ಹುಮನಾಬಾದ: ಮೊಬೈಲ್ ಲೊಕೇಶನ್ ಆಧಾರದಲ್ಲಿ ಅಪರಿಚಿತ ವ್ಯಕ್ತಿ ಕೊಲೆಗೈದಿದ್ದ ಸೈಕೋ ಕಿಲ್ಲರ್‌ನನ್ನು ಪೊಲೀಸ್ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತಾಲೂಕಿನ ಓತಗಿ ಗ್ರಾಮದ ಚನ್ನಾರೆಡ್ಡಿ ಬಂಧಿತ ಆರೋಪಿ. ಈತ ಪಟ್ಟಣದ ಬಸ್ ನಿಲ್ದಾಣದಲ್ಲಿ ರುಮ್ಮನಗೊಡ ಗ್ರಾಮದ ಶರಣಯ್ನಾ ಮಠ ಎಂಬುವನ್ನು ಕ್ಷುಲಕ್ಕ ಕಾರಣಕ್ಕೆ ಸಂಚುಹಾಕಿ ಕೊಲೆ ಮಾಡಿದ್ದ. ಈ ಕುರಿತು ಹುಮನಾವಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಹುಮನಾಬಾದ ಪೊಲೀಸರು, ಮೊಬೈಲ್ ಲೊಕೇಶನ್ ಆಧಾರದಲ್ಲಿ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಪತ್ತೆ ಹಚ್ಚಿದ್ದು ಹೇಗೆ?: ಮೃತ ವ್ಯಕ್ತಿಯ ಶವ ಬಸ್ ನಿಲ್ದಾಣದಲ್ಲಿ ಪತ್ತೆಯಾದ ಸಂದರ್ಭದಲ್ಲಿ ಅಪರಿಚಿತ ಎಂದು ಗುರುತ್ತಿಸಲಾಗಿತ್ತು. ಬಸ್ ನಿಲ್ದಾಣದಲ್ಲಿ ಏನಾಗಿದೆ ಎಂಬುವುದು ಪೊಲೀಸ್ ಅಧಿಕಾರಿಗಳು ತಿಳಿದುಕೊಳ್ಳಲು ಬಸ್ ನಿಲ್ದಾಣದಲ್ಲಿ ಸಿಸಿ ಕ್ಯಾಮೆರಾಗಳ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಯಾವುದೇ ಕ್ಯಾಮೆರಾದಲ್ಲಿ ಯಾವುದೇ ಚಿತ್ರಣಗಳು ಕಂಡುಬಂದಿಲ್ಲ. ಆಗ ಕೊಲೆ ಮಾಡಿದ್ದು ಯಾರು ಎಂಬುದು ಪತ್ತೆ ಹಚ್ಚುವುದು ಪೊಲೀಸರಿಗೆ ಸವಾಲಾಗಿತ್ತು. ಈ ಮಧ್ಯದಲ್ಲಿ ಮೃತಪಟ್ಟ ವ್ಯಕ್ತಿಯ ಗುರುತು ಪತ್ತೆಯಾಗಿದೆ. ನಂತರ ಆತನ ಮೊಬೈಲ್ ತೆಗೆದುಕೊಂಡು ಹೋಗಿದ್ದ ಆರೋಪಿ ಪತ್ತೆಗೆ ಜಾಲ ಬಿಸಿದಾಗ ತಾಲೂಕಿನ ಓತಗಿ ಗ್ರಾಮದಲ್ಲಿ ಮೊಬೈಲ್ ಲೊಕೇಶನ್ ಕಂಡುಬಂದಿದೆ. ಇದರ ಆಧಾರದಲ್ಲಿ ಪೊಲೀಸ್ ಅಧಿಕಾರಿಗಳು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ:ಚಿಕ್ಕಮಗಳೂರು: ಆಸ್ಪತ್ರೆಯಿಂದ ಪರಾರಿಯಾದ ವಿಚಾರಣಾಧೀನ ಖೈದಿ
ಕೊಲೆ ಮಾಡಿದ್ದೇಕೆ?: ಹೈದ್ರಾಬಾದದಿಂದ ಸ್ವಗ್ರಾಮಕ್ಕೆ ತೆರಳುವ ಮಧ್ಯದಲ್ಲಿ ಹುಮನಾಬಾದ ಪಟ್ಟಣದಕ್ಕೆ ಬಂದಿದ್ದ ಶರಣಯ್ನಾ ಬಸ್ ನಿಲ್ದಾಣದಲ್ಲಿ ಕುಡಿದ ಅಮಲಿನಲ್ಲಿದ್ದ ಆರೋಪಿ ಚನ್ನಾರೆಡ್ಡಿಯ ಪರಿಚಯವಾಗಿದೆ. ಫೋನ್ ಪೇಗೆ ಹಣ ಹಾಕುವಂತೆ ಹಾಗೂ ಮಾತಾಡಲು ಮೊಬೈಲ್ ಕೊಡುವಂತೆ ಶರಣಯ್ಯಗೆ ಒತ್ತಾಯಿಸಿದ್ದಾನೆ. ಈ ಮಧ್ಯೆ ಇಬ್ಬರ ನಡುವೆ ಪರಸ್ಪರ ಜಗಳವಾಗಿದೆ. ಸ್ವಗ್ರಾಮಕ್ಕೆ ತೆರಳಲು ಬಸ್ ಇಲ್ಲದ ಕಾರಣ ಬಸ್ ನಿಲ್ದಾಣದಲ್ಲಿ ಮಲಗಿದ ಸಂದರ್ಭದಲ್ಲಿ ಆರೋಪಿ ಚನ್ನಾರೆಡ್ಡಿ ಹರಿತವಾದ ಪರಸಿ ಕಲ್ಲಿನಿಂದ ಬಲವಾಗಿ ಹೊಡೆದು ಕೊಲೆ ಮಾಡಿದ್ದಾನೆ. ಅಲ್ಲದೆ ಮೃತ ವ್ಯಕ್ತಿಯ ಮೊಬೈಲ್ ತೆಗೆದುಕೊಂಡು ಹೋಗಿದ್ದು, ಪೊಲೀಸ್ ತನಿಖೆಗೆ ಸಹಕಾರಿಯಾಗಿದೆ.
ಮತ್ತೊಂದು ಕೊಲೆ ಕೊಲೆ ಮಾಡಿದ ಆರೋಪಿ
ಚನ್ನಾರೆಡ್ಡಿ ಈ ಹಿಂದೆ 2009ರಲ್ಲಿ ತೆಲಂಗಾಣದ ರಾಜೇಂದ್ರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಣಕ್ಕಾಗಿ ಕೊಲೆ ಮಾಡಿ ಸುಮಾರು ಹತ್ತಕ್ಕೂ ಅಧಿಕ ವರ್ಷ ಜೈಲುವಾಸ ಅನುಭವಿಸಿ ಬಿಡುಗಡೆಯಾಗಿದ್ದ. ಸುಮಾರು ಒಂದೂವರೆ ವರ್ಷದ ಹಿಂದೆ ಸ್ವಗ್ರಾಮಕ್ಕೆ ಬಂದಿದ್ದ ಆರೋಪಿ ಚನ್ನಾರೆಡ್ಡಿ ಇದೀಗ ಮತ್ತೊಂದು ಕೊಲೆ ಮಾಡಿ ಜೈಲುವಾಸ ಅನುಭವಿಸುವಂತಾಗಿದೆ. ಆರೋಪಿ ಒಂದು ರೀತಿ ಸೈಕೋ ತರಹ ಇದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.