Advertisement

“ಅಪರಾಧಗಳ ನಿಯಂತ್ರಣಕ್ಕೆ ಸಾರ್ವಜನಿಕ ಸಹಕಾರ ಅಗತ್ಯ’

02:15 AM Jul 15, 2017 | |

ಕಾಪು: ಊರಿನ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಊರಿನ ಮುಖಂಡರು, ಸಂಘಟನೆಗಳ ಪಾತ್ರ ಮಹತ್ವದ್ದಾಗಿದ್ದು, ಪೊಲೀಸ್‌ ಇಲಾಖೆಯೊಂದಿಗೆ ಸಾರ್ವಜನಿಕರ ಧನಾತ್ಮಕ ಸಕಾಲಿಕ ಸ್ಪಂದನದಿಂದ ಮಾತ್ರ ಇದು ಸಾಧ್ಯ. ಅಪರಾಧಗಳ ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರ ಅತೀ ಅಗತ್ಯ ಎಂದು ಶಿರ್ವ ಪೊಲೀಸ್‌ ಠಾಣಾಧಿಕಾರಿ ನರಸಿಂಹ ಶೆಟ್ಟಿ ಹೇಳಿದರು.

Advertisement

ಬಂಟಕಲ್ಲಿನಲ್ಲಿ ರಸ್ತೆ ಅಗಲೀಕರಣದಿಂದ ರಸ್ತೆಯಲ್ಲಿ ನಿರಂತರವಾಗಿ ನಡೆಯುತ್ತಿರುವ ವಾಹನ ಅಪಘಾತಗಳ ನಿಯಂತ್ರಣಕ್ಕಾಗಿ ಹಿರಿಯ ದಾನಿಗಳಾದ ಇಗ್ನೇಷಿಯಸ್‌ ಡಿಸೋಜ ನೀಡಿದ ಬ್ಯಾರಿಕೇಡ್‌ಗಳನ್ನು ಜು.11ರಂದು ರಸ್ತೆಗೆ ಅಳವಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಶಿರ್ವ ಗ್ರಾ.ಪಂ. ಬಂಟಕಲ್ಲು ವಾರ್ಡ್‌ ಸದಸ್ಯ ಕೆ. ರಾಮರಾಯ ಪಾಟ್ಕರ್‌, ಹಿರಿಯ ಶಿಕ್ಷಕ ಬಿ. ಪುಂಡಲೀಕ ಮರಾಠೆ, ಬಂಟಕಲ್ಲು ಮ್ಯಾಕ್ಸಿಕ್ಯಾಬ್‌ ಟ್ಯಾಕ್ಷಿ ಯೂನಿಯನ್‌ ಅಧ್ಯಕ್ಷ ದಿನೇಶ್‌ ಅರಸೀಕಟ್ಟೆ, ರಿûಾ ಚಾಲಕ-ಮಾಲಕರ ಸಂಘದ ಅಧ್ಯಕ್ಷ ಹರೀಶ್‌ ಹೇರೂರು, ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಮಾಧವ ಕಾಮತ್‌, ಮಜೂರು ಗ್ರಾ. ಪಂ. ಮಾಜಿ ಅಧ್ಯಕ್ಷ ಗಣೇಶ ಶೆಟ್ಟಿ ಹೇರೂರು ಮುಖ್ಯ ಅತಿಥಿಗಳಾಗಿದ್ದು ಪೊಲೀಸ್‌ ಸಿಬಂದಿ ದಾಮೋದರ್‌, ದಯಾನಂದ್‌, ಪ್ರಕಾಶ್‌, ಗ್ರಾಮಸ್ಥರು ಉಪಸ್ಥಿತರಿದ್ದರು. ಉಮೇಶ್‌ ಪ್ರಭು ಪಾಲಮೆ ಸ್ವಾಗತಿಸಿದರು. ದಿನೇಶ್‌ ದೇವಾಡಿಗ ಹೇರೂರು ವಂದಿಸಿದರು. ಟ್ಯಾಕ್ಸಿ ಯೂನಿಯನ್‌ ಸ್ಥಾಪಕ ಅಧ್ಯಕ್ಷ / ಸಮಾಜ ಸೇವಕ ಹೆನ್ರಿ ಫೆರ್ನಾಂಡಿಸ್‌ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next