Advertisement

PSI ಹಗರಣ: ಇಂದು ಎಚ್‌ಡಿಕೆ, ಯತ್ನಾಳ್‌ ವಿಚಾರಣೆ

12:52 AM Dec 27, 2023 | Team Udayavani |

ಬೆಂಗಳೂರು: ಪಿಎಸ್‌ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಅಥವಾ ಸಾಕ್ಷ್ಯಗಳಿದ್ದರೆ ಸಲ್ಲಿಸುವಂತೆ ಸೂಚಿಸಿ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ, ಮಾಜಿ ಡಿಸಿಎಂ ಡಾ| ಅಶ್ವತ್ಥನಾರಾಯಣ, ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹಾಗೂ ಮಾಜಿ ಶಾಸಕ ಬಸವರಾಜ ಧಡೆಸೂಗೂರು ಅವರಿಗೆ ಸಮನ್ಸ್‌ ಜಾರಿಗೊಳಿಸಲಾಗಿದೆ. ನ್ಯಾ| ಬಿ. ವೀರಪ್ಪ ನೇತೃತ್ವದ ವಿಚಾರಣ ಆಯೋಗವು ಬುಧವಾರ ವಿಚಾರಣೆಗೆ ಬರುವಂತೆ ಈ ನಾಯಕರಿಗೆ ತಿಳಿಸಿದೆ.

Advertisement

ಎಚ್‌.ಡಿ. ಕುಮಾರಸ್ವಾಮಿ, ಅಶ್ವತ್ಥ ನಾರಾಯಣ, ಯತ್ನಾಳ್‌, ಧಡೆಸೂಗೂರು ಮತ್ತಿತರು ನೇಮಕಾತಿ ಹಗರಣದ ಬಗ್ಗೆ ತಮ್ಮ ಬಳಿ ದಾಖಲೆಗಳಿವೆ ಎಂದು ಹೇಳಿಕೆ ನೀಡಿದ್ದರು. ಆ ಹಿನ್ನೆಲೆಯಲ್ಲಿ ಅವರನ್ನು ವಿಚಾರಣೆಗೆ ಕರೆಸಬೇಕು ಎಂದು ಆಯೋಗದ ಮುಂದೆ ಕೆಲವು ವಕೀಲರು ಮನವಿ ಸಲ್ಲಿಸಿ ಕೋರಿದ್ದರು. ಆ ಮನವಿಯನ್ನು ಆಯೋಗ ಪರಿಗಣಿಸಿದೆ.

“ವಕೀಲರು ಮನವಿ ಮಾಡಿಕೊಂಡಿದ್ದರು. ಅದರಂತೆ ಮಾಜಿ ಸಿಎಂ ಎಚ್‌.ಡಿ. ಕುಮಾರ ಸ್ವಾಮಿ, ಮಾಜಿ ಡಿಸಿಎಂ ಅಶ್ವತ್ಥನಾರಾಯಣ, ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌, ಮಾಜಿ ಶಾಸಕ ಬಸವರಾಜ ಧಡೆಸೂಗೂರು ಮತ್ತಿತರ ಕೆಲವು ರಾಜಕೀಯ ನಾಯಕರಿಗೆ ಸಮನ್ಸ್‌ ಜಾರಿಗೊಳಿಸಿ ತಮ್ಮ ಬಳಿ ಇರುವ ದಾಖಲೆ ಮತ್ತು ಸಾಕ್ಷ್ಯಗಳನ್ನು ಆಯೋಗಕ್ಕೆ ಸಲ್ಲಿಸಲು ಬುಧವಾರ ವಿಚಾರಣೆ ಬರುವಂತೆ ತಿಳಿಸ ಲಾಗಿದೆ. ಯತ್ನಾಳ್‌ ಅವರನ್ನು ಹೊರತುಪಡಿಸಿ ಉಳಿದವರಿಗೆ ಸಮನ್ಸ್‌ ತಲುಪಿದೆ. ಯತ್ನಾಳ್‌ ಅವರಿಗೆ ಪುನಃ ರಿಜಿಸ್ಟರ್‌ ಪೋಸ್ಟ್‌ ಮೂಲಕ ಸಮನ್ಸ್‌ ಜಾರಿಗೊಳಿಸಿ, ವಿಚಾರಣೆಗೆ ಬರಲು ದಿನಾಂಕ ನೀಡಲಾಗುವುದು’ ಎಂದು ನ್ಯಾ| ಬಿ. ವೀರಪ್ಪ “ಉದಯವಾಣಿ’ಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next