Advertisement
ಭಾರತೀಯ ಮಾರುಕಟ್ಟೆಗೆ ಹೊಸ ಅಂಗಸಂಸ್ಥೆಯೊಂದಿಗೆ ಹಾಗೂ ಹೊಸ ರೂಪದಲ್ಲಿ ಪಬ್-ಜಿ ಗೇಮ್ ಮತ್ತೊಮ್ಮೆ ದಾಂಗುಡಿಯಿಡಲಿದ್ದು, ಗ್ರಾಹಕರನ್ನು ಖಂಡಿತವಾಗಿಯೂ ಸೆಳೆಯಲಿದೆ ಎಂದು ಕಳೆದ ನವೆಂಬರ್ 12 ರಂದು ಪಬ್ ಜಿ ಕಾರ್ಪೊರೇಶನ್ ಹೇಳಿಕೆ ನೀಡಿತ್ತು. ಆದರೆ ಹೊಸ ಆವೃತ್ತಿಯ ಗೇಮ್ ನ ಕುರಿತಾದ ಯಾವುದೇ ಹೆಚ್ಚಿನ ಮಾಹಿತಿ ಬಹಿರಂಗಪಡಿಸಿರಲಿಲ್ಲ.
Related Articles
Advertisement
ಪಬ್ ಜಿ ಮೊಬೈಲ್ KRJP (ಕೊರಿಯಾ ಮತ್ತು ಜಪಾನ್) – ಪಬ್ ಜಿ ಕಾರ್ಪೋರೇಶನ್
ಪಬ್ ಜಿ ಮೊಬೈಲ್ ವಿಎನ್ (ವಿಯೆಟ್ನಾಂ) – ವಿಎನ್‌ಜಿ ಗೇಮ್ ಪಬ್ಲಿಷಿಂಗ್
ಪಬ್ ಜಿ ಮೊಬೈಲ್ TW (ತೈವಾನ್) -ಹಾಟ್‌ಕೂಲ್ ಗೇಮ್ಸ್
ಭಾರತದಲ್ಲಿ 2020ರ ಡಿಸೆಂಬರ್ ನಲ್ಲಿ ಪಬ್ ಜಿ ಯ ಹೊಸ ಆವೃತ್ತಿ ಬಿಡುಗಡೆಗೊಳ್ಳಲಿದೆ ಎಂದು ಅಂದಾಜಿಸಲಾಗಿದೆ. ಅದಾಗ್ಯೂ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ಪಬ್ ಜಿ ಕಾರ್ಪೋರೇಶನ್ ಗೆ ಯಾವುದೇ ರೀತಿಯ ಗೇಮಿಂಗ್ ಉದ್ಯಮವನ್ನು ಆರಂಭಿಸಲು ಅನುಮತಿ ನೀಡಿಲ್ಲ ಎಂದು ವರದಿಯಾಗಿದೆ.
ಈಗಾಗಲೇ ಪಬ್ ಜಿ ಕಾರ್ಪೋರೇಶನ್ ತನ್ನ ಹೊಸ ಗೇಮ್ ಗಾಗಿ 100 ಮಿಲಿಯನ್ ಡಾಲರ್ (740 ಕೋಟಿ) ಹೂಡಿಕೆ ಮಾಡಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.