತವಾಗಿ ಇದೊಂದು ಶೈಕ್ಷಣಿಕ ದೃಷ್ಟಿಯಿಂದ ಒಳ್ಳೆಯದು. ಮಕ್ಕಳಲ್ಲಿ ಮುಂದಿನ ವಿದ್ಯಾಭ್ಯಾಸಕ್ಕೊಂದು ಮುನ್ನುಡಿ ಇಡಲು ಸಹಕಾರಿ.

Advertisement

ಹನುಮಂತ ರಾವ್ ಡಿ ಎಸ್: ಈ ಪದ್ಧತಿ ಎಂದೋ ಜಾರಿಗೆ ಬರಬೇಕಿತ್ತು . ತಡವಾದರೂ ಉತ್ತಮ ತೀರ್ಮಾನ . ಇಲ್ಲಿ ಶಿಕ್ಷಕರ ಜವಾಬ್ದಾರಿ ಹೆಚ್ಚು . ಸರಕಾರ ಶಿಕ್ಷಕರಿಗೆ ಅನ್ಯ ಕೆಲಸಗಳಿಗೆ ನಿಯೋಜಿಸಿತ್ತಾ ಬಂದರೆ ಕಾಲಕ್ರಮೇಣ ಈ ಹೊಸ ತೀರ್ಮಾನಕ್ಕೆ ತೊಂದರೆಯಾಗಬಹುದು . ಎಲ್ಲಕ್ಕಿಂತ ಮೊದಲು ಶಿಕ್ಷಕರ ವರ್ಗಾವಣೆ ನಿಯಮದ ಗೊಂದಲಗಳನ್ನು ಪರಿಹರಿಸಿದರೆ ಏಳನೆಯ ತರಗತಿಯ ಪಬ್ಲಿಕ್ ಪರೀಕ್ಷೆಯ ಗುರಿ ತಲುಪಿದಂತಾಗುತ್ತದೆ

ರಾಜಣ್ಣ: ಈ ಪದ್ಧತಿ ತುಂಬಾ ಒಳ್ಳೆಯದು ಮಕ್ಕಳಲ್ಲಿ ಓದಲು ಆಸಕ್ತಿ ಹೆಚ್ಚುತ್ತೆ ಶಿಕ್ಷಕರಿಗೆ ಜವಾಬ್ದಾರಿ ಉಂಟಾಗಿ ಅಧಿಕಾರಿಗಳಿಗೂ ಜವಾಬ್ದಾರಿ ಇದೆ ಎಂದು ತಿಳಿಯಲಿ

ಸಣ್ಣಮಾರಪ್ಪ ಚಂಗಾವರ: ವಿದ್ಯಾರ್ಥಿಗಳಲ್ಲಿ ಗುಣಮಟ್ಟ ಶಿಕ್ಷಣ ತರುವಲ್ಲಿ ಇಂತಹ ಇಂತಹ ಬದಲಾವಣೆ ಅವಶ್ಯಕ. ಆದರೆ ಶೈಕ್ಷಣಿಕ ವರ್ಷದ ಎಲ್ಲಾ ಕಲಿಕಾ ಚಟುವಟಿಕೆಯಲ್ಲಿ ಗುಣಮಟ್ಟ ಕಾಯ್ದುಕೊಳ್ಳುವುದು ಅಷ್ಟೇ ಮುಖ್ಯ. ಆಗ ಮಾತ್ರ ವಿದ್ಯಾರ್ಥಿಗಳಲ್ಲಿ ಬದಲಾವಣೆ ಕಾಣಬಹುದು.

ಯಾಸೀನ್ ಕೋಡಿಬೆಂಗ್ರೆ: ಇದು ಭ್ರಮೆ ಮಾತ್ರ. ಪರೀಕ್ಷೆಯಿಂದ ಗುಣಮಟ್ಟ ಹೆಚ್ಚಿಸುತ್ತೇವೆ ಎಂಬುವುದು ಸರಕಾರ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನ ಅಷ್ಟೇ. ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿದೆ. ಶಿಕ್ಷಕರ ಗುಣಮಟ್ಟದ ಬೋಧನೆಯ ಕೊರತೆಯಿದೆ. ಮೂಲಭೂತ ಸೌಕರ್ಯದ ಕೊರತೆಯಿದೆ. ಅದಕ್ಕಿಂತ ಮುಖ್ಯವಾಗಿ ಶಿಕ್ಷಣ ನೀತಿಗಳಲ್ಲಿ ಸಾಕಷ್ಟು ವೈಫಲ್ಯತೆಯಿದೆ. ಇದನ್ನಲೆಲ್ಲಾ ಬದಿಗೊತ್ತಿ ಪಬ್ಲಿಕ್ ಪರೀಕ್ಷೆಯಿಂದ ಏನೋ ಮಹಾನ್ ಸಾಧಿಸುತ್ತೇವೆ ಎಂಬುವುದು ಭ್ರಮೆ ಮಾತ್ರವಲ್ಲ. ಜನರಿಂದ ಸರಕಾರದ ವೈಫಲ್ಯ ಮರೆ ಮಾಚಿಸುವ ಪ್ರಯತ್ನ ಅಷ್ಟೇ!!

