ಹುಣಸೂರು: ನಗರದಲ್ಲಿ ಅರ್ಸುಲೆನ್ ಫ್ರಾನ್ಸಿಸ್ಕನ್ ವಿದ್ಯಾ ಮಂಡಳಿ ವತಿಯಿಂದ ನೂತನವಾಗಿ ನಿರ್ಮಿ ಸಿರುವ ಸಂತ ಜೋಸೆಫರ ಪ್ರಥಮ ದರ್ಜೆ ಕಾಲೇಜಿನ ಸುಸಜ್ಜಿತ ಕಟ್ಟಡವನ್ನು ಮೈಸೂರು ಪ್ರಾಂತ್ಯದ ಬಿಷಪ್ ಡಾ. ಕೆ.ಎ. ವಿಲಿಯಂ ಹಾಗೂ ಸಂಸ್ಥೆಯ ಕಾರ್ಯದರ್ಶಿ ಲಿಲ್ಲಿಪಿಂಟೋ ಉದ್ಘಾಟಿಸಿದರು.
ಆ ನಂತರ ಕಾಲೇಜು ಆವರಣದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಬಿಷಪ್ ಡಾ. ಕೆ.ಎ. ವಿಲಿಯಂ, ಮೈಸೂರು ಪ್ರಾಂತ್ಯಕ್ಕೆ ಹಳೆಯದಾದ ಹುಣಸೂರು ನಗರದ ಸಂತಜೋಸೆಫರ ವಿದ್ಯಾ ಸಂಸ್ಥೆಯು ಬೃಹದಾಕಾರವಾಗಿ ಬೆಳೆದಿದೆ.
ಪದವಿ ಕಾಲೇಜಿಗಾಗಿ ಪ್ರತ್ಯೇಕ ಸುಸಜ್ಜಿತ ಕಟ್ಟಡ ನಿರ್ಮಿಸಿ ಸಮಾಜಕ್ಕೆ ತನ್ನದೇ ಆದ ಶಿಕ್ಷಣ ಸೇವೆ ಒದಗಿಸುತ್ತಿದೆ ಎಂದು ಹೇಳಿದರು. ಸಂಸ್ಥೆಯ ಕಾರ್ಯದರ್ಶಿ ಸಿಸ್ಟರ್ ಲಿಲ್ಲಿ ಪಿಂಟೋ, ಹುಣಸೂರಿನಲ್ಲಿ ಕಳೆದ 65 ವರ್ಷ ಗಳಿಂದ ಪ್ರಾಥಮಿಕ ಶಾಲೆಯಿಂದ ಪದವಿವರೆಗೆ ಶಿಕ್ಷಣ ಸಂಸ್ಥೆಯಿದೆ.
ಈ ಹಿಂದಿನ ಸಂಸ್ಥೆ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಕಟ್ಟಡ ನಿರ್ಮಾಣಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿದರು. ಮೈಸೂರು ಪ್ರಾಂತ್ಯಾಕಾರಿಣಿ ಅಪೋಲಿನ್ ಕೊರ್ಡಿರೋ, ಈ ಪದವಿ ಕಾಲೇಜಿನ ಮೊದಲ ಬ್ಯಾಚ್‌ನ ವಿದ್ಯಾರ್ಥಿಗಳು ಶೇ.100 ರಷ್ಟು ಫಲಿ ತಾಂಶ ಪಡೆದಿರುವುದು ದೊಡ್ಡ ಸಾಧನೆ ಎಂದು ಬಣ್ಣಿಸಿದರು.
ಹುಣಸೂರು ಚರ್ಚ್‌ನ ಧರ್ಮುಗುರು ಜೆ.ರಾಯಪ್ಪ, ಮೈಸೂರು ಪ್ರಾಂತ ಉಪಕಾರ್ಯದರ್ಶಿ ಲಿಲ್ಲಿರೋಡ್ರಿಗ್ರಸ್, ಸಲಹೆಗಾರರಾದ ಡೆಸಿ ಡಿ ಕೋಸ್ಟ, ಸಂಚಾಲಕ ತೆರೆಸ್ ಡಿಸೋಜಾ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲರಾದ ಎ.ಕೆ.ದೀಪ್ತಿ ಹಾಗೂ ಉಪನ್ಯಾಸಕ ರವಿಕುಮಾರ, ಉಪನ್ಯಾಸಕ ಕಾರ್ತಿಕ್, ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಪಿಯು ಕಾಲೇಜಿನ ಪ್ರಾಂಶುಪಾಲರಾದ ಅನಿತಾಡಿಸೋಜಾ, ಪ್ರೌಢಶಾಲೆ ಮುಖ್ಯ ಶಿಕ್ಷಕಿ ಲೀನಾಮಸ್ಕರೇನಸ್, ಪ್ರಾಥಮಿಕ ಶಾಲೆ ಮುಖ್ಯಸ್ಥೆ μಲೋಮಿನಾ ನರೋನ್ಹಾ, ಪೋಷಕರು, ವಿದ್ಯಾರ್ಥಿಗಳು ಇದ್ದರು.