ಬೆಂಗಳೂರು: ಕೂಡ್ಲು ಗೇಟ್‌ನಲ್ಲಿ ಬಸ್‌ಗೆ ಕಾಯುತ್ತಿದ್ದ ಮಹಿಳಾ ಟೆಕ್ಕಿಯೊಬ್ಬರಿಗೆ ವಿಕೃತ ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದು ಪರಾರಿಯಾಗಿರುವ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ. ಅಷ್ಟಕ್ಕೆ ತನ್ನ ಪುಂಡಾಟ ನಿಲ್ಲಿಸದ ಅದೇ ದುಷ್ಕರ್ಮಿ ಆನೇಕಲ್‌ನಲ್ಲಿಯೂ ಯುವತಿಯೊಬ್ಬರ ಜೊತೆ ಅಸಭ್ಯವಾಗಿ ವರ್ತಿಸಿ ಚಾಕು ಇರಿಯುವ ವೇಳೆಗೆ ಸಾರ್ವಜನಿಕರಿಗೆ ಸಿಕ್ಕಿಬಿದಿದ್ದಿದ್ದು ಬಂಡೇಪಾಳ್ಯ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ.
ಓಡಿಸ್ಸಾ ಮೂಲದ ಬೀರೇನ್ ಸಿಂಗ್ (28) ಬಂಧಿತ. ನಗರದ ಖಾಸಗಿ ಕಂಪೆನಿಯೊಂದರಲ್ಲಿ ಅಡುಗೆ ಭಟ್ಟನಾಗಿ ಕೆಲಸ ಮಾಡಿಕೊಂಡಿದ್ದಾನೆ. ಆರೋಪಿ ಸೈಕೋ ವರ್ತನೆ ತೋರುತ್ತಿದ್ದು, ಇನ್ನಷ್ಟು ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು.
ಕೋನೆನಾ ಅಗ್ರಹಾರದ ನಿವಾಸಿಯಾಗಿರುವ ಸ್ನೇಹಾ ಎಂಬುವವರು ಕೂಡ್ಲುಗೇಟ್ ಸಮೀಪದ ಖಾಸಗಿ ಕಂಪೆನಿಯೊಂದರಲ್ಲಿ ಸಾಫ್ಟ್ವೇರ್ ಉದ್ಯೋಗಿಯಾಗಿದ್ದು, 2ನೇ ಶಿಫ್ಟ್ನ ಕೆಲಸಕ್ಕೆ ತೆರಳುವ ಸಲುವಾಗಿ ಗುರುವಾರ ಮಧ್ಯಾಹ್ನ 1ಗಂಟೆ ಸುಮಾರಿಗೆ ಕೂಡ್ಲುಗೇಟ್ ಬಸ್ ನಿಲ್ದಾಣದಲ್ಲಿ ನಿಂತಿದ್ದರು. ಈ ವೇಳೆ ಅಲ್ಲಿಗೆ ಬಂದ ಸೈಕೋ ಬಿರೇನ್‌ಸಿಂಗ್ ಕೆಲಕಾಲ ಸುಮ್ಮನಿದ್ದು, ಯುವತಿಯನ್ನು ನೋಡಿ ವಿಚಿತ್ರವಾಗಿ ವರ್ತಿಸಿದ್ದಾನೆ.
ಅಲ್ಲದೆ ಇದ್ದಕ್ಕಿದ್ದಂತೆ ಆಕೆಯನ್ನು ಮುಟ್ಟಲು ಯತ್ನಿಸಿದ್ದಾನೆ. ಇದರಿಂದ ಗಾಬರಿಯಾದ ಯುವತಿ ಕಿರುಚಿಕೊಳ್ಳಲು ಆರಂಭಿಸುತ್ತಿದ್ದಂತೆ, ತನ್ನ ಕೈಯಲ್ಲಿದ್ದ ಸಣ್ಣ ಚಾಕುವಿನಿಂದ ಆಕೆಯ ಎಡಗೈಗೆ ಇರಿದು ಪರಾರಿಯಾಗಿದ್ದಾನೆ.ಚಾಕು ಇರಿತದಿಂದ ಗಾಯಗೊಂಡಿದ್ದ ಯುವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಮನೆಗೆ ತೆರಳಿದ್ದಾರೆ ಎಂದು ಪೊಲೀಸರು ತಿಳಿಸಿದರು.
ಕೂಡ್ಲು ಗೇಟ್‌ನಲ್ಲಿ ಯುವತಿಯ ಕೈಗೆ ಚಾಕು ಇರಿದು ಪರಾರಿಯಾದ ಬಳಿಕ ಆರೋಪಿ ಬೀರೆನ್ ಸಿಂಗ್, ಆನೇಕಲ್‌ಗೆ ತೆರಳಿದ್ದಾನೆ. ಅಲ್ಲಿಯೂ ಕೂಡ ಯುವತಿಯ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದಾಗಲೇ ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.