Advertisement

ಖ್ಯಾತ ಅಥ್ಲೀಟ್‌ ಪಿ.ಟಿ.ಉಷಾ ಕೋಚ್‌ ನಂಬಿಯಾರ್‌ ನಿಧನ

09:36 PM Aug 19, 2021 | Team Udayavani |

ತಿರುವನಂತಪುರ: ದಂತಕಥೆ, ಅಥ್ಲೆಟಿಕ್ಸ್‌ ಕೋಚ್‌ ಒ.ಎಂ.ನಂಬಿಯಾರ್‌ (89) ಗುರುವಾರ ನಿಧನ ಹೊಂದಿದರು.

Advertisement

ಪದ್ಮಶ್ರೀ ಮತ್ತು ದ್ರೋಣಾಚಾರ್ಯ ಪ್ರಶಸ್ತಿಗಳಿಗೆ ಭಾಜನರಾಗಿದ್ದ ನಂಬಿಯಾರ್‌, ಖ್ಯಾತ ಅಥ್ಲೀಟ್‌ ಪಿ.ಟಿ.ಉಷಾ ಅವರ ತರಬೇತುದಾರ ರಾಗಿದ್ದರು. 4 ಬಾರಿಯ ಒಲಿಂಪಿಯನ್‌ ಶೈನಿ ವಿಲ್ಸನ್‌, ವಂದನಾ ರಾವ್‌ ಅವರಿಗೂ ನಂಬಿಯಾರ್‌ ತರಬೇತಿ ನೀಡಿದ್ದರು. ಕಣ್ಣೂರಿನಲ್ಲಿ ಜನಿಸಿದ ಒ.ಎಂ.ನಂಬಿಯಾರ್‌ ಸ್ವತಃ ಚಾಂಪಿಯನ್‌ ಅಥ್ಲೀಟ್‌ ಆಗಿದ್ದರು.

ಕೋಯಿಕೋಡ್‌ನ‌ ಗುರುವಾಯೂರಪ್ಪನ್‌ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಇವರ ಪ್ರತಿಭೆಯನ್ನು ಗುರುತಿಸಿದ ಪ್ರಾಂಶುಪಾಲರು ಆರ್ಮಿಯನ್ನು ಸೇರುವಂತೆ ಸಲಹೆ ಮಾಡಿದರು. ಮುಂದೆ 15 ವರ್ಷ ಕಾಲ ಇಂಡಿಯನ್‌ ಏರ್‌ ಫೋರ್ಸ್‌ನಲ್ಲಿ ಸೇವೆ ಸಲ್ಲಿಸಿ 1970ರಲ್ಲಿ ನಿವೃತ್ತರಾದರು.

ಇದನ್ನೂ ಓದಿ:ಟಿಎಂಸಿ ನಾಯಕರನ್ನು ತಾಲಿಬಾನ್ ಸ್ಟೈಲಿನಲ್ಲಿ ಎದುರಿಸಿ|ಬಿಜೆಪಿ ಶಾಸಕನ ವಿವಾದಾತ್ಮಕ ಹೇಳಿಕೆ  

ಪಟಿಯಾಲದ ನ್ಯಾಶನಲ್‌ ಇನ್‌ಸ್ಟಿಟ್ಯೂಟ್‌ ಆಫ್ ಸ್ಪೋರ್ಟ್ಸ್  ನಲ್ಲಿ ಕೋಚಿಂಗ್‌ ಡಿಪ್ಲೋಮಾ ಪೂರ್ತಿಗೊಳಿಸಿದ ನಂಬಿಯಾರರು ಆ್ಯತ್ಲೀಟ್‌ಗಳಿಗೆ ಮಾರ್ಗದರ್ಶನ ನೀಡಲಾರಂಭಿಸಿದರು.

Advertisement

ನಂಬಿಯಾರ್‌ ನಿಧನಕ್ಕೆ ಆ್ಯತ್ಲೆಟಿಕ್ಸ್‌ ಫೆಡರೇಶನ್‌ ಆಫ್ ಇಂಡಿಯಾ, ಪಿ.ಟಿ. ಉಷಾ ಶೋಕ ವ್ಯಕ್ತಪಡಿಸಿದ್ದಾರೆ.

ನನ್ನ ಗುರು, ಕೋಚ್‌, ಮಾರ್ಗದರ್ಶಿ, ದಾರಿದೀಪ.. ಎಲ್ಲವೂ ಆಗಿದ್ದ ನಂಬಿಯಾರ್‌ ಸರ್‌ ಅವರನ್ನು ಕಳೆದುಕೊಂಡಿದ್ದೇನೆ. ನನ್ನ ಬದುಕಿನಲ್ಲಿ ಅವರು ವಹಿಸಿದ ಪಾತ್ರವನ್ನು ಶಬ್ದಗಳಲ್ಲಿ ಹಿಡಿದಿಡಲು ಸಾಧ್ಯವಿಲ್ಲ’
– ಪಿ.ಟಿ. ಉಷಾ, ಖ್ಯಾತ ಆ್ಯತ್ಲೀಟ್‌

 

Advertisement

Udayavani is now on Telegram. Click here to join our channel and stay updated with the latest news.

Next