Advertisement
ಪರ್ಯಾಯ ಬೋಧನೆ, ಉಪನ್ಯಾಸಕರು ಖಾಲಿ ಇರುವ ಕಾಲೇಜುಗಳಿಗೆ ಕಾರ್ಯಭಾರ ಹಂಚಿಕೆ, ಅತಿಥಿ ಉಪನ್ಯಾಸಕರ ನೇಮಕ, ಜಿ.ಪಂ. ವತಿಯಿಂದ ನೀಡಿರುವ ಸಿಇಟಿ ಆನ್‌ಲೈನ್ ಕೋಚಿಂಗ್ ಹೀಗೆ ಹಲವು ವಿಶೇಷ ಕಾರ್ಯಕ್ರಮಗಳಿಂದ ಫಲಿತಾಂಶದಲ್ಲಿ ಏರಿಕೆಯಾಗಿದೆ. ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದ 15,537 ವಿದ್ಯಾರ್ಥಿಗಳಲ್ಲಿ 14,273 ಹೊಸ(ಫ್ರೆಶರ್) ವಿದ್ಯಾರ್ಥಿಗಳಾಗಿದ್ದು ಅವರಲ್ಲಿ 13,594 ಮಂದಿ ತೇರ್ಗಡೆ ಯಾಗುವ ಮೂಲಕ ಶೇ.95.24ರಷ್ಟು ಫಲಿತಾಂಶ ಪಡೆದಿದ್ದಾರೆ. ಈ ಫಲಿತಾಂಶವು ಉಡುಪಿ ಜಿಲ್ಲೆಯು ರಾಜ್ಯಮಟ್ಟದಲ್ಲಿ 2 ಸ್ಥಾನ ಪಡೆಯುವಂತೆ ಮಾಡಿದೆ. ದ.ಕ. ಜಿಲ್ಲೆಯು ಶೇ. 95.33ರಷ್ಟು ಫಲಿತಾಂಶ ಪಡೆದಿದೆ. ಉಡುಪಿ ಜಿಲ್ಲೆ ಕೇವಲ ಶೇ.0.09ರಷ್ಟು ಫಲಿತಾಂಶದಿಂದ ಮೊದಲ ಸ್ಥಾನ ವಂಚಿತವಾಗಿದೆ.
2021-22ರಲ್ಲಿ ಉಡುಪಿ ಜಿಲ್ಲೆ ಶೇ.86.38ರಷ್ಟು ಫಲಿತಾಂಶ ಪಡೆದು ರಾಜ್ಯದಲ್ಲಿ 2ನೇ ಸ್ಥಾನ ಪಡೆದಿತ್ತು. ಈ ವರ್ಷವೂ ಎರಡನೇ ಸ್ಥಾನದಲ್ಲಿಯೇ ಮುಂದುವರಿದಿದೆ. ಇದರ ಜತೆಗೆ ಫಲಿತಾಂಶದಲ್ಲೂ ಸಾಕಷ್ಟು ಏರಿಕೆಯಾಗಿದೆ. ಸರಿ ಸುಮಾರು ಶೇ.8.86ರಷ್ಟು ಹೆಚ್ಚಳವಾಗಿದೆ. ವರ್ಷವೊಂದಕ್ಕೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಫಲಿತಾಂಶ ಏರಿಕೆ ಕಂಡಿರುವುದು ವಿಶೇಷ ಎನ್ನತ್ತಾರೆ ಶಿಕ್ಷಣ ಇಲಾಖೆಯ ಅಧಿಕಾರಿಗಳು.