Advertisement
ಪ್ರತಿ ವರ್ಷ ಮೇ ಮೂರನೇ ವಾರಗಳಲ್ಲಿ ದ್ವಿತೀಯ ಪಿಯುಸಿ ತರಗತಿಗಳನ್ನು ಇಲಾಖೆ ಆರಂಭಿಸುತ್ತಿತ್ತು.
Related Articles
Advertisement
ಮುಂದಿನ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ತರಗತಿ ಆರಂಭಿಸಲು ಇಲಾಖೆಯ ಅಧಿಕಾರಿಗಳು ಈಗಾಗಲೇ ಸಭೆ ನಡೆಸಿದ್ದಾರೆ. ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು, ಪಾಳಿ ಪದ್ಧತಿ ಅನುಸರಿಸುವುದು ಹೀಗೆ ಹಲವು ವಿಷಯದ ಬಗ್ಗೆ ಚರ್ಚೆಯಾಗಿದೆ.
ಆದರೆ, ಸರಕಾರದಿಂದ ಅನುಮತಿ ಸಿಗುವವರೆಗೂ ತರಗತಿ ಆರಂಭಿಸಲು ಸಾಧ್ಯವಿಲ್ಲ. ಸರಕಾರದ ಸೂಚನೆ ಬಂದ ಅನಂತರವೇ ತರಗತಿ ಆರಂಭಿಸಲಾಗುತ್ತದೆ. ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಸರಕಾರದ ಸೂಚನೆಗಳನ್ನು ಪಾಲಿಸಿಯೇ ಮುನ್ನೆಡೆಯಲಿದ್ದೇವೆ ಎಂದು ಪಿಯು ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.