Advertisement

ಪಿಯು ಪರೀಕ್ಷೆ :  2,019 ವಿದ್ಯಾರ್ಥಿಗಳು ಗೈರು

06:35 AM Mar 04, 2018 | Team Udayavani |

ಬೆಂಗಳೂರು: ಶನಿವಾರದಂದು ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯ ಗಣಕ ವಿಜ್ಞಾನ, ಎಲೆಕ್ಟ್ರಾನಿಕ್ಸ್‌ ಮತ್ತು ಮನಃಶಾಸ್ತ್ರ ವಿಷಯದ ಪರೀಕ್ಷೆಗೆ ಒಟ್ಟು 2019 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.  

Advertisement

ಈ ಮೂರು ಪರೀಕ್ಷೆ ಪೈಕಿ ಗಣಕ ವಿಜ್ಞಾನದಲ್ಲಿ ಬಾಗಲಕೋಟೆ ಹಾಗೂ ಚಾಮರಾಜನಗರದ ತಲಾ ಒಬ್ಬ ವಿದ್ಯಾರ್ಥಿ ಡಿಬಾರ್‌ ಆಗಿದ್ದು ಹೊರತು ಪಡಿಸಿ ಬೇರೆ ಯಾವುದೇ ಪರೀಕ್ಷಾ ಅಕ್ರಮ ನಡೆದಿಲ್ಲ ಎಂದು ಪಿಯು ಇಲಾಖೆ ಪ್ರಕಟನೆ ತಿಳಿಸಿದೆ. 

ಗಣಕ ವಿಜ್ಞಾನ ವಿಷಯದಲ್ಲಿ 1870 ವಿದ್ಯಾರ್ಥಿಗಳು ಗೈರಾಗಿದ್ದು, 78,314 ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಎಲೆಕ್ಟ್ರಾನಿಕ್ಸ್‌ ವಿಷಯದಲ್ಲಿ 85 ವಿದ್ಯಾರ್ಥಿಗಳು ಗೈರಾಗಿದ್ದು, 6,590 ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಮನಃಶಾಸ್ತ್ರ ವಿಷಯದಲ್ಲಿ 64 ವಿದ್ಯಾರ್ಥಿ ಗಳು ಗೈರಾಗಿದ್ದು 1,609 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಸೋಮವಾರ ವ್ಯವಹಾರ ಅಧ್ಯಯನ, ಜೀವಶಾಸ್ತ್ರ ಪರೀಕ್ಷೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next