Advertisement

26 ಕೇಂದ್ರಗಳಲ್ಲಿ ಪಿಯು ಇಂಗ್ಲಿಷ್‌ ಪರೀಕ್ಷೆ

06:55 AM Jun 17, 2020 | Lakshmi GovindaRaj |

ಕೋಲಾರ: ಜಿಲ್ಲೆಯ 26 ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ಸುಗಮವಾಗಿ ನಡೆಸಲು ಸಕಲ ಸಿದ್ಧತೆಗಳನ್ನು ನಡೆಸಲಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಎ.ಎನ್‌.ಗೀತಾ ತಿಳಿಸಿದ್ದಾರೆ.

Advertisement

ಜೂ.18  ರಂದು ನಡೆಯಲಿರುವ ದ್ವಿತೀಯ ಪಿಯುಸಿ ಇಂಗ್ಲಿಷ್‌ ಪರೀಕ್ಷೆಯನ್ನು ಜಿಲ್ಲೆಯ 26 ಕೇಂದ್ರಗಳಲ್ಲಿ 14959 ವಿದ್ಯಾರ್ಥಿಗಳು ತೆಗೆದುಕೊಳ್ಳಲಿದ್ದಾರೆ. ತಾಲೂಕುವಾರು ಕೋಲಾರ 5483, ಬಂಗಾರಪೇಟೆ 1484, ಕೆಜಿಎಫ್ 1586, ಮಾಲೂರು  2300, ಮುಳಬಾಗಿಲು 2229 ಮತ್ತು ಶ್ರೀನಿವಾಸಪುರದಲ್ಲಿ 1862 ಮಕ್ಕಳು ಪರೀಕ್ಷೆ ತೆಗೆದುಕೊಳ್ಳಲಿದ್ದಾರೆ.

ಪ್ರತ್ಯೇಕ ಕೊಠಡಿ: ಪರೀಕ್ಷೆಯನ್ನು ಸುಗಮವಾಗಿ ನಡೆಸಲು 920 ಮಂದಿ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಅಂತರ ಜಿಲ್ಲೆಯ 432 ಹಾಗೂ ಅಂತರರಾಜ್ಯದ 66 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು, ಹೊರ ರಾಜ್ಯಗಳಿಂದ ಪರೀಕ್ಷೆಗೆ ಆಗಮಿಸುವ ವಿದ್ಯಾರ್ಥಿಗಳಿಗೆ ಈಗಾಗಲೇ ಇ-ಪಾಸ್‌ ನೀಡಲಾಗಿದೆ. ಇಂತ ವಿದ್ಯಾರ್ಥಿಗಳನ್ನು ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದ್ದು, ಇವರನ್ನು ಕ್ವಾರಂಟೈನ್‌ಗೊಳಪಡಿಸುವುದಿಲ್ಲ.

ಪರೀಕ್ಷಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ಆಗಮಿಸಲು ಜಿಲ್ಲಾದ್ಯಂತ 200 ಬಸ್‌ಗಳನ್ನು ಉಚಿತವಾಗಿ ನೇಮಿಸಲಾಗುತ್ತಿದೆ. ವಿದ್ಯಾರ್ಥಿ ಗಳು ಗುಂಪುಗೂಡಬಾರದು, ಕಡ್ಡಾಯವಾಗಿ ಮಾಸ್ಕ್  ಧರಿಸಿರಬೇಕು, ಸ್ಯಾನಿಟೈಸರ್‌ ಬಳಸಬೇಕು, ಒಂದು ಮೀಟರ್‌ ಅಂತರದಲ್ಲಿ ನಿಗದಿಪಡಿಸಿರುವ ಸ್ಥಳದಲ್ಲಿ ಕೂರಬೇಕು, ಸಾಮಾಜಿಕ ಅಂತರ ಕಾಪಾಡಬೇಕು.

ಸೋಂಕಿತರಿಗೆ ಆಗಸ್ಟ್‌ನಲ್ಲಿ ಪರೀಕ್ಷೆ: ಮೊಬೈಲ್‌ ಸಂಖ್ಯೆ, ವಿಳಾಸ ಕಡ್ಡಾಯವಾಗಿ ನೀಡಬೇಕು, ಜ್ವರ ಕೆಮ್ಮು ಇದ್ದರೆ ತಾವೇ ಔಷಧಿ ಮಾತ್ರೆ ತರಬೇಕು, ಸೋಂಕು ತಗುಲಿರುವ ವಿದ್ಯಾರ್ಥಿಗಳಿಗೆ ಸದ್ಯಕ್ಕೆ ಪರೀಕ್ಷೆ ಬರೆಯಲು ಅವಕಾಶವಿಲ್ಲವಾದರೂ, ಮುಂದಿನ ಆಗಸ್ಟ್‌ನಲ್ಲಿ  ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗುತ್ತಿದೆ.

Advertisement

ಸ್ವಚ್ಛತೆಗೆ ಆದ್ಯತೆ: ಪ್ರತಿಕೊಠಡಿಯಲ್ಲಿ ಅಳತೆಗನುಸಾರವಾಗಿ 12 ವಿದ್ಯಾರ್ಥಿಗಳ ಗುಣಕದಲ್ಲಿ ಆಸನ ವ್ಯವಸ್ಥೆ ಮಾಡಲಾಗುತ್ತಿದೆ. ಪ್ರತಿ 200  ವಿದ್ಯಾರ್ಥಿಗಳಿಗೆ ಒಂದರಂತೆ ಥರ್ಮಲ್‌ ಸ್ಕ್ಯಾನರ್‌ಗಳನ್ನು ಶಾಲಾ ಸಂಚಿತ ನಿಧಿಯಿಂದ ಖರೀದಿಸಬೇಕು, ಪ್ರತಿ ಕೇಂದ್ರದಲ್ಲಿ ಕನಿಷ್ಠ 100 ಮಾಸ್ಕ್ಗಳನ್ನು ಇಟ್ಟಿರಬೇಕು, ವಿದ್ಯಾರ್ಥಿಗಳು ಎಲೆಕ್ಟ್ರಾನಿಕ್‌ ಪರಿಕರಗಳನ್ನು ತರಲು  ಅನುಮತಿಸಬಾರದು,

ಪರೀಕ್ಷಾ ಕೇಂದ್ರಗಳ ಸ್ವಚ್ಛತೆಗೆ ಆದ್ಯತೆ ನೀಡಲು ಸೂಚಿಸಲಾಗಿದೆ. ದ್ವಿತೀಯ ಪಿಯುಸಿ ಪರೀಕ್ಷೆ ಕುರಿತಂತೆ ಯಾವುದೇ ಅನುಮಾನಗಳಿದ್ದಲ್ಲಿ ಸಹಾಯವಾಣಿ 08152-243580, 9008743152, 9731808881  ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next