ರೋಹಿಂದ್ರನಾಥ್ ಕೋಡಿಕಲ್; ಸುಮಾರು ಅರುವತ್ತು ವರ್ಷ ಗಳಿಂದ ಈ ರೀತಿ ಪ್ರಯೋಗ ಮಾಡುತ್ತಾ ಇದ್ದೇವೆ. ಪಲಿತಾಂಶ ಏನು ಎಂದೇ ತಿಳಿಯಲಿಲ್ಲ. ಯಾಕೆ ಈ ಮೊದಲು ಮಾಡಿದ ಎಲ್ಲಾ ಪ್ರಯೋಗಗಳ ಸಾರಾಂಶ ನೋಡಬಾರದು? ಮಕ್ಕಳನ್ನು ಯಾಕೆ ಬಲಿಪಶು ಮಾಡುತ್ತೀರಾ?

ಸಂತೋಷ್ ಡಿಸೋಜಾ: ಖಂಡಿತವಾಗಿಯೂ ಅಗತ್ಯ ಇದೆ. ದಶಕಗಳ ಹಿಂದೆ ಆಗ ವಿದ್ಯಾರ್ಥಿಗಳಿದ್ದ ಭಯ ಈಗೀನ ವಿದ್ಯಾರ್ಥಿಗಳಿಗೆ‌ ಇಲ್ಲ. ಕಲಿಯದಿದ್ದರೂ ಪಾಸ್‌ ಮಾಡುತ್ತಾರೆ. ಶಿಕ್ಷಣದ ‌ಗುಣ್ಣಮಟ್ಟ ಹೆಚ್ಷಿಸಲು 7ನೇ ತರಗತಿಗೆ ಪಬ್ಲಿಕ್ ‌ಪರೀಕ್ಷೆ ಅಗತ್ಯ ಇದೆ.

ದಾವೂದ್ ಕೂರ್ಗ್: 9ನೆಯ ತರಗತಿವರೆಗೆ ಪಬ್ಲಿಕ್ ಪರೀಕ್ಷೆ ಇಲ್ಲದೆ ಮುಂದುವರಿಸುವುದು ಉತ್ತಮ ಅದೇ ರೀತಿ ಭಾರತದಾದ್ಯಂತ ಏಕ ರೂಪ ವಿದ್ಯಾಭ್ಯಾಸ ವ್ಯವಸ್ಥೆ ಬರಲಿ , ಆಯಾ ರಾಜ್ಯಗಳ ಭಾಷೆಗಳಿಗೆ ಪ್ರಾಮುಖ್ಯತೆ ಇರಲಿ. ಬಡವರ ಮಕ್ಕಳೂ ಕಲಿತು ಆಂಗ್ಲ ಮಾಧ್ಯಮದ ವರೊಂದಿಗೆ ನೀಟ್, ಮುಂತಾದ ಪರೀಕ್ಷೆಗಳನ್ನು ಬರೆದು ಮುಂದೆ ಬರಲಿ.

