ಕಲಬುರಗಿ: ಪಿಎಸ್ಐ ನೇಮಕಾತಿ ಪರೀಕ್ಷೆಯ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ ತಂಡ ಬೇಟೆ ಮುಂದುವರೆಸಿದ್ದು, ಮತ್ತೊಬ್ಬ ಆರೋಪಿಯನ್ನು ಬಂಧಿಸಿದೆ.
ಎನ್.ವಿ. ಸುನೀಲ್ ಕುಮಾರ್ ಎಂಬಾತನನ್ನು ಬಂಧಿಸಲಾಗಿದ್ದು, ಈತ ಪರೀಕ್ಷೆ ಬರೆದು ಆಯ್ಕೆಯಾಗಿದ್ದ. ಈತನನ್ನು ಸಿಐಡಿ ತಂಡವು ಬೆಂಗಳೂರಿನಿಂದ ಕರೆದುಕೊಂಡು ಬಂದಿದೆ.
ಅಕ್ರಮ ಪರಿಕ್ಷೆಯ ಕಿಂಗ್ ಪಿನ್ ಆರ್.ಡಿ ಪಾಟೀಲ್ ಮುಖಾಂತರ ಬ್ಲೂಟೂತ್ ಬಳಸಿ ಸುನೀಲ ಪರೀಕ್ಷೆ ಬರೆದಿದ್ದ. ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಒಡೆತನದ ಜ್ಞಾನ ಜ್ಯೋತಿ ಆಂಗ್ಲ ಮಾದ್ಯಮ ಶಾಲೆಯಲ್ಲಿ ಬ್ಲೂಟೂತ್ ಬಳಸಿ ಪರೀಕ್ಷೆ ಬರೆದಿದ್ದ.
ಇದನ್ನೂ ಓದಿ:ಪ್ರಭು ಚೌಹಾಣ್ ಗೆ ನೀಡದ ನೋಟಿಸ್ ನನಗ್ಯಾಕೆ?; ಪ್ರಿಯಾಂಕ್ ಖರ್ಗೆ ಪ್ರಶ್ನೆ
ತಾತ್ಕಾಲಿಕ ಪಟ್ಟಿಯಲ್ಲಿ ಈತನ ಹೆಸರಿದೆ. ಈ ಹಿಂದೆ ಸಿಐಡಿ ತಂಡ ಆತನನ್ನು ಕರೆಯಿಸಿ ವಿಚಾರಣೆ ಮಾಡಿತ್ತು. ಒಟ್ಟಾರೆ ಈ ಬಂಧನದೊಂದಿಗೆ ಬಂಧಿತರ ಸಂಖ್ಯೆ 16ಕ್ಕೇರಿದೆ.