Advertisement

ಶಿವಲಿಂಗಕ್ಕೆ ಭಾವೈಕ್ಯ ಟಚ್‌: ಮುಸ್ಲಿಂ ಕುಟುಂಬದಿಂದ ಪೀಠಕ ತಯಾರಿಕೆ

12:30 AM Mar 04, 2019 | |

ಬಾಗಲಕೋಟೆ: ವೀರಶೈವ-ಲಿಂಗಾಯತರು ಸಹಿತ ಹಿಂದೂಗಳು ಶ್ರದ್ಧಾಭಕ್ತಿಯಿಂದ ಪೂಜಿಸುವ ಲಿಂಗಕ್ಕೆ ಸಂಸ್ಕೃತಿ- ಪರಂಪರೆ ಇದೆ. ಬೀಳಗಿ ತಾಲೂಕಿನ ಕೊಪ್ಪ ಎಸ್‌.ಕೆ.ಗ್ರಾಮದ ಮುಸ್ಲಿಂ ಸಮುದಾಯದವರು ಲಿಂಗದೊಳಗಿನ ಪೀಠಕವನ್ನು ತಯಾರಿಸುತ್ತಾರೆ ಎನ್ನುವುದೇ ವಿಶೇಷ. ಇಲ್ಲಿನ ನೂರಪ್ಪನವರ ಕುಟುಂಬ 5 ತಲೆಮಾರಿನಿಂದ ಈ ಕಾಯಕದಲ್ಲಿ ತೊಡಗಿಸಿಕೊಂಡಿ ದೆ. ಇಲ್ಲಿ ಸಿದಟಛಿಗೊಂಡ ಪೀಠಕವನ್ನೇ ದೇಶದ ವಿವಿಧ ಭಾಗಕ್ಕೆ ಪೂರೈಸಲಾಗುತ್ತದೆ. ಅಂತಹ ಶಿವಲಿಂಗ (ಅತಿಚಿಕ್ಕ ಶಿವಲಿಂಗ)ವನ್ನು ಕೊಪ್ಪ ಎಸ್‌.ಕೆ. ಗ್ರಾಮ ಬಿಟ್ಟರೆ ದೇಶದ ಯಾವ ಮೂಲೆಯಲ್ಲೂ ತಯಾರಿಸುವುದಿಲ್ಲ.

Advertisement

ಈ ಚಿಕ್ಕ ಶಿವಲಿಂಗ ತಯಾರಿಸುವವರು ಕೊಪ್ಪ ಎಸ್‌.ಕೆ. ಗ್ರಾಮದ ಕಾಸಿಮ್‌ಸಾಬ್‌ ಸೈದುಸಾಬ ನೂರಪ್ಪನವರ, ನೂರಸಾಬ ಸೈದುಬಾಸ ನೂರಪ್ಪನವರ, ಲಾಲಸಾಬ ನೂರಪ್ಪನವರ ಕುಟುಂಬ. ಕಾಸಿಮ್‌ ಸಾಬ್‌ರ ಮಕ್ಕಳಾದ ಅಬ್ದುಲ್‌ರಜಾಕ್‌ ಮತ್ತು ಸಲೀಮ್‌ ಕೂಡ ಈ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರತಿನಿತ್ಯ 1500ರಿಂದ 2 ಸಾವಿರ ಪೀಠಕ ತಯಾರಿಸಲಾ ಗುತ್ತಿದೆ. ಸಾಮೂಹಿಕ ಲಿಂಗಧಾರಣೆ, ಇಷ್ಟಲಿಂಗ ಪೂಜೆ, ಜಗದ್ಗುರು ಪೀಠಗಳಲ್ಲಿ ನಡೆಯುವ ಉತ್ಸವ ವೇಳೆ ಮುಂಗಡವಾಗಿ ಆರ್ಡರ್‌ ನೀಡಿ ತರಿಸಿಕೊಳ್ಳುತ್ತಾರೆ. ಪ್ರತಿ ವರ್ಷ 2.50 ಲಕ್ಷ ದಿಂದ 3 ಲಕ್ಷದ ವರೆಗೆ ಅದನ್ನು ತಯಾರಿಸಲಾಗುತ್ತದೆ.

ಅವುಗಳನ್ನು ಮಹಾರಾಷ್ಟ್ರದ ರಾಮಯ್ಯ, ನಾಗಯ್ಯ ಸ್ವಾಮಿ ಹೆಚ್ಚಿನ ಪ್ರಮಾಣದಲ್ಲಿ ತೆಗೆದುಕೊಂಡು ಹೋಗಿ ಶಿವಲಿಂಗ ತಯಾರಿಸುತ್ತಾರೆ. ಕಲಾದಗಿ ಸಮೀಪದ ಉದಗಟ್ಟಿಯಲ್ಲಿ ಅದನ್ನು ತಯಾರಿಸುವ ಕಲ್ಲು ಸಿಗುತ್ತದೆ. ಅಲ್ಲಿ ಸಿಗುವ ಕಲ್ಲಿನಲ್ಲಿ ಮಾತ್ರ ಪೀಠಕಗಳನ್ನು ತಯಾರಿಸಲಾಗುತ್ತದೆ.

ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next