Advertisement

ಸಾರ್ವಜನಿಕ ಆಡಳಿತ: ರಾಜ್ಯಕ್ಕೆನಾಲ್ಕನೇ ಸ್ಥಾನ

12:06 PM Jul 23, 2018 | |

ಬೆಂಗಳೂರು: ಪ್ರಸಕ್ತ ಸಾಲಿನ ಸಾರ್ವಜನಿಕ ಆಡಳಿತ ಸೂಚ್ಯಂಕ ಶನಿವಾರ ಪ್ರಕಟವಾ ಗಿದೆ. ಕರ್ನಾಟಕಕ್ಕೆ ನಾಲ್ಕನೇ ಸ್ಥಾನ  ಸಿಕ್ಕಿದೆ. ಕೇರಳಕ್ಕೆ ಮೊದಲನೆಯ ಸ್ಥಾನ, ತಮಿಳುನಾಡಿಗೆ ಎರಡನೇ, ತೆಲಂಗಾಣ ಮೂರನೇ ಸ್ಥಾನ ಪಡೆದುಕೊಂಡಿದೆ ಎಂದು  ಪಬ್ಲಿಕ್‌ ಅಫೇರ್ಸ್‌ ಸೆಂಟರ್‌ (ಪಿಎಸಿ) ಹೇಳಿದೆ.

Advertisement

2016ರಿಂದ ಸತತವಾಗಿ ಈ ಬಗ್ಗೆ ಸಾರ್ವಜನಿಕ ಆಡಳಿತದ ಬಗ್ಗೆ  ಅಧ್ಯಯನ ನಡೆಸಿ ವರದಿ ಬಿಡುಗಡೆ ಮಾಡಲಾಗುತ್ತಿದೆ. ಗುಜರಾತ್‌ 5ನೇ ಸ್ಥಾನ ಪಡೆದುಕೊಂಡಿದೆ. ಕೇರಳ ಸತತ ಮೂರನೇ  ಬಾರಿಗೆ ಮೊದಲ ಸ್ಥಾನದಲ್ಲಿ ಮುಂದುವರಿದಿದ್ದರೆ, ಕರ್ನಾಟಕ ಸತತ ನಾಲ್ಕನೇ ಬಾರಿಗೆ ನಾಲ್ಕನೇ ಸ್ಥಾನದಲ್ಲಿ  ಮುಂದುವರಿದಿದೆ. 

2 ಕೋಟಿಗಿಂತ ಕಡಿಮೆ ಜನಸಂಖ್ಯೆ ಇರುವ ರಾಜ್ಯಗಳ ಪೈಕಿ ಹಿಮಾಚಲಪ್ರದೇಶ ಮೊದಲ ಸ್ಥಾನದಲ್ಲಿದೆ.  ಗೋವಾ, ಮಿಜೋರಾಂ, ಸಿಕ್ಕಿಂ ಮತ್ತು ತ್ರಿಪುರಾ ನಂತರದ ಸ್ಥಾನ ಪಡೆದಿವೆ. ನಾಗಾಲ್ಯಾಂಡ್‌, ಮಣಿಪುರ ಮತ್ತು ಮೇಘಾಲಯ  ಕೂಡ ಈ ಪಟ್ಟಿಯಲ್ಲಿವೆ.

ಸಮೀಕ್ಷೆಗಾಗಿ ಒಟ್ಟು 30 ವಿಚಾರಗಳನ್ನು ಆಯ್ಕೆ ಮಾಡಿ, 100 ಸೂಚ್ಯಂಕಗಳನ್ನೂ  ಗುರುತಿಸಲಾಗಿತ್ತು. ಕೇರಳ, ಹಿಮಾಚಲ ಪ್ರದೇಶ ಮತ್ತು ಮಿಜೋರಾಂ ರ್ಯಾಜ್ಯಗಳು ಎಲ್ಲಾ ಮಕ್ಕಳಿಗೆ ಉತ್ತಮ ಜೀವನ  ವ್ಯವಸ್ಥೆ ನೀಡುವಲ್ಲಿ ಯಶಸ್ವಿಯಾಗಿವೆ ಎಂದು ಪಿಎಐ ಹೇಳಿದೆ.  

Advertisement

Udayavani is now on Telegram. Click here to join our channel and stay updated with the latest news.

Next