ಸೂರಜ್ ರೈ: ಏಳನೇ ತರಗತಿ ಪರೀಕ್ಷಾ ಪದ್ಧತಿ ಹಿಂದೊಮ್ಮೆ ಇದ್ದದ್ದೇ, ಹೊಸದೇನಲ್ಲ. ಅದೂ ಕೂಡ ಕಠಿಣವಾದ ಪರೀಕ್ಷೆಯನ್ನು ಅಂದು ಎದುರಿಸುತ್ತಿದ್ದೆವು. ಆದರೆ ಇಂದಿನ ಮಕ್ಕಳು ಒತ್ತಡ ನಿಯಂತ್ರಿಸಲು ಯಾಕೆ ವಿಫಲರಾಗುತ್ತಿದ್ದಾರೆ. ಯಾತಕ್ಕಾಗಿ ಪರೀಕ್ಷಾ ಭಯ ಅವರನ್ನು ಕಾಡುತ್ತಿದೆ, ಹಿಂದಿನ ಕಾಲದ ಮಕ್ಕಳಿಗೆ ಹೋಲಿಸಿದರೆ ಯಾವೆಲ್ಲಾ ಕಾರಣಕ್ಕೆ ಇಂದಿನ ಮಕ್ಕಳು ಆತ್ಮವಿಶ್ವಾಸದ ಕೊರತೆಯನ್ನು ಹೊಂದಿದ್ದಾರೆ ಎಂದು ಮೊದಲು ತಿಳಿದುಕೊಳ್ಳುವುದು ಉತ್ತಮ.

ಚಿದು ನಂದಾ: ಶಿಕ್ಷಕರ ಹಕ್ಕನ್ನು ಶಿಕ್ಷಕರಿಗೆ ಕೊಡಬೇಕು, ಈಗ ಮಕ್ಕಳು ಸಹ ಶಿಕ್ಷಕರಿಗೆ ಆವಾಜ್ ಹಾಕುವುದನ್ನು ನೋಡುತ್ತಿದ್ದೇವೆ. ಬಹುಶಃ ಇದು ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಸರ್ಕಾರಿ ಶಾಲೆಗಳೆ ಇರುವುದಿಲ್ಲ.
ಉತ್ತಮ ಗುಣಮಟ್ಟ ಕಾಯ್ದುಕೊಳ್ಳಬೇಕಾದರೆ ಶಿಕ್ಷಕರಿಗೆ ಸಂಪೂರ್ಣ ಸಹಕಾರ ಸರ್ಕಾರದ ಕಡೆಯಿಂದ ಕೊಡಬೇಕು. ಅಮೆರಿಕಾ, ಜಪಾನ್ ದೇಶಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಇದೆ ಯಾಕೆಂದರೆ ಅಲ್ಲಿ ಶಿಕ್ಷಕರಿಗೆ ಕೊಡುವ ಗೌರವ ಪ್ರಥಮದರ್ಜೆ ಮಿನಿಸ್ಟರ್ ಗೆ ದೊರೆಯುವ ಸೌಲಭ್ಯ.
ಶಿಕ್ಷಕರನ್ನ ಅಸಭ್ಯದಿಂದ ಕಾಣುವ SDMC ಸದಸ್ಯರು, ಪೋಷಕರು, ತಮ್ಮ ಊರಿನ ಶಾಲೆಗಳಲ್ಲಿ ಸಂಪೂರ್ಣ ಸಹಕಾರ ಕೊಡಿ.

ನಾಗೇಶ್ ಬಿಜಿ ನಾಗೇಶ್: ಈ ಪದ್ಧತಿ ಎಂದೋ ಜಾರಿಗೆ ಬರಬೇಕಿತ್ತು . ತಡವಾದರೂ ಉತ್ತಮ ತೀರ್ಮಾನ . ಇಲ್ಲಿ ಶಿಕ್ಷಕರ ಜವಾಬ್ದಾರಿ ಹೆಚ್ಚು . ಸರಕಾರ ಶಿಕ್ಷಕರಿಗೆ ಅನ್ಯ ಕೆಲಸಗಳಿಗೆ ನಿಯೋಜಿಸಿತ್ತಾ ಬಂದರೆ ಕಾಲಕ್ರಮೇಣ ಈ ಹೊಸ ತೀರ್ಮಾನಕ್ಕೆ ತೊಂದರೆಯಾಗಬಹುದು . ಎಲ್ಲಕ್ಕಿಂತ ಮೊದಲು ಶಿಕ್ಷಕರ ವರ್ಗಾವಣೆ ನಿಯಮದ ಗೊಂದಲಗಳನ್ನು ಪರಿಹರಿಸಿದರೆ ಏಳನೆಯ ತರಗತಿಯ ಪಬ್ಲಿಕ್ ಪರೀಕ್ಷೆಯ ಗುರಿ ತಲುಪಿದಂತಾಗುತ್ತದೆ

Advertisement

Udayavani is now on Telegram. Click here to join our channel and stay updated with the latest news.

Next