ಕಲಬುರಗಿ: ಪಿಎಸ್ಐ ನೇಮಕಾತಿಯ ಪರೀಕ್ಷೆಯಲ್ಲಿನ ಅಕ್ರಮಕ್ಕೆ ಸಂಬಂಧಿಸಿದಂತೆ ಮತ್ತೊಂದು ಎಫ್ ಐಆರ್ ದಾಖಲಾಗಿದ್ದು, ಇಲ್ಲಿನ ಸ್ಟೇಷನ್ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರದ ಮತ್ತೊಂದು ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ಬಯಲಿಗೆ ಬಂದಿದ್ದರಿಂದ ಪ್ರಕರಣ ದಾಖಲಾಗಿದ್ದು, ಜ್ಞಾನ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯಿಂದ ಮತ್ತೊಂದು ಸೆಂಟರ್ ನಲ್ಲಿ ನಡೆದ ಅಕ್ರಮ ಬಯಲು. ಕಲಬುರಗಿ ನಗರದ ಎಮ್ ಎಸ್ ಐ ಪರೀಕ್ಷಾ ಸೆಂಟರ್ ನಲ್ಲಿ ನಡೆದ ಪರೀಕ್ಷೆಯಲ್ಲಿ ಅಕ್ರಮ ಬಯಲು. ಅಕ್ರಮದಲ್ಲಿ ಭಾಗಿಯಾಗಿದ್ದ ಚಂದ್ರಕಾಂತ್ ಕುಲಕರ್ಣಿ ಸಿಐಡಿ ಪೊಲೀಸ್ ರು ವಶಕ್ಕೆ ಪಡೆದಿದ್ದಾರೆ.
ಚಂದ್ರಕಾಂತ್ ಕುಲಕರ್ಣಿ ಅಕ್ರಮ ಪರೀಕ್ಷೆಯ ಕಿಂಗ್ ಪಿನ್ ಆರ್ ಡಿ ಪಾಟೀಲ್ ಆಡಿಟರಾಗಿದ್ದಾರೆ.
ಎಮ್ ಎಸ್ ಐ ಪರೀಕ್ಷಾ ಕೇಂದ್ರದ ಅಕ್ರಮ ಬಯಲು ಹಿನ್ನಲೆಯಲ್ಲಿ ಮತ್ತೊಂದು ಪ್ರತ್ಯೇಕ ಎಫ್ ಐ ಆರ್ ದಾಖಲಾಗಿದೆ. ಕಲಬುರಗಿಯ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲು. ಸಿಐಡಿ ಡಿವೈಎಸ್ ಪಿ ಪ್ರಕಾಶ್ ರಾಠೋಡ್ ನೀಡಿದ ದೂರಿನವಮೇರೆಗೆ ಎಫ್ ಐ ಆರ್ ದಾಖಲಾಗಿದೆ. ಒಟ್ಟಾರೆ ಜ್ಷಾನಜ್ಯೋತಿ ಶಾಲೆ ನಂತರ ಈಗ ಎರಡನೇ ಎಫ್ ಐಆರ್ ದಾಖಲಾದಂತಾಗಿದೆ.
ಇದನ್ನೂ ಓದಿ : ರಾಜಕೀಯ ದ್ವೇಷ ಕೊಲೆಯಲ್ಲಿ ಅಂತ್ಯ : ಪ್ರಕರಣದ ಹಾದಿ ತಪ್ಪಿಸಲು ಮಾಡಿದ ತಂತ್ರವೇ ಮುಳುವಾಯಿತು