Advertisement

Dandeli ಮತದಾನದ ದಿನವೇ ಗ್ಯಾರೇಜ್ ಸೇರಿದ ಪಿಎಸ್ಐ ವಾಹನ

07:26 PM May 07, 2024 | Team Udayavani |

ದಾಂಡೇಲಿ : ರಾಷ್ಟ್ರದ ಮಹೋನ್ನತ ಚುನಾವಣೆಯಾಗಿರುವ ಲೋಕಸಭಾ ಚುನಾವಣೆಯ ಮತದಾನದ ದಿನದಂದೇ ಅಂದರೆ ಇಂದು ಮಂಗಳವಾರ ದಾಂಡೇಲಿ ನಗರ ಠಾಣೆಯ ಪಿಎಸ್ಐ ಅವರ ಸರಕಾರಿ ವಾಹನ ಗ್ಯಾರೇಜ್ ಸೇರಿಕೊಂಡ ಘಟನೆ ನಡೆದಿದೆ.

Advertisement

ಮೊದಲೇ ಡಕೋಟಾ ಎಕ್ಸಪ್ರೆಸ್ ಎಂಬಂತಿರುವ ವಾಹನವನ್ನು ದಾಂಡೇಲಿ ನಗರ ಠಾಣೆಯ ಪಿಎಸ್ಐ ಅವರಿಗೆ ನೀಡಲಾಗಿದೆ. ಈ ವಾಹನ ಆಟಕ್ಕುಂಟು ಲೆಕ್ಕಕ್ಕಿಲ್ಲದ ರೀತಿಯಲ್ಲಿ ಇದ್ದು, ತುರ್ತು ಸಮಯದಲ್ಲೇ ಕೈ ಕೊಡುವ ಮೂಲಕ ಇಲಾಖೆಯ ಘನತೆಯನ್ನು ಕುಗ್ಗಿಸುತ್ತಿರುವುದು ಸಾಮಾನ್ಯವಾಗಿದೆ.

ಪ್ರವಾಸೋದ್ಯಮ ಕ್ಷೇತ್ರದಲ್ಲಿ ವಿಶ್ವ ವ್ಯಾಪಿ ಗಮನ ಸೆಳೆದಿರುವ ನಗರ ದಾಂಡೇಲಿ. ಅಂದ ಹಾಗೆ ದಾಂಡೇಲಿ ನಗರ ಪೊಲೀಸ್ ಠಾಣೆಯ ಪಿಎಸ್ಐ ಅವರ ವಾಹನ ಮಾತ್ರ ಡಕೋಟ ಎಕ್ಸಪ್ರೆಸ್ ನಂತಿರುವುದು ಇಲಾಖೆಯ ಗೌರವಕ್ಕೆ ಚ್ಯುತಿ ಬಂದಂತಾಗಿದೆ. ಇಂದು ಮಂಗಳವಾರ ಲೋಕಸಭಾ ಚುನಾವಣೆಯ ಮತದಾನದ ಹಿನ್ನೆಲೆಯಲ್ಲಿ ಅತಿ ಜರೂರು ಕೆಲಸದ ನಿಮಿತ್ತ, ಹಳೆ ದಾಂಡೇಲಿಗೆ ಹೋಗುತ್ತಿರುವ ಸಂದರ್ಭದಲ್ಲಿ ವಾಹನ ನಡು ರಸ್ತೆಯಲ್ಲಿ ಕೆಟ್ಟು ನಿಂತಿದೆ. ತಕ್ಷಣವೇ ನಗರದ ಪಟೇಲ್ ವೃತ್ತದ ಸಮೀಪದಲ್ಲಿರುವ ಗ್ಯಾರೇಜಿನಲ್ಲಿ ದುರಸ್ತಿಗಾಗಿ ವಾಹನವನ್ನು ನಿಲ್ಲಿಸಲಾಗಿದೆ. ಸಮಸ್ಯೆಗಳಿಗೆ ತಡವರಿಯದೆ ಸ್ಪಂದಿಸುವ ಪೊಲೀಸ್ ವರಿಷ್ಠಾಧಿಕಾರಿಯಾಗಿ ಗಮನ ಸೆಳೆದಿರುವ ವಿಷ್ಣುವರ್ಧನ್ ಅವರು ದಾಂಡೇಲಿ ನಗರ ಠಾಣೆಯ ಪಿಎಸ್ಐ ಅವರಿಗೆ ಸುಸಜ್ಜಿತ ವಾಹನವನ್ನು ಕೊಡುವ ನಿಟ್ಟಿನಲ್ಲಿ ಅಗತ್ಯ ಕ್ರಮವನ್ನು ಕೈಗೊಳ್ಳಬೇಕಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next