Advertisement

PU ಉಪನ್ಯಾಸಕರ ವರ್ಗಾವಣೆ ಕೌನ್ಸೆಲಿಂಗ್‌ ಪರಿಷ್ಕೃತ ವೇಳಾಪಟ್ಟಿ ಪ್ರಕಟ

06:00 AM Jul 25, 2018 | Team Udayavani |

ಬೆಂಗಳೂರು: ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರ ವರ್ಗಾವಣೆ ಕೌನ್ಸೆಲಿಂಗ್‌ ಕುರಿತ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಿದ್ದು, ಜುಲೈ 26ರಿಂದ ಆ.4ರ ವರೆಗೆ ಕೋರಿಕೆ ಮತ್ತು ಕಡ್ಡಾಯ ವರ್ಗಾವಣೆ ಕೌನ್ಸೆಲಿಂಗ್‌ ಪ್ರತ್ಯೇಕವಾಗಿ ನಡೆಯಲಿದೆ. ವರ್ಗಾವಣೆಗೆ ಅರ್ಜಿ ಸಲ್ಲಿಸಿರುವ ಉಪನ್ಯಾಸಕರು ಕೌನ್ಸೆಲಿಂಗ್‌ ಸಂದರ್ಭದಲ್ಲಿ ಆದ್ಯತೆಗೆ ಅನುಸಾರವಾಗಿ ಎಲ್ಲ ದಾಖಲೆಗಳ ಮೂಲ ಪ್ರತಿ ತೋರಿಸಬೇಕು. ದಾಖಲೆಗಳ ಮೂಲ ಪ್ರತಿ ಇಲ್ಲದಿದ್ದರೆ ಆದ್ಯತೆ ಆಧಾರದಲ್ಲಿ ಪರಿಗಣಿಸು ವುದಿಲ್ಲ. ಕೌನ್ಸೆಲಿಂಗ್‌ ವೇಳೆಯಲ್ಲಿ ಆದ್ಯತೆ ಬದಲಾವಣೆಗೆ ಅವಕಾಶವಿಲ್ಲ ಎಂದು ಪಿಯು ಇಲಾಖೆ ತಿಳಿಸಿದೆ. 2017-18ನೇ ಸಾಲಿನ ಕೋರಿಕೆ ಹಾಗೂ ಕಡ್ಡಾಯ ವರ್ಗಾವಣೆ ಗಣಕೀಕೃತ ಕೌನ್ಸೆಲಿಂಗ್‌ ಸಂಬಂಧ ಈ ಹಿಂದೆಯೇ ಇಲಾಖೆಯಿಂದ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸ ಲಾಗಿತ್ತು. ಆದರೆ, ಶಿಕ್ಷಣ ಸಚಿವರ ಸೂಚನೆಯಂತೆ ಕೌನ್ಸೆಲಿಂಗ್‌ ಪ್ರಕ್ರಿಯೆಗೆ ತಡೆ ನೀಡಲಾಗಿತ್ತು. ಹೊಸದಾಗಿ
ಪರಿಷ್ಕೃತ ವೇಳಾಪಟ್ಟಿ ಬಿಡುಗಡೆ ಮಾಡಿರುವುದರಿಂದ ವರ್ಗಾವಣೆಗೆ ಕಾದು ಕುಳಿತ ಉಪನ್ಯಾಸಕರು ನಿರಾಳರಾಗಿದ್ದಾರೆ.

Advertisement

ಕೋರಿಕೆ ಹಾಗೂ ಕಡ್ಡಾಯ ವರ್ಗಾವಣೆ ಕೌನ್ಸೆಲಿಂಗ್‌ ಪ್ರತ್ಯೇಕವಾಗಿ ಮಲ್ಲೇಶ್ವರದ ಬಾಲಕರ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಜು.26ರಿಂದ ನಡೆಯಲಿದೆ. ಜು.26ರಂದು ಐಚ್ಛಿಕ ಕನ್ನಡ, ಸಂಸ್ಕೃತ, ಹಿಂದಿ, ಉರ್ದು, ತರ್ಕಶಾಸ್ತ್ರ, ಶಿಕ್ಷಣ, ಭೂಗೋಳಶಾಸ್ತ್ರ, ಎಲೆಕ್ಟ್ರಾನಿಕ್ಸ್‌, ಗಣಿಕ ವಿಜ್ಞಾನ ಹಾಗೂ ಕನ್ನಡ. 27ರಂದು ಇತಿಹಾಸ, ಭೌತಶಾಸ್ತ್ರ, 28ರಂದು ರಸಾಯಶಾಸ್ತ್ರ, ಅರ್ಥಶಾಸ್ತ್ರ, 29ರಂದು ರಾಜ್ಯಶಾಸ್ತ್ರ, ಗಣಿತಶಾಸ್ತ್ರ, 30ರಂದು ಜೀವಶಾಸ್ತ್ರ, ಸಮಾಜಶಾಸ್ತ್ರ, 31ರಂದು ಆಂಗ್ಲಭಾಷೆ ಮತ್ತು ವ್ಯವಹಾರ ಅಧ್ಯಯನ ವಿಷಯದ ಉಪನ್ಯಾಸಕರ ಕೋರಿಕೆ ವರ್ಗಾವಣೆ ಕೌನ್ಸೆಲಿಂಗ್‌ ನಡೆಯಲಿದೆ.

