Advertisement

ಪಶುಸಂಗೋಪನೆ ಇಲಾಖೆಯಿಂದ ಅನ್ಯ ಕರ್ತವ್ಯದ ನಿಯೋಜನೆಗೆ ನಿರ್ಬಂಧ : ಸಚಿವ ಪ್ರಭು ಚವ್ಹಾಣ್

07:30 PM Jul 09, 2021 | Team Udayavani |

ಬೆಂಗಳೂರು : ಅನ್ಯ ಇಲಾಖೆಗೆ ನಿಯೋಜನೆಗೊಂಡ ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳ ಸೇವೆಯನ್ನು ಜುಲೈ 31ರ ಒಳಗೆ ವಾಪಸ್ ಪಡೆಯಲು ನಿರ್ಧರಿಸಲಾಗಿದ್ದು ಇನ್ನು ಮುಂದೆ ಪಶುಸಂಗೋಪನೆಯಿಂದ ಸಿಬ್ಬಂದಿಗಳನ್ನು ಅನ್ಯ ಇಲಾಖೆಗೆ ನಿಯೋಜನೆ ಮಾಡುವುದನ್ನು ನಿರ್ಬಂಧಿಸಲಾಗಿದೆ ಎಂದು ಸಚಿವ ಪ್ರಭು ಚವ್ಹಾಣ್  ತಿಳಿಸಿದ್ದಾರೆ.

Advertisement

ರೈತರ, ಪಶುಪಾಲಕರ ಅಭಿವೃದ್ಧಿಗಾಗಿ ಇಲಾಖೆಯಿಂದ ಪ್ರಾಣಿ ಕಲ್ಯಾಣ ಮಂಡಳಿ, ಪಶುಸಂಜೀವಿನಿ, ಗೋಹತ್ಯೆ ನಿಷೇಧ, ಜಿಲ್ಲೆಗೊಂದು ಗೋಶಾಲೆ ಹಾಗೂ ದಿನದ 24 ಗಂಟೆ ಕಾರ್ಯ ನಿರ್ವಹಿಸುವ ಪ್ರಾಣಿ ಕಲ್ಯಾಣ ಸಹಾಯವಾಣಿಯಂತಹ ಜನೋಪಯೋಗಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ. ಅಲ್ಲಿ ಕೆಲಸ ಮಾಡುವ ಸಿಬ್ಬಂದಿ ಬೇರೆ ಕಡೆ ನಿಯೋಜನೆಯ ಮೇಲೆ ಹೋಗಿರುವುದರಿಂದ ಸಿಬ್ಬಂದಿ ಕೊರತೆಯುಂಟಾಗಿದ್ದು, ರಾಜ್ಯದ ವಿವಿಧ ಭಾಗಗಳಿಂದ ಬರುತ್ತಿರುವ ರೈತರ ಕರೆಗಳನ್ನು ನಿರ್ವಹಿಸುವುದು ಸವಾಲಾಗಿದೆ. ಅಲ್ಲದೆ, ಲಸಿಕಾ ಕ್ರಾರ್ಯಕ್ರಮಗಳ ಪ್ರಗತಿ ಸಹ ಇದರಿಂದ ಕುಠಿತವಾಗುವ ಸಾದ್ಯತೆ ಇದೆ. ಆದ್ದರಿಂದ ಅನ್ಯ ಕರ್ತವ್ಯದ ಮೇಲೆ ತೆರಳಿದ ಎಲ್ಲ ಸಿಬ್ಬಂದಿಯನ್ನು ಇದೇ ತಿಂಗಳ ಕೊನೆಯಲ್ಲಿ ಇಲಾಖೆಗೆ ಹಿಂತಿರುಗಲು ಆದೇಶಿಸಲಾಗಿದೆ ಎಂದರು .

ಇದನ್ನೂ ಓದಿ : ಮೈಕ್ರೋಸಾಫ್ಟ್ ಉದ್ಯೋಗಿಗಳಿಗೆ 1ಲಕ್ಷ ರೂ. ಬೋನಸ್‌! ಕೋವಿಡ್ ಸಮಯದಲ್ಲಿ ನೌಕರ ಸ್ನೇಹಿ ಹೆಜ್ಜೆ

ಅಲ್ಲದೇ ಪ್ರತಿ ಬಾರಿ ಅಧಿವೇಶನದಲ್ಲಿ ಪ್ರತಿಪಕ್ಷಗಳಿಂದ ಹಾಗೂ ಆಡಳಿತ ಪಕ್ಷದ ಸದಸ್ಯರಿಂದ ಪಶುವೈದ್ಯರ ಕೊರತೆ ಕುರಿತು ಚರ್ಚೆ ನಡೆಯುತ್ತಲೇ ಇದೆ. ಈ ಕುರಿತು ಮುಖ್ಯಮಂತ್ರಿಗಳು ಪತ್ರದ ಮೂಲಕ ಸೂಚನೆ ನೀಡಿದ್ದಾರೆ. ವಿಧಾನ ಪರಿಷತ್ತಿನ ಸಭಾಪತಿಗಳಾದ ಬಸವರಾಜ್ ಹೊರಟ್ಟಿ ಅವರು ಸಹ ಪತ್ರದ ಮೂಲಕ ಈ ವಿಷಯವನ್ನು ಪ್ರಸ್ತಾಪಿಸಿದ್ದರು.

ಅರಣ್ಯ ಇಲಾಖೆ, ಪಶುವೈದ್ಯಕೀಯ ಮಹಾವಿದ್ಯಾಲಯಗಳು, ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಪಶುಪಾಲನಾ ಅಧಿನದಲ್ಲಿನ ನಿಗಮ/ಮಂಡಳಿಗಳಲ್ಲಿ ಗುರುತುಪಡಿಸಿದ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪಶುಪಾಲನಾ ಇಲಾಖೆಯ ವಿವಿಧ ವೃಂದದ ಪಶುವೈದ್ಯಾಧಿಕಾರಿಗಳನ್ನು ಹಾಗೂ ಸಿಬ್ಬಂದಿಗಳನ್ನು ಹೊರತುಪಡಿಸಿ ಉಳಿದ ಎಲ್ಲರ ಸೇವೆಯನ್ನು ಹಿಂಪಡೆಯಲಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next