Advertisement
ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದ ಉಪನ್ಯಾಸಕರು, ವೇತನ ತಾರತಮ್ಯ ನಿವಾರಣೆ ಸೇರಿದಂತೆ ಎಲ್ಲ ಬೇಡಿಕೆಗಳನ್ನು ಈಡೇರಿಸುವತ್ತ ರಾಜ್ಯ ಸರ್ಕಾರ ಕೂಡಲೇ ಗಮನ ಹರಿಸಬೇಕು. ಬೇಡಿಕೆಗಳ ಬಗ್ಗೆ ಸರ್ಕಾರ ತಾತ್ಸಾರ ಈ ಬಾರಿಯೂ ಮೌಲ್ಯಮಾಪನ ಬಹಿರಷ್ಕರಿಸುವುದು ಅನಿವಾರ್ಯವಾಗುತ್ತದೆ. ಇದರಿಂದಾಗುವ ತೊಂದರೆಗಳಿಗೆ ನಾವು ಜವಾಬ್ದಾರರಲ್ಲ. ಸರ್ಕಾರವೇ ಹೊಣೆ ಹೊರಬೇಕಾಗುತ್ತದೆ ಎಂದು ತಿಳಿಸಿದರು.
Related Articles
ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಾಲ್ಕನೇ ಹಂತದ ಹೋರಾಟ ಮಾ.9ರಿಂದ 27ರವರೆಗೆ ನಡೆಯುವ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷಾ ಕಾರ್ಯದಲ್ಲಿ ಎಲ್ಲ ಉಪನ್ಯಾಸಕರು ಮತ್ತು ಪ್ರಾಂಶುಪಾಲರು ಕಪ್ಪು ಪಟ್ಟಿ ಧರಿಸಿ ಪಾಲ್ಗೊಳ್ಳುವ ಮೂಲಕ ಮುಂದುವರೆಯಲಿದೆ. ಇದರಿಂದ ಪರೀಕ್ಷೆಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ಆದರೆ, ಪರೀಕ್ಷೆಯ ಕೊನೆಯ ದಿನದ ಮುನ್ನಾ ದಿನ (ಮಾ.26 ರ ಭಾನುವಾರ) ಉಭಯ ಸಂಘಗಳ ಪದಾಧಿಕಾರಿಗಳ ಸಭೆ ನಡೆಸಲು ನಿರ್ಧರಿಸಲಾಗಿದೆ. ಈ ಸಭೆಯ ದಿನಾಂಕದೊಳಗೆ ಸರ್ಕಾರ ನಮ್ಮ ಬೇಡಿಕೆ ಈಡೇರಿಕೆಗೆ ಸ್ಪಂಧಿಸದೇ ಹೋದರೆ ಸಭೆಯಲ್ಲಿ ಮೌಲ್ಯಮಾಪನ ಬಹಿಷ್ಕಾರದ ಬಗ್ಗೆ ಅಧಿಕೃತ ನಿರ್ಧಾರ ಕೈಗೊಂಡು ಪ್ರಕಟಿಸಲಾಗುವುದು ಎಂದು ತಿಮ್ಮಯ್ಯ ಪುರ್ಲೆ ಹೇಳಿದರು.
Advertisement
ಏನಿದು ವೇತನ ತಾರತಮ್ಯ ವಿವಾದ?*ವೇತನ ತಾರತಮ್ಯ ನಿವಾರಣೆಗಾಗಿ ಐಎಎಸ್ ಅಧಿಕಾರಿ ಜಿ.ಕುಮಾರ್ ನಾಯಕ್ ಅವರು ಹಿಂದೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿ¨ªಾಗ ಅವರ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. ಸಮಿತಿ ನೀಡಿದ ವರದಿಯಲ್ಲಿ, ಉಪನ್ಯಾಸಕರ ಮೂಲ ವೇತನ 25,300ಗೆ, ಪ್ರಾಂಶುಪಾಲರ ವೇತನ 32,800 ರೂ.ಗೆ ಮತ್ತು ಪ್ರೌಢ ಶಾಲಾ ಶಿಕ್ಷಕರ ವೇತನ 19,000ರೂ.ಗಳಿಗೆ ಹೆಚ್ಚಾಗಬೇಕು ಎಂದು ಶಿಫಾರಸು ಮಾಡಿದೆ. ಮೊದಲು ಈ ವರದಿ ನ್ಯಾಯಸಮ್ಮತವಾಗಿದ್ದು ಅನುಷ್ಠಾನಗೊಳಿಸುವದಾಗಿ ಹೇಳುತ್ತಾ ಬಂದಿದ್ದ ಸರ್ಕಾರ, ವರದಿ ಜಾರಿಯಿಂದ ಸರ್ಕಾರಕ್ಕೆ ಪ್ರತೀ ವರ್ಷ ಸುಮಾರು 170 ಕೋಟಿ ರೂ.ನಷ್ಟು ಹೊರೆ ಬೀಳಲಿದೆ ಎಂಬ ಕಾರಣಕ್ಕೆ ವರದಿಯನ್ನು ಪಕ್ಕಕ್ಕಿಟ್ಟಿದೆ. ಕಳೆದ ವರ್ಷ ಈ ವರದಿ ಅನಿಷ್ಠಾನಕ್ಕಾಗಿ ಶಿಕ್ಷಕರು, ಉಪನ್ಯಾಸಕರು ಹೋರಾಟ ತೀವ್ರಗೊಳಿಸಿದ್ದರಿಂದ ಸಂಧಾನಕ್ಕೆ ಮುಂದಾದ ಸರ್ಕಾರಕ್ಕೆ ಶಿಕ್ಷಕರು ವರದಿ ಅನಿಷ್ಠಾನ ಮಾಡಿದೆ ಹೋದರೆ ಕನಿಷ್ಠ 2 ವೇತನ ಬಡ್ತಿ ನೀಡುವಂತೆ ಬೇಡಿಕೆ ಇಟ್ಟಿದ್ದರು. ತಕ್ಷಣ ಒಂದು ವೇತನ ಬಡ್ತಿ ನೀಡಿದ್ದ ಸರ್ಕಾರ, ಇನ್ನೊಂದು ವೇತನ ಬಡ್ತಿಯನ್ನು ಡಿಸೆಂಬರ್ ಅಥವಾ ಜನವರಿ 2016ರ ವೇಳೆಗೆ ನೀಡುವುದಾಗಿ ಭರವಸೆ ನೀಡಿತ್ತು.