ಆ.1ರಂದು ಐಚ್ಛಿಕ ಕನ್ನಡ, ಸಂಸ್ಕೃತ, ಹಿಂದಿ, ಉರ್ದು, ತರ್ಕಶಾಸ್ತ್ರ, ಶಿಕ್ಷಣ, ಭೂಗೋಳಶಾಸ್ತ್ರ, ಎಲೆಕ್ಟ್ರಾನಿಕ್ಸ್‌, ಗಣಿಕ ವಿಜ್ಞಾನ, ಕನ್ನಡ ಹಾಗೂ ಭೌತಶಾಸ್ತ್ರ, 2ರಂದು ಇತಿಹಾಸ, ರಸಾಯಶಾಸ್ತ್ರ, ಅರ್ಥಶಾಸ್ತ್ರ, ಗಣಿತಶಾಸ್ತ್ರ, 3ರಂದು ರಾಜ್ಯಶಾಸ್ತ್ರ, ಸಮಾಜಶಾಸ್ತ್ರ ಮತ್ತು ಜೀವಶಾಸ್ತ್ರ, 4ರಂದು ಇಂಗ್ಲಿಷ್‌ ಮತ್ತು ವ್ಯವಹಾರ ಅಧ್ಯಯನ ವಿಷಯದ ಉಪನ್ಯಾಸಕರ ಕಡ್ಡಾಯ ವರ್ಗಾವಣೆ ಕೌನ್ಸೆಲಿಂಗ್‌ ನಡೆಯಲಿದೆ ಎಂದು ಇಲಾಖೆ ತಿಳಿಸಿದೆ.

ಪದವೀಧರ ಶಿಕ್ಷಕರ ಪರೀಕ್ಷೆ ಅಂಕ, ಮೌಲ್ಯಾಂಕ ಮಾಹಿತಿ
ಬೆಂಗಳೂರು: ಪದವೀಧರ ಶಿಕ್ಷಕರ ಹುದ್ದೆಗಳ ನೇಮಕಾತಿಗೆ ನಡೆದ ಸ್ಪರ್ಧಾತ್ಮಕ ಪರೀಕ್ಷೆ ಅಂಕ ಮತ್ತು ಮೌಲ್ಯಾಂಕ ಮಾಹಿತಿ ಪರಿಷ್ಕೃರಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ವಿಜ್ಞಾನ, ಗಣಿತ, ಸಮಾಜ ವಿಜ್ಞಾನ ಹಾಗೂ ಇಂಗ್ಲಿಷ್‌ ವಿಷಯದ 10 ಸಾವಿರ ಪದವೀಧರ ಶಿಕ್ಷಕರ ನೇಮಕಾತಿಗೆ ಜಿಲ್ಲಾಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ನಡೆದಿತ್ತು. ಜೂನ್‌ 20ರಂದು ಪರೀಕ್ಷೆ ಫ‌ಲಿತಾಂಶ ಪ್ರಕಟಿಸಲಾಗಿತ್ತು. ಅಂಕ ಹಾಗೂ ಆಯ್ಕೆ ಪಟ್ಟಿಯ ಗೊಂದಲದಿಂದ ಅಂಕದ ಪೂರ್ಣ ಮಾಹಿತಿ ನೀಡುವಂತೆ ಅಭ್ಯರ್ಥಿಗಳು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರ ಕನಿಷ್ಠ ಅಂಕ(ಕಟ್‌ಆಫ್ ಮಾರ್ಕ್ಸ್) ರದ್ದು ಮಾಡಿ, ಅಭ್ಯರ್ಥಿಗಳು ಪಡೆದಿರುವ ಪೂರ್ಣ ಅಂಕ ಶೇಕಡವಾರು ಪದಟಛಿತಿಯಲ್ಲಿ ಪ್ರಕಟಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿತ್ತು.ಅದರಂತೆ ಕೇಂದ್ರೀಕೃತ ದಾಖಲಾತಿ ಘಟಕದ ಅಧಿಕಾರಿ ಗಳು, ಪರಿಷ್ಕೃತ ಅಂಕ ಮತ್ತು ಮೌಲ್ಯಾಂಕದ ಮಾಹಿತಿಯನ್ನು //www.schooleducation.kar.nic.in ನಲ್ಲಿ ಪ್ರಕಟಿಸಿದೆ. ಅಭ್ಯರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಹಾಗೂ ಹುಟ್ಟಿದ ದಿನಾಂಕ ನಮೂದಿಸಿ ವಿವರ ಪಡೆಯಬಹುದು. ಈಗ ಪ್ರಕಟವಾಗಿರುವ ಅಂಕ ಮತ್ತು ಮೌಲ್ಯಾಂಕನ ಮಾಹಿತಿ ಆಧಾರದ ಮೇಲೆ 1:2 ಅನುಪಾತದಲ್ಲಿ ಕೌನ್ಸೆಲಿಂಗ್‌ ನಡೆಯಲಿದೆ. ಆಯಾ ಜಿಲ್ಲಾ ಉಪನಿರ್ದೇಶಕರ ಮೂಲಕವೇ ನೇಮಕಾತಿ ಕೌನ್ಸೆಲಿಂಗ್‌ ಆಯೋಜಿಸಲಾಗುತ್ತದೆ. ಅಭ್ಯರ್ಥಿಗಳ ಸ್ಪರ್ಧಾತ್ಮಕ ಪರೀಕ್ಷೆಯ ಅಂಕ, ಶಿಕ್ಷಕರ ಅರ್ಹತಾ ಪರೀಕ್ಷೆಯ ಅಂಕ ಮತ್ತು ಬಿಇಡಿ ಹಾಗೂ ಡಿಇಡಿ ಮೊದಲಾದ ಕೋರ್ಸ್‌ಗಳಲ್ಲಿ ಪಡೆದ
ಅಂಕದ ಆಧಾರದಲ್ಲಿ ನೇಮಕಾತಿ ಪ್ರಕ್ರಿಯೆ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next